For Quick Alerts
  ALLOW NOTIFICATIONS  
  For Daily Alerts

  ಸೊನಾಲಿ ಪೋಗಟ್ ಕೊಲೆ ಪ್ರಕರಣಕ್ಕೆ ಭರ್ಜರಿ ಟ್ವಿಸ್ಟ್

  |

  ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಸಾವು ದಿನಕ್ಕೊಂದು ತಿರುವು ಪಡೆಯುತ್ತಿದೆ. ಸೊನಾಲಿ, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಆರಂಭದಲ್ಲಿ ವರದಿಯಾಗಿತ್ತು. ಆದರೆ ಅವರ ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಸಾವಿನ ಬಗ್ಗೆ ಹಲವು ಅನುಮಾನಗಳು ಎದ್ದಿದ್ದವು.

  ಆರಂಭದಲ್ಲಿ ಅನೈಸರ್ಗಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಗೋವಾ ಪೊಲೀಸರು ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರಲ್ಲದೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  ಸೊನಾಲಿ, ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ದೇಹದ ಮೇಲೆ ಕೆಲವು ಗಾಯಗಳಾಗಿದ್ದುದನ್ನು ವೈದ್ಯರು ಗುರುತಿಸಿದ್ದಾರೆ. ಅಲ್ಲದೆ, ಸಾವಿಗೆ ಕೆಲವು ಗಂಟೆಗಳ ಮುಂದೆ ಸೊನಾಲಿ ಪಬ್‌ ಒಂದರಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಒಂದು ಸಹ ವೈರಲ್ ಆಗಿದೆ. ಇವುಗಳ ಆಧಾರದಲ್ಲಿ ಗೋವಾ ಪೊಲೀಸರು ತನಿಖೆ ಪ್ರಾರಂಭಿಸಿದ್ದು, ಕೆಲವು ಆಘಾತಕಾರಿ ಅಂಶಗಳು ಹೊರಬಿದ್ದಿವೆ.

  ಸಾವಿಗೆ ಮುನ್ನ ಸೊನಾಲಿಗೆ ಮಾದಕ ವಸ್ತು ನೀಡಲಾಗಿತ್ತು ಎನ್ನಲಾಗಿದೆ. ಸೊನಾಲಿಯ ಇಬ್ಬರು ಸಹಾಯಕರಾದ ಸುಧೀರ್ ಸಾಂಗ್ವಾನ್ ಹಾಗೂ ಸಖ್ವೀಂದರ್ ವಾಸಿ ಅವರುಗಳನ್ನು ಪೊಲೀಸರು ಬಂಧಿಸಿದ್ದು, ಸೊನಾಲಿಗೆ ತಾವು, ಡ್ರಗ್ಸ್ ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಸಾವಿಗೆ ಕೆಲವು ಗಂಟೆಗಳ ಮುಂಚೆ ಸೊನಾಲಿ ಪಾರ್ಟಿ ಮಾಡಿದ್ದ ಗೋವಾದ ಕ್ಲಬ್ ಮಾಲೀಕನೇ ತಮಗೆ ಡ್ರಗ್ಸ್ ಮಾರಾಟ ಮಾಡಿದ್ದಾಗಿಯೂ ಅವರು ಹೇಳಿದ್ದಾರೆ. ಇದೀಗ ಕ್ಲಬ್ ಮಾಲೀಕನನ್ನೂ ಪೊಲೀಸರು ಬಂಧಿಸಿದ್ದಾರೆ.

  ಗೋವಾದ ಐಶಾರಾಮಿ ಕ್ಲಬ್‌ನಲ್ಲಿ ಸೊನಾಲಿ ಪಾರ್ಟಿ ಮಾಡಿದ್ದರು, ಆಗ ನೀರಿನಲ್ಲಿ ಮಾದಕ ವಸ್ತುವನ್ನು ಬೆರೆಸಿ ಸೊನಾಲಿಗೆ ಅವರ ಅಸಿಸ್ಟೆಂಟ್‌ಗಳು ನೀಡಿದರು. ಅದಾದ ಬಳಿಕ ಸೊನಾಲಿಗೆ ನಡೆಯಲು ಸಹ ಸಾಧ್ಯವಾಗಲಿಲ್ಲ. ನಂತರ ಅವರೇ ಆಕೆಯನ್ನು ಗ್ರ್ಯಾಂಡ್ ಲಿಯೋನಿ ಹೋಟೆಲ್‌ಗೆ ಕರೆದೊಯ್ದರು. ಅಲ್ಲಿಯೇ ಅವರು ಸ್ಟೇ ಆಗಿದ್ದರು. ನಂತರ ಮಾರನೇಯ ದಿನ ಆಕೆಯನ್ನು ಸೇಂಟ್ ಆಂಥೊನಿ ಆಸ್ಪತ್ರೆಗೆ ದಾಖಲಿಸಲಾಯ್ತು. ಆದರೆ ಆಕೆ ಆ ವೇಳೆಗಾಗಲೆ ನಿಧನ ಹೊಂದಿದ್ದರು.

  ಆದರೆ ಸೊನಾಲಿ ಪೋಗಟ್‌ರ ಸಹೋದರ ಬೇರೆಯದೇ ವಿಷಯ ಹೇಳುತ್ತಿದ್ದು, ಇದೀಗ ವೈರಲ್ ಆಗಿರುವ ಪಾರ್ಟಿ ವಿಡಿಯೋ ಗೋವಾದಲ್ಲ, ಅದು ಗುರುಗ್ರಾಮದ್ದು, ಕೆಲವು ತಿಂಗಳು ಹಿಂದಿನ ವಿಡಿಯೋ ಅದು. ಸೊನಾಲಿ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಲೆಂದು ಈಗ ಆ ವಿಡಿಯೋ ಹರಿಬಿಡಲಾಗಿದೆ ಎಂದಿದ್ದಾರೆ.

  English summary
  Sonali Phogat death case taking new turns every day. Now police found that she was given drugs before she died.
  Saturday, August 27, 2022, 15:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X