ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸೋನಾಲಿ ಮುಖದಲ್ಲಿ ನಗು ತಂದ ಪ್ರಿಯಾಂಕಾ
Recommended Video

ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಇತ್ತೀಚಿಗಷ್ಟೆ ಚಿಕಿತ್ಸೆಗಾಗಿ ತಮ್ಮ ತಲೆ ಕೂದಲನ್ನು ಸಂಪೂರ್ಣವಾಗಿ ಶೇವ್ ಮಾಡಿದ್ದರು. ಕ್ಯಾನ್ಸರ್ ಚಿಕಿತ್ಸೆ ಸಮಯದಲ್ಲಿ ಕೂದಲು ಉದುರಲು ಆರಂಭವಾಗಿತ್ತದೆ. ಅದಕ್ಕೂ ಮುನ್ನವೇ ಸೋನಾಲಿ ತಮ್ಮ ತಲೆಯಲ್ಲಿನ ಸಂಪೂರ್ಣ ಕೂದಲನ್ನು ತೆಗೆದು ಹಾಕಿದ್ದರು.
ಬೋಡು ಮಾಡಿಸಿಕೊಂಡಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಅಷ್ಟೇ ಅಲ್ಲದೆ ಸ್ನೇಹಿತರ ದಿನಾಚರಣೆಯನ್ನು ಅದೇ ಲುಕ್ ನಲ್ಲಿ ಆಚರಣೆ ಮಾಡಿಕೊಂಡಿದ್ದರು.

ಬೆಳ್ಳಿ ತೆರೆ ಮೇಲೆ ಸಪೂರ ಸುಂದರಿಯಾಗಿ ನೀಳ ಕೇಶದಿಂದಲೇ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದ ಸೋನಾಲಿ ಬೇಂದ್ರೆ ಅವರನ್ನು ಕೂದಲಿಲ್ಲದೆ ನೋಡಲು ಅಭಿಮಾನಿಗಳು ಕೂಡ ಬೇಸರ ಪಟ್ಟಿಕೊಳ್ಳುತ್ತಿದ್ದರು. ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡಾಗ ನೊಂದುಕೊಳ್ಳುತ್ತಿದ್ದ ಸೋನಾಲಿ ಮುಖದಲ್ಲಿ ನಟಿ ಪ್ರಿಯಾಂಕಾ ಚೋಪ್ರ ನಗು ತಂದಿದ್ದಾರೆ.

ಸೋನಾಲಿ ಬೇಂದ್ರೆ ಪ್ರಿಯಾಂಕಾ ಚೋಪ್ರಾ ಸಲಹೆಯಿಂದ ಮೊದಲಿನಂತೆಯೇ ಸುಂದರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಸೋನಾಲಿ ವಿಗ್ ಬಳಸಲು ಶುರು ಮಾಡಿದ್ದಾರೆ. ಈ ಬಗ್ಗೆ ಸೋನಾಲಿ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಫೋಟೋವನ್ನು ಹಾಕಿಕೊಂಡಿದ್ದಾರೆ. ಹಾಗೇ ವಿಗ್ ಕೊಳ್ಳಲು ಸಹಾಯ ಮಾಡಿದ ಪ್ರಿಯಾಂಕ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಅಂದ್ಹಾಗೆ ಸೋನಾಲಿ ಇನ್ನು ಕೆಲವೇ ದಿನಗಳಲ್ಲಿ ಕ್ಯಾನ್ಸರ್ ಜೊತೆ ಹೋರಾಟ ಮಾಡಿ ಗೆದ್ದು ಬರಲಿದ್ದಾರೆ.


Click it and Unblock the Notifications











