For Quick Alerts
  ALLOW NOTIFICATIONS  
  For Daily Alerts

  #10Years ಚಾಲೆಂಜ್ ಸ್ವೀಕರಿಸಿದ ತಾರೆಯರು: ಹತ್ತು ವರ್ಷಗಳ ಹಿಂದೆ ಇವರೆಲ್ಲ ಹೇಗಿದ್ರು.?

  |

  ಸೆಲೆಬ್ರಿಟಿಗಳಂತೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುತ್ತಾರೆ. ದಿನಕ್ಕೊಂದು ಫೋಟೋ, ವಿಡಿಯೋ ಶೇರ್ ಮಾಡುವ ಮೂಲಕ ಅಭಿಮಾನಿಗಳ ಜೊತೆಗೆ ಒಡನಾಟ ಇಟ್ಟುಕೊಂಡಿರುತ್ತಾರೆ. ಅಲ್ಲದೇ, ಫೇಸ್ ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ನಲ್ಲಿ ನಡೆಯುವ ತರಹೇವಾರಿ ಚಾಲೆಂಜ್ ಗಳನ್ನೂ ಸ್ವೀಕರಿಸಿ ಸೈ ಎನಿಸಿಕೊಳ್ಳುತ್ತಾರೆ.

  #HumFitTohIndiaFit ಚಾಲೆಂಜ್, #IceBucket ಚಾಲೆಂಜ್, #KiKi ಚಾಲೆಂಜ್ ಸೇರಿದಂತೆ ಹಲವಾರು ಚಾಲೆಂಜ್ ಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿರುವುದನ್ನ ನೀವು ಗಮನಿಸಿರಬಹುದು.

  ಹಾಗೇ, ಇಂದು ದಿಢೀರ್ ಅಂತ #10Years ಚಾಲೆಂಜ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಇದರ ಸೃಷ್ಟಿಕರ್ತ ಯಾರು.? ಚಾಲೆಂಜ್ ಹಿಂದಿನ ಉದ್ದೇಶ ಏನು ಎಂಬುದು ಯಾರಿಗೂ ಸ್ಪಷ್ಟವಾಗಿ ಗೊತ್ತಿಲ್ಲ. ಆದ್ರೆ, ಹತ್ತು ವರ್ಷಗಳ ತಮ್ಮ ಹಿಂದಿನ ಫೋಟೋ ಮತ್ತು ಇಂದಿನ ಫೋಟೋವನ್ನ ಹಂಚಿಕೊಂಡು ತಾರೆಯರು ಮಾತ್ರ ಖುಷಿ ಪಡುತ್ತಿದ್ದಾರೆ.

  ಬನ್ನಿ ಹಾಗಾದ್ರೆ, #10Years ಚಾಲೆಂಜ್ ನ ಯಾರ್ಯಾರು ಸ್ವೀಕರಿಸಿದ್ದಾರೆ. ಯಾವೆಲ್ಲ ಫೋಟೋಗಳನ್ನು ಶೇರ್ ಮಾಡಿದ್ದಾರೆ ಅಂತ ನೋಡಿಕೊಂಡು ಬರೋಣ. ಮುಂದೆ ಓದಿರಿ...

  ಬಿಪಾಶಾ ಬದಲಾಗಿದ್ದಾರಾ.?

  ಬಿಪಾಶಾ ಬದಲಾಗಿದ್ದಾರಾ.?

  2008 ರಲ್ಲಿ ಬಾಲಿವುಡ್ ನಟಿ ಬಿಪಾಶಾ ಬಸು ಬಳ್ಳಿಯಂತೆ ಬಳುಕುತ್ತಿದ್ದರು. ಹಾಗಂತ ಈಗ ಅವರಿಗೆ ವಯಸ್ಸಾಗಿದೆ ಅಂತಲ್ಲ. ಈಗಲೂ ಬಿಪಾಶಾ ಬಸು ಯಾರಿಗೇನೂ ಕಮ್ಮಿ ಇಲ್ಲ. ಹತ್ತು ವರ್ಷಗಳ ಹಿಂದೆ ಆಕೆ ಹೇಗಿದ್ರೋ, ಇವತ್ತಿಗೂ ಹಾಗೇ ಇದ್ದಾರೆ. ಅದಕ್ಕೆ ಬಿಪಾಶಾ ಶೇರ್ ಮಾಡಿರುವ ಈ ಫೋಟೋನೇ ಸಾಕ್ಷಿ.

  ಅಂದು ಹಾಗೆ, ಇಂದು ಹೀಗೆ.!

  ಅಂದು ಹಾಗೆ, ಇಂದು ಹೀಗೆ.!

  #10Years ಚಾಲೆಂಜ್ ಸ್ವೀಕರಿಸಿದ ಬಾಲಿವುಡ್ ನಟಿ ಸೋನಂ ಕಪೂರ್ ಅಂದಿನ 'ಡೆಲ್ಲಿ 6' ಚಿತ್ರದ ಫೋಟೋ ಹಾಗೂ ಇಂದಿನ 'ಏಕ್ ಲಡಕಿ ಕೋ ದೇಖಾ ತೋ ಐಸಾ ಲಗಾ' ಚಿತ್ರದ ಫೋಟೋವನ್ನ ಹಂಚಿಕೊಂಡಿದ್ದಾರೆ. ಸೋನಂ ಕೊಂಚ ಕೂಡ ಬದಲಾಗಿಲ್ಲ. ಅಲ್ವಾ.?

  27 ಮತ್ತು 37

  27 ಮತ್ತು 37

  ಬಾಲಿವುಡ್ ನಟಿ ದಿಯಾ ಮಿರ್ಜಾಗೆ ಸದ್ಯ 37 ವರ್ಷ ವಯಸ್ಸು. ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿರುವ ದಿಯಾ ಮಿರ್ಜಾ 27 ವರ್ಷವಿದ್ದಾಗ ಹೇಗಿದ್ದರು ಗೊತ್ತಾ.? ಈ ಫೋಟೋ ನೋಡಿ...

  ಕೆಲವು ಬದಲಾಗಲ್ಲ.!

  ಕೆಲವು ಬದಲಾಗಲ್ಲ.!

  ಹತ್ತು ವರ್ಷಗಳು ಉರುಳಿರಬಹುದು. ದೈಹಿಕವಾಗಿ ಬದಲಾಗಿರಬಹುದು. ಆದರೆ, ಬ್ಲಾಕ್ ಅಂಡ್ ವೈಟ್ ಫಿಲ್ಟರ್ ಮಾತ್ರ ಬದಲಾಗಿಲ್ಲ ಎಂದು ತಮ್ಮ ಬ್ಲಾಕ್ ಅಂಡ್ ಫೈಟ್ ಫೋಟೋವನ್ನ ಬಾಲಿವುಡ್ ನಟಿ ಡಯಾನ ಪೆಂಟಿ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.

  ಅಬ್ಬಾ.. ಎಷ್ಟೊಂದು ಬದಲಾವಣೆ.!

  ಅಬ್ಬಾ.. ಎಷ್ಟೊಂದು ಬದಲಾವಣೆ.!

  ಇಂದು ಕಾಲಿವುಡ್, ಬಾಲಿವುಡ್ ಮತ್ತು ಟಾಲಿವುಡ್ ನಲ್ಲಿ ನಟಿ ಶ್ರುತಿ ಹಾಸನ್ ಬೇಡಿಕೆ ಕಂಡುಕೊಂಡಿದ್ದಾರೆ. ಇದೇ ಶ್ರುತಿ ಹಾಸನ್ ಹತ್ತು ವರ್ಷಗಳ ಹಿಂದೆ ಹೇಗಿದ್ರು ಅಂತ ನೀವೇ ನೋಡಿಬಿಡಿ..

  ಇನ್ನೂ ಹುಡುಗ.!

  ಇನ್ನೂ ಹುಡುಗ.!

  ಖ್ಯಾತ ಗಾಯಕ ಅರ್ಮಾನ್ ಮಲಿಕ್ ಗೆ ಸದ್ಯ ಸ್ಯಾಂಡಲ್ ವುಡ್ ನಲ್ಲೂ ಸಿಕ್ಕಾಪಟ್ಟೆ ಬೇಡಿಕೆ ಇದೆ. ಮಧುರ ಗಾನಗಳಿಗೆ ದನಿಯಾಗುತ್ತಿರುವ ಅರ್ಮಾನ್ ಮಲಿಕ್ ರವರ ಹತ್ತು ವರ್ಷಗಳ ಹಿಂದಿನ ಫೋಟೋ ಇಲ್ಲಿದೆ.

  English summary
  Bollywood Actress Sonam Kapoor, Bipasha Basu and others take #10years challenge on Instagram.
  Thursday, January 17, 2019, 13:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X