For Quick Alerts
  ALLOW NOTIFICATIONS  
  For Daily Alerts

  'ಈದ್ ಮುಬಾರಕ್' ಪೋಸ್ಟ್ ಹಾಕಿ ಟ್ರೋಲ್ ಆದ ಸೋನಮ್ ಕಪೂರ್: ನಟಿಯ ಪ್ರತಿಕ್ರಿಯೆ ಹೀಗಿದೆ

  |

  ಸೆಲೆಬ್ರಿಟಿಗಳು ಆಗಾಗ ಟ್ರೋಲಿಗರಿಗೆ ಆಹಾರವಾಗುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಫೋಟೋ, ಕಾಮೆಂಟ್, ಉಡುಪು ಹೀಗೆ ನಾನಾವಿಚಾರಗಳಿಗೂ ಟ್ರೋಲಿಗರು ಕಾಲೆಳೆಯುತ್ತಿರುತ್ತಾರೆ. ಇದೀಗ ಬಾಲಿವುಡ್ ನಟಿ ಸೋನಮ್ ಕಪೂರ್ ರಂಜಾನ್ ಹಬ್ಬಕ್ಕೆ ವಿಶ್ ಮಾಡಿ ಟ್ರೋಲಿಗೆ ಗುರಿಯಾಗಿದ್ದಾರೆ.

  ನಿನ್ನೆ (ಮೇ 14) ಮುಸ್ಲಿಂರ ಪವಿತ್ರ ಹಬ್ಬ ರಂಜಾನ್. ಮುಸ್ಲಿಂ ಬಾಂಧವರು ಶುಭಾಶಯ ವಿನಿಮಯ ಮಾಡಿಕೊಂಡಿದರು. ಅನೇಕ ಸೆಲೆಬ್ರಿಟಿಗಳು ಸಹ ಮುಸ್ಲಿಂ ಅಭಿಮಾನಿಗಳಿಗೆ, ಸ್ನೇಹಿತರಿಗೆ ಈದ್ ಮುಬಾರಕ್ ಶುಭಾಶಯ ತಿಳಿಸಿದರು. ಬಾಲಿವುಡ್ ನಟಿ ಸೋನಮ್ ಕಪೂರ್ ಸಹ ಈದ್ ಮುಬಾರಕ್ ಎಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದರು.

  ದಕ್ಷಿಣ ಭಾರತ ಸಿನಿಮಾರಂಗದೆಡೆ ಮುಖ ಮಾಡಿದ ಬಾಲಿವುಡ್ ಖ್ಯಾತ ನಟಿ?ದಕ್ಷಿಣ ಭಾರತ ಸಿನಿಮಾರಂಗದೆಡೆ ಮುಖ ಮಾಡಿದ ಬಾಲಿವುಡ್ ಖ್ಯಾತ ನಟಿ?

  ಸೋನಮ್ ನಟನೆಯ ಚೊಚ್ಚಲ ಸಿನಿಮಾ ಸಾವರಿಯ ಚಿತ್ರದ ಹಾಡಿನ ಕ್ಲಿಪಿಂಗ್ ಹಂಚಿಕೊಳ್ಳುವ ಮೂಲಕ 'ನನ್ನ ಸಹೋದರ ಸಹೋದರಿಯರಿಗೆ ಈದ್ ಮುಬಾರಕ್' ಎಂದು ಶುಭಾಶಯ ತಿಳಿಸಿದರು. ಸೋನಮ್ ಶೇರ್ ಮಾಡಿರುವ ಹಾಡಿಗೆ ಅನೇಕರು ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ. ತುಂಬಾ ಇಷ್ಟಪಡುವ ಹಾಡುಗಳಲ್ಲಿ ಒಂದಾಗಿದೆ ಎಂದು ಹೇಳಿದರು.

  ಆದರೆ ಸೋನಮ್ ಈ ಪೋಸ್ಟ್ ಕೆಲವರಿಗೆ ಇಷ್ಟವಾದಂತೆ ಕಾಣುತ್ತಿಲ್ಲ. ಟ್ರೋಲಿಗನೊಬ್ಬ ಕಾಮೆಂಟ್ ಮಾಡಿ 'ಈ ಪೋಸ್ಟ್ ಹಾಕಲು ಎಷ್ಟು ಹಣ ಪಡೆದಿದ್ದೀರಿ?' ಎಂದು ಪ್ರಶ್ನೆ ಮಾಡಿದ್ದಾನೆ.

  ಟ್ರೋಲಿಗನ ಪ್ರಶ್ನೆಯನ್ನು ಕೂಲ್ ಆಗಿಯೇ ಸ್ವೀಕರಿಸಿದ ಸೋನಮ್, ಬೆದರಿಸುವಿಕೆ ಮತ್ತು ಕಿರುಕುಳದ ಆರೋಪದ ಮೇಲೆ ಟ್ರೋಲ್ ಅನ್ನು ವರದಿ ಮಾಡಿದರು. ಬಳಿಕ ಕಾಮೆಂಟ್ ಮಾಡಿದ ವ್ಯಕ್ತಿಯನ್ನು ಇನ್ಸ್ಟಾಗ್ರಾಮ್ ಬ್ಲಾಕ್ ಮಾಡಿದೆ. ಬ್ಲಾಕ್ ಆಗಿರುವ ಖಾತೆಯ ಸ್ಟ್ರೀನ್ ಶಾಟ್ ಶೇರ್ ಮಾಡಿ 'ಇದು ನನಗೆ ತುಂಬಾ ತೃಪ್ತಿದಾಯಕವಾಗಿದೆ' ಎಂದು ಸೋನಮ್ ಪ್ರತಿಕ್ರಿಯೆ ನೀಡಿದ್ದಾರೆ.

  ರಾಧೆ ಸಿನಿಮಾವನ್ನು ಪ್ರಭುದೇವ ಹಾಳು ಮಾಡಿದ್ದಾರೆ ಅಂದ್ರು ನಟಿ ಶ್ರೀರೆಡ್ಡಿ | Filmibeat Kannada

  ಸೋನಮ್ ಪ್ರತಿಕ್ರಿಯೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ರೋಲ್ ಗಳನ್ನು ಕೂಲ್ ಆಗಿಯೇ ನಿಭಾಯಿಸುವ ರೀತಿಗೆ ಸೋನಮ್ ಬಾಲಿವುಡ್ ಮಂದಿ ಸಹ ಫಿದಾ ಆಗಿದ್ದಾರೆ.

  English summary
  Actress Sonam Kapoor block troll who asks how much she got paid for Ed post.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X