ಸೋನಂ ಕಪೂರ್ ವಿರುದ್ಧ ಗರಂ ಆದ ದೀಪಿಕಾ ಪಡುಕೋಣೆ ಅಭಿಮಾನಿಗಳು.!

By Harshitha

ಸೋನಂ ಕಪೂರ್ ಗೂ ದೀಪಿಕಾ ಪಡುಕೋಣೆಗೂ ಆಗ್ಬರಲ್ಲ ಎಂಬ ವಿಷಯ ಬಾಲಿವುಡ್ ನಲ್ಲಿ ಹೊಸದೇನೂ ಅಲ್ಲ ಬಿಡಿ. ದೀಪಿಕಾ ಪಡುಕೋಣೆ ಬಗ್ಗೆ ಈ ಹಿಂದೆ 'ಕ್ಲಾಸ್ ಲೆಸ್' ಅಂತ ಕಾಮೆಂಟ್ ಮಾಡಿದ್ದ ಸೋನಂ ಕಪೂರ್ ಇದೀಗ ಮತ್ತೆ ಇನ್ಸ್ಟಾಗ್ರಾಮ್ ನಲ್ಲಿ ಒಂದು ಎಡವಟ್ಟು ಮಾಡಿ ದಿಪ್ಪಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸೋನಂ ಕಪೂರ್ ಅಭಿನಯದ 'ಪ್ಯಾಡ್ ಮ್ಯಾನ್' ಚಿತ್ರ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 'ಪ್ಯಾಡ್ ಮ್ಯಾನ್' ಚಿತ್ರದ ಪರವಾಗಿ ಹಾಗೂ ಮಹಿಳೆಯರ ಆರೋಗ್ಯದ ಬಗ್ಗೆ ಸಂದೇಶ ಸಾರಲು ಬಾಲಿವುಡ್ ಸ್ಟಾರ್ ಗಳು ಸ್ಯಾನಿಟರಿ ಪ್ಯಾಡ್ ಹಿಡಿದು ಪೋಸ್ ಕೊಟ್ಟಿದ್ದು, ವಿಡಿಯೋ ಮಾಡಿದ್ದು ನಿಮಗೆ ನೆನಪಿರಬಹುದು.

ಸೋನಂ ಕಪೂರ್ ಕಂಡ್ರೆ ಅಷ್ಟಕಷ್ಟೆ ಅಂತಿದ್ದರೂ, 'ಪ್ಯಾಡ್ ಮ್ಯಾನ್' ಗಾಗಿ ಸ್ಯಾನಿಟರಿ ಪ್ಯಾಡ್ ಹಿಡಿದು ದೀಪಿಕಾ ಪಡುಕೋಣೆ ಒಂದು ವಿಡಿಯೋ ಮಾಡಿದ್ದರು. ಆ ವಿಡಿಯೋ 'ಪ್ಯಾಡ್ ಮ್ಯಾನ್' ರಿಲೀಸ್ ಟೈಮ್ ನಲ್ಲಿ ಸೋನಂ ಕಪೂರ್ ಇನ್ಸ್ಟಾಗ್ರಾಮ್ ನಲ್ಲೂ ಶೇರ್ ಆಗಿತ್ತು. ಈಗ ಅದೇ ದೀಪಿಕಾ ಪಡುಕೋಣೆ ವಿಡಿಯೋ ಸೋನಂ ಕಪೂರ್ ಇನ್ಸ್ಟಾಗ್ರಾಮ್ ನಿಂದ ಡಿಲೀಟ್ ಆಗಿದೆ. ಇದು ದೀಪಿಕಾ ಪಡುಕೋಣೆ ಅಭಿಮಾನಿಗಳನ್ನ ಕೆರಳಿಸಿದೆ. ಮುಂದೆ ಓದಿರಿ...

ಅಭಿಮಾನಿಗಳೇ ಕಂಡು ಹಿಡಿದಿದ್ದಾರೆ.!

ಅಭಿಮಾನಿಗಳೇ ಕಂಡು ಹಿಡಿದಿದ್ದಾರೆ.!

ಸೋನಂ ಕಪೂರ್ ಅವರ ಇನ್ಸ್ಟಾಗ್ರಾಮ್ ನಿಂದ ದೀಪಿಕಾ ಪಡುಕೋಣೆ ಮಾಡಿದ್ದ ಪ್ಯಾಡ್ ಮ್ಯಾನ್ ಚಾಲೆಂಜ್ ವಿಡಿಯೋ ಡಿಲೀಟ್ ಆಗಿರುವ ಸಂಗತಿಯನ್ನ ಅಭಿಮಾನಿಗಳೇ ಕಂಡು ಹಿಡಿದಿದ್ದಾರೆ.

ಸೋನಂಗೆ ಪ್ರಶ್ನೆ

ಸೋನಂಗೆ ಪ್ರಶ್ನೆ

''ದೀಪಿಕಾ ಪಡುಕೋಣೆ ಅವರ ಪ್ಯಾಡ್ ಮ್ಯಾನ್ ಚಾಲೆಂಜ್ ವಿಡಿಯೋನ ಡಿಲೀಟ್ ಮಾಡಿದ್ದು ಯಾಕೆ.? ದೀಪಿಕಾ ಮೇಲಿನ ಅಸೂಯೆ, ಹೊಟ್ಟೆ ಕಿಚ್ಚಿನಿಂದ ಹೀಗೆ ಮಾಡಿದ್ರಾ.? ದೀಪಿಕಾ ಬಾಲಿವುಡ್ ನ ಕ್ವೀನ್. ಆ ಸ್ಥಾನವನ್ನ ನೀವು (ಸೋನಂ) ತಲುಪಲು ಸಾಧ್ಯವೇ ಇಲ್ಲ'' ಅಂತ ಕೆಲವರು ಸೋನಂ ಕಪೂರ್ ಇನ್ಸ್ಟಾಗ್ರಾಮ್ ನಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಅಸೂಯೆ ಕಾಣುತ್ತಿದೆ

ಅಸೂಯೆ ಕಾಣುತ್ತಿದೆ

''ಈ ನಗುವಿನ ಹಿಂದೆ ದೀಪಿಕಾ ಪಡುಕೋಣೆ ಅಭಿಮಾನಿಗಳಿಗೆ ಅಸೂಯೆ, ಅಭದ್ರತೆ ಕಾಣುತ್ತಿದೆ'' ಎಂದು ದಿಪ್ಪಿ ಫ್ಯಾನ್ಸ್ ಅಭಿಪ್ರಾಯ ಪಟ್ಟಿದ್ದಾರೆ.

ಕಾರಣ ಏನು.?

ಕಾರಣ ಏನು.?

''ಪ್ರತಿ ಬಾರಿ ದೀಪಿಕಾ ಪಡುಕೋಣೆ ಮೇಲೆ ನಿಮಗೆ ಅಸೂಯೆ ಏಕೆ'' ಎಂದು ಸೋನಂಗೆ ದೀಪಿಕಾ ಫ್ಯಾನ್ಸ್ ಪ್ರಶ್ನೆ ಮಾಡುತ್ತಿದ್ದಾರೆ.

ಸೋನಂನ ಅನ್ ಫಾಲೋ ಮಾಡಿ

ಸೋನಂನ ಅನ್ ಫಾಲೋ ಮಾಡಿ

ಕೂಡಲೆ ಸೋನಂ ಕಪೂರ್ ನ ಇನ್ಸ್ಟಾಗ್ರಾಮ್ ನಲ್ಲಿ ಅನ್ ಫಾಲೋ ಮಾಡಿ ಅಂತ ದೀಪಿಕಾ ಪಡುಕೋಣೆಗೆ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

More from Filmibeat

English summary
Bollywood Actress Sonam Kapoor deletes Deepika Padukone padman video on Instagram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X