For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟಿ ಸೋನಂ ಕಪೂರ್ ಗೆ 'ಭಯಾನಕ ಅನುಭವ': ಕಾರಣ ಊಬರ್.!

  |

  ವಿಶ್ವದ ಅತಿ ದೊಡ್ಡ ಟ್ಯಾಕ್ಸಿ ಸೇವೆ ಸಂಸ್ಥೆ ಊಬರ್ ಮೇಲೆ ಬಾಲಿವುಡ್ ನಟಿ ಸೋನಂ ಕಪೂರ್ ಮುನಿಸಿಕೊಂಡಿದ್ದಾರೆ. ಲಂಡನ್ ನಲ್ಲಿ ಊಬರ್ ಸೇವೆ ಬಳಸಿದ ಸೋನಂ ಕಪೂರ್ ಗೆ ಭಯಾನಕ ಅನುಭವ ಆಗಿದೆ. ಊಬರ್ ಚಾಲಕನ ವರ್ತನೆಯಿಂದ ಸೋನಂ ಕಪೂರ್ ಬೆಚ್ಚಿ ಬಿದ್ದಿದ್ದಾರೆ.

  ಈ ಬಗ್ಗೆ ಟ್ವಿಟ್ಟರ್ ನಲ್ಲಿ ಸೋನಂ ಕಪೂರ್, ''ಲಂಡನ್ ನ ಊಬರ್ ನಿಂದ ನನಗೆ ಭಯಾನಕ ಅನುಭವ ಆಗಿದೆ. ದಯವಿಟ್ಟು ಎಲ್ಲರೂ ಜಾಗರೂಕರಾಗಿರಿ. ಸಾರ್ವಜನಿಕ ಸಾರಿಗೆ ಸೇವೆಯನ್ನು ಬಳಸುವುದೇ ಉತ್ತಮ. ನಾನಂತೂ ನಡುಗಿ ಹೋಗಿದ್ದೇನೆ'' ಎಂದು ಬರೆದುಕೊಂಡಿದ್ದಾರೆ.

  ಅಷ್ಟಕ್ಕೂ, ಊಬರ್ ಚಾಲಕನಿಂದ ಸೋನಂ ಕಪೂರ್ ಗೆ ಆದ ಸಮಸ್ಯೆ ಏನು ಅಂತ ಕೇಳಿದರೆ, ಅದಕ್ಕೂ ಸೋನಂ ಕಪೂರ್ ಟ್ವೀಟ್ ಮೂಲಕವೇ ಉತ್ತರ ಕೊಟ್ಟಿದ್ದಾರೆ.

  ಊಬರ್ ಚಾಲಕನಿಂದ ನಶೆಯಲ್ಲಿದ್ದ ಮಹಿಳಾ ಪ್ಯಾಸೆಂಜರ್ ಮೇಲೆ ಅತ್ಯಾಚಾರ

  ''ಚಾಲಕನ ವರ್ತನೆ ಸರಿ ಇರಲಿಲ್ಲ. ಆತ ಕಿರುಚಾಡುತ್ತಿದ್ದ. ಕೊನೆಯಲ್ಲಿ ನಾನು ನಡುಗುತ್ತಿದ್ದೆ'' ಎಂದು ಸೋನಂ ಕಪೂರ್ ಟ್ವೀಟ್ ಮಾಡುತ್ತಿದ್ದಂತೆಯೇ, ಆಕೆಗೆ ಊಬರ್ ಸಂಸ್ಥೆ ಟ್ವೀಟ್ ಮುಖಾಂತರ ಕ್ಷಮೆ ಕೋರಿ ಘಟನೆಯ ವಿವರಣೆಯನ್ನು ಕೇಳಿದೆ.

  ಲೈಂಗಿಕ ಕಿರುಕುಳ ಪ್ರಕರಣ : ಕಂಗನಾ ಮತ್ತು ಸೋನಮ್ ಮಧ್ಯೆ ಡೈಲಾಗ್ ವಾರ್ಲೈಂಗಿಕ ಕಿರುಕುಳ ಪ್ರಕರಣ : ಕಂಗನಾ ಮತ್ತು ಸೋನಮ್ ಮಧ್ಯೆ ಡೈಲಾಗ್ ವಾರ್

  ಆಗ, ''ಆಪ್ ಮೂಲಕವೇ ದೂರು ಕೊಡಲು ಪ್ರಯತ್ನಿಸಿದೆ. ಆದ್ರೆ, ಸಾಧ್ಯವಾಗಲಿಲ್ಲ. ನೀವು ನಿಮ್ಮ ಸಿಸ್ಟಮ್ ನ ಅಪ್ ಡೇಟ್ ಮಾಡಿಕೊಳ್ಳಿ. ಡ್ಯಾಮೇಜ್ ಆಗಿ ಹೋಗಿದೆ. ಈಗೇನು ನೀವು ಮಾಡಲು ಸಾಧ್ಯವಿಲ್ಲ'' ಅಂತ ಊಬರ್ ವಿರುದ್ಧ ಸೋನಂ ಕಪೂರ್ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

  ಸೋನಂ ಕಪೂರ್ ರವರ ಈ ಟ್ವೀಟ್ ನಿಂದ ಊಬರ್ ಸೇವೆ ಹಾಗೂ ಚಾಲಕರ ವರ್ತನೆ ಕುರಿತು ಟ್ವಿಟ್ಟರ್ ನಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ.

  English summary
  Bollywood Actress Sonam Kapoor had a scariest experience with Uber London.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X