For Quick Alerts
  ALLOW NOTIFICATIONS  
  For Daily Alerts

  ಮದುವೆಗೂ ಮುನ್ನವೇ ಐಫೆಲ್ ಟವರ್ ಮುಂದೆ ಪ್ರಿಯಕರನ ತುಟಿ ಚುಂಬಿಸಿದ್ದ ಸೋನಂ ಕಪೂರ್.!

  |

  2018 ಮೇ 8 ರಂದು ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಮದುವೆ ಬಿಸಿನೆಸ್ ಮ್ಯಾನ್ ಆನಂದ್ ಅಹುಜಾ ಜೊತೆ ನೆರವೇರಿತು. ಸಿಖ್ ಸಂಪ್ರದಾಯದಂತೆ ಸೋನಂ ಕಪೂರ್-ಆನಂದ್ ಅಹುಜಾ ವಿವಾಹ ಮಹೋತ್ಸವ ನಡೆಯಿತು.

  ಅಷ್ಟಕ್ಕೂ, ಇವರಿಬ್ಬರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ವರ್ಷಗಳ ಕಾಲ ಪ್ರೀತಿಸಿದ್ದ ಈ ಜೋಡಿ ಮದುವೆಗೂ ಮುನ್ನವೇ ಯೂರೋಪ್ ಟೂರ್ ಮಾಡಿದ್ದರು. ಫ್ರಾನ್ಸ್ ನ ಪ್ಯಾರಿಸ್ ನಲ್ಲಿರುವ ವಿಶ್ವ ಪ್ರಸಿದ್ಧ ಐಫೆಲ್ ಟವರ್ ಮುಂದೆ ನಿಂತು ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಚುಂಬಿಸಿದ್ದರು.

  2016 ರಲ್ಲಿ ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಪ್ರೇಮದ ಅಲೆಯಲ್ಲಿ ತೇಲುತ್ತಿದ್ದಾಗ, ಐಫೆಲ್ ಟವರ್ ಕೆಳಗೆ ತುಟಿಗೆ ತುಟಿಯಿಟ್ಟು ಮುತ್ತು ನೀಡಿದ್ದ ಫೋಟೋವನ್ನು ಇದೀಗ ಸೋನಂ ಕಪೂರ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಹಂಚಿಕೊಂಡಿದ್ದಾರೆ.

  ಬಾಲಿವುಡ್ ನಟಿ ಸೋನಂ ಕಪೂರ್ ಗೆ ಸ್ವಲ್ಪನಾದರೂ ನಾಚಿಕೆ ಬೇಡ್ವಾ.?!ಬಾಲಿವುಡ್ ನಟಿ ಸೋನಂ ಕಪೂರ್ ಗೆ ಸ್ವಲ್ಪನಾದರೂ ನಾಚಿಕೆ ಬೇಡ್ವಾ.?!

  ಅಂದು, ಐಫೆಲ್ ಗೋಪುರದ ಮುಂಭಾಗ ಅನುಭವಿಸಿದ ರೋಮ್ಯಾಂಟಿಕ್ ಕ್ಷಣವನ್ನು ಮೊನ್ನೆಯ ಪ್ರೇಮಿಗಳ ದಿನಗಳ ಪ್ರಯುಕ್ತ ನೆನಪು ಮಾಡಿಕೊಂಡು, ಆ ಫೋಟೋನ ಸೋನಂ ಕಪೂರ್ ಶೇರ್ ಮಾಡಿದ್ದಾರೆ. ಜೊತೆಗೆ, ''ಇದು 2016, ಜುಲೈನಲ್ಲಿ ಕ್ಲಿಕ್ ಆಗಿರುವ ಫೋಟೋ. ನಮ್ಮಿಬ್ಬರ ಮೊದಲ ಟ್ರಿಪ್ ಪ್ಯಾರಿಸ್. ಐಫೆಲ್ ಟವರ್ ಮುಂದೆ ಕ್ಲಿಕ್ಕಿಸಿದ ಚಿತ್ರ ಇದು. ನಿಮ್ಮನ್ನ (ಆನಂದ್ ಅಹುಜಾ) ಸದಾ ಪ್ರೀತಿಸುವೆ'' ಎಂದು ಸೋನಂ ಕಪೂರ್ ಬರೆದುಕೊಂಡಿದ್ದಾರೆ.

  ಸಂಸದ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆಗೆ ನಟಿ ಸೋನಂ ಪ್ರತಿಕ್ರಿಯೆಸಂಸದ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆಗೆ ನಟಿ ಸೋನಂ ಪ್ರತಿಕ್ರಿಯೆ

  ಅದಕ್ಕೆ, ''ಮ್ಯಾಜಿಕಲ್, ಲವ್ ಯೂ'' ಎಂದು ಆನಂದ್ ಅಹುಜಾ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸೋನಂ ಕಪೂರ್-ಆನಂದ್ ಅಹುಜಾ ದಂಪತಿಯ ಈ ರೋಮ್ಯಾಂಟಿಕ್ ಫೋಟೋ ಹಲವರಿಗೆ ಇಷ್ಟ ಆಗಿದ್ರೆ, ಕೆಲ ಮಡಿವಂತರ ಕಣ್ಣು ಕೆಂಪಗೆ ಮಾಡಿದೆ.

  ಅಂದ್ಹಾಗೆ, 'ದಿ ಝೋಯಾ ಫ್ಯಾಕ್ಟರ್' ಚಿತ್ರದ ಬಳಿಕ ಸೋನಂ ಕಪೂರ್ ಯಾವ ಚಿತ್ರದಲ್ಲೂ ಕಾಣಿಸಿಕೊಂಡಿಲ್ಲ.

  English summary
  Sonam Kapoor reveals chessy throwback picture with Anand Ahuja on Valentines day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X