»   » ಚಿಕ್ಕವಳಿದ್ದಾಗ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಬಾಲಿವುಡ್ ನಟಿ.!

ಚಿಕ್ಕವಳಿದ್ದಾಗ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಬಾಲಿವುಡ್ ನಟಿ.!

Posted By:
Subscribe to Filmibeat Kannada

ನಾನು ಚಿಕ್ಕವಳಿದ್ದಾಗ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇ ಎಂದು ಬಾಲಿವುಡ್ ನಟಿ ಸೋನಮ್ ಕಪೂರ್ ಸ್ಪೋಟಕ ಮಾಹಿತಿಯನ್ನ ಬಹಿರಂಗ ಪಡಿಸಿದ್ದಾರೆ. ಬಾಲಿವುಡ್ ಖ್ಯಾತ ನಟ ಅನಿಲ್ ಕಪೂರ್ ಅವರ ಪುತ್ರಿ ಸೋನಮ್ ಕಪೂರ್ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯವನ್ನು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಧೈರ್ಯವಾಗಿ ಹೇಳಿಕೊಂಡಿದ್ದಾರೆ.

Sonam Kapoor Reveals She Was Molested In Younger

ಇತ್ತೀಚೆಗೆ 2016ರ ಹಿಟ್ ಸಿನಿಮಾಗಳ ನಟಿಯರನ್ನು ಚಿತ್ರ ವಿಮರ್ಶಕ ರಾಜೀವ್ ಮಸಂದ್ ಅವರು ಒಂದೆಡೆ ಸೇರಿಸಿ 'ರೌಂಡ್ ಟೇಬಲ್ ಕಾನ್ಫರೆನ್ಸ್' ಎಂಬ ಕಾರ್ಯಕ್ರಮ ಮಾಡಿದ್ದರು. ಈ ವೇಳೆ ಸೋನಮ್ ತಮ್ಮ ಮೇಲಾದ ಲೈಂಗಿಕ ಕಿರುಕುಳವನ್ನು ಬಹಿರಂಗವಾಗಿ ಹೇಳಿಕೊಂಡಿದ್ದು, ಆ ಅನುಭವದ ನೋವು ಹೇಳಲಾಗದ್ದು ಎಂದು ಬಾವುಕರಾದರು. ಆದ್ರೆ, ಕಿರುಕುಳ ಕೊಟ್ಟವರು ಯಾರು ಎಂಬ ವಿವರವನ್ನ ಹೇಳಿಲ್ಲ.

Sonam Kapoor Reveals She Was Molested In Younger

ಕೇವಲ ಸೋನಮ್ ಕಪೂರ್ ಮಾತ್ರವಲ್ಲ, ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನ ಖ್ಯಾತ ನಟಿಯರಾದ ವಿದ್ಯಾಬಾಲನ್, ಅನುಷ್ಕ ಶರ್ಮಾ, ಆಲಿಯಾ ಭಟ್, ರಾಧಿಕಾ ಆಪ್ಟೆ ಕೂಡ ಭಾಗವಹಿಸಿದ್ದರು.

ಈ ಹಿಂದೆ ಬಾಲಿವುಡ್ ನಟಿ ಕಲ್ಕಿ ಕೊಚ್ಲೀನ್, ಕಂಗನಾ ರಣಾವತ್ ಕೂಡ ತಮ್ಮ ಮೇಲೆ ಚಿಕ್ಕ ವಯಸ್ಸಿನಲ್ಲಿ ಲೈಂಗಿಕ ಕಿರುಕುಳ ಆಗಿತ್ತು ಎಂಬ ಆಘಾತಕಾರಿ ವಿಷಯವನ್ನ ಬಹಿರಂಗಪಡಿಸಿದ್ದರು.

    English summary
    Sonam Kapoor has opened about being molested when she was younger in an interview with Rajeev Masand. The Neerja actor called the experience "traumatising."

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada