Rana Vs Sonam: ದುಲ್ಕರ್ ಮೆಚ್ಚಿಸಲು ಬಲ್ಲಾಳ ದೇವ ಎಡವಟ್ಟು: ರಾಣಾ- ಸೋನಂ ಮಧ್ಯೆ ಇಂದೆಂಥ ಕಿರಿಕ್?

ದುಲ್ಕರ್ ಸಲ್ಮಾನ್ ನಟನೆಯ 'ಕಿಂಗ್ ಆಫ್ ಕೋತ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಹೈದರಾಬಾದ್‌ನಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೀತು. ಕಾರ್ಯಕ್ರಮದಲ್ಲಿ ರಾಣಾ, ನಾನಿ ಮುಖ್ಯ ಅತಿಥಿಗಳಾಗಿ ಹಾಜರಾಗಿದ್ದರು. ಈ ವೇಳೆ ಬಾಲಿವುಡ್ ನಟಿಯೊಬ್ಬಳ ಬಗ್ಗೆ ರಾಣಾ ಹೇಳಿಕೆ ವಿವಾದ ಸೃಷ್ಟಿಸಿತ್ತು.

ರಾಣಾ ಯಾವ ಬಾಲಿವುಡ್ ನಟಿಯ ಬಗ್ಗೆ ಈ ರೀತಿ ಕಾಮೆಂಟ್ ಮಾಡಿದ್ದಾರೆ ಎಂದು ನೆಟ್ಟಿಗರು ಹುಡುಕಾಟ ನಡೆಸಿದ್ದರು. ಆಗ ಅವರಿಗೆ ಸಿಕ್ಕ ಉತ್ತರ ಸೋನಂ ಕಪೂರ್. ದುಲ್ಕರ್ ನಟಿಸಿದ ಬಾಲಿವುಡ್ ಸಿನಿಮಾ 'ದಿ ಜೋಯಾ ಫ್ಯಾಕ್ಟರ್'. ಸೋನಂ ಈ ಚಿತ್ರದಲ್ಲಿ ನಟಿಸುವ ವೇಳೆಗೆ ಆಕೆಗೆ ಮದುವೆ ಆಗಿತ್ತು. ಹಾಗಾಗಿ ರಾಣಾ, ಬಾಲಿವುಡ್ ನಟಿ ಸೋನಂ ಕಪೂರ್ ಬಗ್ಗೆನೇ ಈ ರೀತಿ ಕಾಮೆಂಟ್ ಮಾಡಿದ್ದಾರೆ ಎಂದು ಚರ್ಚೆ ಶುರುವಾಯಿತು. ಬಳಿಕ ರಾಣಾ ಟ್ವೀಟ್ ಮಾಡಿ ನನ್ನ ಹೇಳಿಕೆಗೆ ಕ್ಷಮೆ ಕೇಳಿದ್ದರು. ಸದ್ಯ ಸೋನಂ ಕಪೂರ್ ಪರೋಕ್ಷವಾಗಿ ಕಾಮೆಂಟ್ ಮಾಡಿದ್ದಾರೆ ಎನ್ನಲಾಗ್ತಿದೆ.

Rana- Daggubati -Sonam- Kapoor- Dulquer -salman

ಅಂದು ಕಾರ್ಯಕ್ರಮದಲ್ಲಿ ದುಲ್ಕರ್ ಸಲ್ಮಾನ್‌ ಬಗ್ಗೆ ಮಾತನಾಡುತ್ತಾ ರಾಣಾ, ಬಾಲಿವುಡ್ ನಾಯಕಿಯೊಬ್ಬಳನ್ನು ಟೀಕಿಸಿದ್ದರು. "ಬಾಲಿವುಡ್ ನಾಯಕಿಯೊಬ್ಬರು ದುಲ್ಕರ್ ಜೊತೆ ಸಿನಿಮಾ ಮಾಡಿದ್ದಾದೆ. ಆ ಸಿನಿಮಾ ಶೂಟಿಂಗ್ ವೇಳೆ ದುಲ್ಕರ್‌ಗೆ ಬೇಸರ ಉಂಟು ಮಾಡಿದ್ದರು. ನಿರ್ಮಾಪಕರು ನನಗೆ ಸ್ನೇಹಿತರಾಗಿದ್ದರು. ಹಾಗಾಗಿ ನಾನು ಶೂಟಿಂಗ್‌ಗೆ ಹೋಗಿದ್ದೆ. ಆ ಸಮಯದಲ್ಲಿ ಆಕೆ ಟೇಕ್ ನಡುವೆ ತನ್ನ ಪತಿಯ ಜೊತೆ ಮಾತನಾಡುತ್ತಿದ್ದಳು. ಆಕೆ ಫೋನ್‌ನಲ್ಲಿ ಮಾತನಾಡುತ್ತಿದ್ದದ್ದು ಗಂಭೀರ ವಿಚಾರ ಆಗಿರಲಿಲ್ಲ. ಆದರೆ ದುಲ್ಕರ್ ಬಿಸಿಲಿನಲ್ಲಿ ನಿಂತಿದ್ದರು."

"ಸರಿ ಫೋನ್‌ನಲ್ಲಿ ಮಾತನಾಡಿದ ಬಳಿಕ ಕ್ಯಾಮರಾ ಮುಂದೆ ನಿಲ್ಲುತ್ತಾರೆ ಅಂದ್ರೆ ಆಕೆ ನಿಲ್ಲಲಿಲ್ಲ. ನನ್ನ ಜೊತೆ ಹಾಯ್ ಅಂತ ಮಾತನಾಡಲು ಬಂದರು. ನಾನು ಹೋಗಮ್ಮ ಶೂಟಿಂಗ್‌ಗೆ ಅಂದೆ. ಬಳಿಕ ಡೈಲಾಗ್ ಮರೆತು ಹೋಗುತ್ತಿದ್ದರು. ಮತ್ತೆ ಯಾವುದೋ ಫೋನ್ ಬಂತು ಎಂದು ಮಾತನಾಡಿದರು. ನನಗೆ ಕೋಪ ಬಂದು ನನ್ನ ಕೈಯಲ್ಲಿದ್ದ ಬಾಟಲ್ ಕೆಳಗೆ ಒಡೆದು ಬೇಸರ ವ್ಯಕ್ತಪಡಿಸಿದೆ. ಆದರೆ ದುಲ್ಕರ್ ಮಾತ್ರ ಕೋಪಗೊಳ್ಳದೇ ಬಹಳ ಸಂಯಮದಿಂದ ಇದ್ದರು. ಬಳಿಕ ಶೂಟಿಂಗ್ ಮುಗಿಸಿ ಮೂರ್ನಾಲ್ಕು ಕಾರಲ್ಲಿ ತಮ್ಮ ಸಿಬ್ಬಂದಿ ಜೊತೆ ಹೊರಟಳು. ದುಲ್ಕರ್ ಕೂಡ ಹೋರಟು ಹೋದರು. ಬಳಿಕ ನಾನು ಈ ವಿಚಾರದಲ್ಲಿ ನಿರ್ಮಾಪಕರಿಗೆ ಚೆನ್ನಾಗಿ ಬೈದೆ" ಎಂದು ರಾಣಾ ಹೇಳಿದ್ದರು.

Rana- Daggubati -Sonam- Kapoor- Dulquer -salman

ಈ ಹಿಂದೆ ಕೂಡ ರಾಣಾ ಇದೇ ರೀತಿ ಸೋನಂ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿತ್ತು. ಹಾಗಾಗಿ ಸೋನಂ ಕಪೂರ್ ಬಗ್ಗೆನೇ ರಾಣಾ ಮಾತನಾಡಿದ್ದಾರೆ ಎನ್ನುವ ಚರ್ಚೆ ಹೆಚ್ಚಾಗುತ್ತಿದ್ದಂತೆ ರಾಣಾ ಪ್ರತಿಕ್ರಿಯಿಸಿದ್ದಾರೆ. "ನನ್ನ ಮಾತುಗಳಿಂದ ಸೋನಂ ವಿರುದ್ಧ ಬಹಳ ಟೀಕೆ ವ್ಯಕ್ತವಾಗುತ್ತಿದೆ. ಅದು ನನಗೆ ತುಂಬಾ ಮುಜುಗರ ತಂದಿದೆ. ಅವಳೂ ನನ್ನ ಸ್ನೇಹಿತೆ. ನಾನು ತಮಾಷೆಗಾಗಿ ಆ ರೀತಿ ಕಾಮೆಂಟ್ ಮಾಡಿದ್ದೆ. ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿ ಪ್ರಚಾರ ಮಾಡಿದ್ದಕ್ಕಾಗಿ ನನಗೆ ತುಂಬಾ ವಿಷಾದವಿದೆ. ನಾನು ಗೌರವಿಸುವ ಸೋನಂ ಕಪೂರ್ ಮತ್ತು ದುಲ್ಕರ್ ಸಲ್ಮಾನ್‌ಗೆ ನನ್ನ ಹೃದಯಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ. ಇನ್ನಾದರೂ ಈ ಊಹಾಪೋಹಗಳಿಗೆ ಮತ್ತು ಸುದ್ದಿಗಳಿಗೆ ಅಂತ್ಯ ಹಾಡುವಂತೆ ಕೋರಿಕೊಳ್ಳುತ್ತೇನೆ. ಅರ್ಥ ಮಾಡಿಕೊಳ್ಳುತ್ತೀರಾ ಎಂದು ನಂಬಿದ್ದೇನೆ ಎಂದು ರಾಣಾ ಬರೆದುಕೊಂಡಿದ್ದರು.

ರಾಣಾ ಟ್ವೀಟ್ ವೈರಲ್ ಆಗಿದ್ದು ಮೊನ್ನೆ ನೋಡಿದ್ರೆ ಸೋನಂ ಬಗ್ಗೆ ಆ ರೀತಿ ಹೇಳಿ ಈಗ ಏನು ಇಲ್ಲ ಅಂತೀರಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಸೋನಂ ಕಪೂರ್ ಇನ್‌ಸ್ಟಾಗ್ರಾಂನಲ್ಲಿ ಒಂದು ಕೋಟ್‌ನ ಶೇರ್ ಮಾಡಿದ್ದಾರೆ. "ಸಂಕುಚಿತ ಮನಸ್ಥಿತಿ ಉಳ್ಳವರು ವ್ಯಕ್ತಿಗಳ ಬಗ್ಗೆ ಚರ್ಚಿಸುತ್ತಾರೆ. ಸರಾಸರಿ ಮನಸ್ಥಿತಿವುಳ್ಳವರು ಸಂಘಟನೆಗಳ ಬಗ್ಗೆ ಮಾತನಾಡಿದರೆ ಅದ್ಭುತ ಮನಸ್ಥಿತಿವುಳ್ಳವರು ಒಳ್ಳೆ ಆಲೋಚನೆಗಳ ಬಗ್ಗೆ ಚರ್ಚಿಸುತ್ತಾರೆ" ಎಂದು ಯೂಎಸ್‌ನ ಪ್ರಥಮ ಮಹಿಳೆಯಾಗಿದ್ದ ಎಲೀನರ್ ರೂಸ್ವೆಲ್ಟ್ ಹೇಳಿಕೆಯನ್ನು ಸೋನಂ ಹಾಕಿದ್ದಾರೆ.

ಎಲೀನರ್ ರೂಸ್ವೆಲ್ಟ್ ಶೇರ್ ಮಾಡಿ "ನಾನು ಕೆಲವರ ಬಗ್ಗೆ ತಿಳಿದುಕೊಳ್ಳಬೇಕು ಎಂದುಕೊಂಡಿದ್ದೇನೆ. ಮುಖ್ಯವಾಗಿ ಅಂತಹ ವ್ಯಕ್ತಿಗಳ ಬಗ್ಗೆ" ಎಂದು ಬರೆದುಕೊಂಡಿದ್ದಾರೆ. ರಾಣಾ ಕುರಿತು ಸೋನಂ ಈ ರೀತಿ ಪರೋಕ್ಷವಾಗಿ ಪೋಸ್ಟ್ ಮಾಡಿದ್ದಾರೆ ಎನ್ನುವ ಚರ್ಚೆ ನಡೀತಿದೆ.

More from Filmibeat

English summary
Did Sonam Kapoor take an indirect dig at Rana daggubati.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X