For Quick Alerts
  ALLOW NOTIFICATIONS  
  For Daily Alerts

  ಸೋನಂ ಕಪೂರ್ ಮದುವೆಯಲ್ಲಿ ಗಮನ ಸೆಳೆದ ಮಾಜಿ ಪ್ರೇಮಿಗಳು

  By Bharath Kumar
  |

  ಬಾಲಿವುಡ್ ನಟ ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಮದುವೆ ನಿನ್ನೆ ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿತು. ಸಂಜೆ ಮುಂಬೈನಲ್ಲೇ ಆರತಕ್ಷತೆ ಕಾರ್ಯಕ್ರಮ ಕೂಡ ಆಯೋಜನೆ ಮಾಡಲಾಗಿತ್ತು.

  ಈ ಪಾರ್ಟಿಯಲ್ಲಿ ಬಾಲಿವುಡ್ ನ ಬಹುತೇಕ ಎಲ್ಲ ಸಿನಿತಾರೆಯರು ಭಾಗವಹಿಸಿದ್ದರು. ಆದ್ರೆ, ಈ ಪಾರ್ಟಿಯಲ್ಲಿ ಕೆಲವು ಮಾಜಿ ಪ್ರೇಮಿಗಳು ಮುಖಾಮುಖಿ ಆಗಿದ್ದು, ವಿಶೇಷವಾಗಿತ್ತು. ಜೊತೆಗೆ ಕೆಲವು ಹೊಸ ಜೋಡಿಗಳು ಕೂಡ ಗಮನ ಸೆಳೆದರು.

  ಸೋನಂ ಕಪೂರ್ ಆರತಕ್ಷತೆಯಲ್ಲಿ ಕಂಗೊಳಿಸಿದ ಬಾಲಿವುಡ್ ತಾರೆಯರುಸೋನಂ ಕಪೂರ್ ಆರತಕ್ಷತೆಯಲ್ಲಿ ಕಂಗೊಳಿಸಿದ ಬಾಲಿವುಡ್ ತಾರೆಯರು

  ಒಂದ್ಕಾಲದಲ್ಲಿ ಪ್ರೇಮಿಗಳಾಗಿ ಸುತ್ತಾಡಿದ್ದ ಜೋಡಿಗಳು ನಿನ್ನೆ ಬೇರೆ ಬೇರೆ ಜೊತೆಗಾರರ ಜೊತೆ ಆಗಮಿಸಿದ್ದರು. ಹಾಗಿದ್ರೆ, ಸೋನಂ ಕಪೂರ್ ಆರತಕ್ಷತೆಯಲ್ಲಿ ಕಣ್ಣಿಗೆ ಬಿದ್ದ ಮಾಜಿ ಲವ್ ಬರ್ಡ್ಸ್ ಯಾವುದು.? ಮುಂದೆ ಓದಿ.....

  ಐಶ್ವರ್ಯ ರೈ ಮತ್ತು ಸಲ್ಮಾನ್

  ಐಶ್ವರ್ಯ ರೈ ಮತ್ತು ಸಲ್ಮಾನ್

  ಬಾಲಿವುಡ್ ನ ಮಾಜಿ ಪ್ರೇಮಿಗಳ ಪಟ್ಟಿಯಲ್ಲಿ ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ಜೋಡಿ ಪ್ರಮುಖವಾದದು. ಐಶ್ವರ್ಯ ಪತಿ ಅಭಿಷೇಕ್ ಜೊತೆ ಆಗಮಿಸಿದ್ದರು. ಇತ್ತ ಸಲ್ಮಾನ್ ಖಾನ್ ಜಾಕ್ವೆಲಿನ್ ಜೊತೆ ಎಂಟ್ರಿಯಾದರು. ಪಾರ್ಟಿಯಲ್ಲಿ ಅನಿಲ್ ಕಪೂರ್, ಶಾರೂಖ್ ಜೊತೆಯಲ್ಲಿ ಡ್ಯಾನ್ಸ್ ಮಾಡಿದ ಸಲ್ಲುನ ನೋಡಿ ಐಶ್ ಹೇಗಾಗಿರಬೇಡ.?

  ರಣ್ಬೀರ್ ಕಪೂರ್ ಮತ್ತು ಕತ್ರಿನಾ

  ರಣ್ಬೀರ್ ಕಪೂರ್ ಮತ್ತು ಕತ್ರಿನಾ

  ಮಾಜಿ ಜೋಡಿಗಳು ಬೇರೆ ಬೇರೆಯಾದ ಬಳಿಕ ಮತ್ತೆ ಒಟ್ಟಾಗಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಇನ್ನು ಸೋನಂ ಮದುವೆಯಲ್ಲಿ ಹೀಗೆ ಗಮನ ಸೆಳೆದ ಮತ್ತೊಂದು ಜೋಡಿ ರಣ್ಬೀರ್ ಕಪೂರ್ ಮತ್ತು ಕತ್ರಿನಾ ಕೈಫ್. ಆಲಿಯಾ ಭಟ್ ಜೊತೆ ರಣ್ಬೀರ್ ಫೋಸ್ ಕೊಟ್ರೆ, ಇತ್ತ ಕತ್ರಿನಾ ಸಹೋದರಿ ಜೊತೆ ಕಾಣಿಸಿಕೊಂಡು ನಾನಲ್ಲಿ, ನೀನಲ್ಲಿ ಎಂದು ಹೋದರು.

  ಸೋನಂ ಕಪೂರ್ ಆರತಕ್ಷತೆಯಲ್ಲಿ ಕಂಗೊಳಿಸಿದ ಬಾಲಿವುಡ್ ತಾರೆಯರುಸೋನಂ ಕಪೂರ್ ಆರತಕ್ಷತೆಯಲ್ಲಿ ಕಂಗೊಳಿಸಿದ ಬಾಲಿವುಡ್ ತಾರೆಯರು

  ಆಲಿಯಾ ಮತ್ತು ಸಿದ್ಧಾರ್ಥ್

  ಆಲಿಯಾ ಮತ್ತು ಸಿದ್ಧಾರ್ಥ್

  ಆಲಿಯಾ ಭಟ್ ಸದ್ಯ ರಣ್ಬೀರ್ ಕಪೂರ್ ಜೊತೆ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಆದ್ರೆ, ಅದಕ್ಕು ಮುಂಚೆ ನಟ ಸಿದ್ಧಾರ್ಥ್ ಮಲ್ಹೋತ್ರ ಜೊತೆ ಪ್ರೀತಿಯಲ್ಲಿದ್ದರು. ಸೋನಂ ಮದುವೆಯಲ್ಲಿ ಸಿದ್ಧಾರ್ಥ್ ಮತ್ತು ಆಲಿಯಾ ಕೂಡ ಗಮನ ಸೆಳೆದರು.

  ಅಭಿಷೇಕ್ ಮತ್ತು ಕರೀಷ್ಮಾ

  ಅಭಿಷೇಕ್ ಮತ್ತು ಕರೀಷ್ಮಾ

  ಐಶ್ವರ್ಯ ರೈ ಬಚ್ಚನ್ ಮಾತ್ರವಲ್ಲ ಅವರ ಪತಿ ಅಭಿಷೇಕ್ ಬಚ್ಚನ್ ರ ಮಾಜಿ ಹುಡುಗಿ ಕೂಡ ಸೋನಂ ಮದುವೆಯಲ್ಲಿ ಕಾಣಿಸಿಕೊಂಡ್ರು. ಅಭಿಷೇಕ್ ಬಚ್ಚನ್ ಮತ್ತು ಕರೀಷ್ಮಾ ಕಪೂರ್ ಅವರ ಮದುವೆ ನಿಶ್ಚಯವಾಗಿತ್ತು. ಆದ್ರೆ, ಕಾರಣಾಂತರಗಳಿಂದ ಮದುವೆ ಮುರಿದುಬಿತ್ತು.

  ಶಾಹೀದ್ ಮತ್ತು ಕರೀನಾ ಕಪೂರ್

  ಶಾಹೀದ್ ಮತ್ತು ಕರೀನಾ ಕಪೂರ್

  ನಟ ಶಾಹೀದ್ ಕಪೂರ್ ತಮ್ಮ ಪತ್ನಿ ಮೀರಾ ರಜಪೂತ್ ಜೊತೆ ಸೋನಂ ಮದುವೆಗೆ ಆಗಮಿಸಿದ್ದರು. ಕರೀನಾ ಕಪೂರ್ ತಮ್ಮ ಪತಿ ಸೈಫ್ ಅಲಿ ಖಾನ್ ಜೊತೆಯಲ್ಲಿ ಆಗಮಿಸಿದ್ದರು. ವಿಶೇಷ ಅಂದ್ರೆ, ಶಾಹೀದ್ ಕಪೂರ್ ಮತ್ತು ಕರೀನಾ ಕಪೂರ್ ಇಬ್ಬರು ಒಂದು ಕಾಲದಲ್ಲಿ ಲವ್ ಬರ್ಡ್ಸ್ ಆಗಿದ್ದವರು.

  English summary
  Sonam's reception party also had a few Bollywood celebrities bumping into their exes. some of whom are rumoured to be sharing not-so-cordial equations post break-up. Did somebody just say 'awkward encounters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X