ಖ್ಯಾತ ಗಾಯಕ ಸೋನು ನಿಗಮ್ ಗೆ ಜೀವ ಬೆದರಿಕೆ: ಹೆಚ್ಚಿದ ಭದ್ರತೆ

By Bharath Kumar

ಖ್ಯಾತ ಗಾಯಕ ಸೋನು ನಿಗಮ್ ಅವರಿಗೆ ಜೀವ ಬೆದರಿಕೆ ಇರುವುದರಿಂದ ಅವರ ನಿವಾಸಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದೆ ಎಂದು ಮುಂಬೈ ಪೊಲೀಸರು ಮಂಗಳವಾರ ಅಧಿಕೃತವಾಗಿ ತಿಳಿಸಿದ್ದಾರೆ.

ಮೂಲಭೂತವಾದಿಗಳ ಗುಂಪು ಸೋನು ನಿಗಮ್ ಅವರನ್ನ ಹತ್ಯೆ ಮಾಡಲು ಸಂಚು ರೂಪಿಸಿರುವುದಾಗಿ ಮಹಾರಾಷ್ಟ್ರ ಗುಪ್ತಚರ ಇಲಾಖೆಗೆ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಮುಂಬೈ ಪೊಲೀಸರು ಸೋನು ನಿಗಮ್ ಗೆ ಭದ್ರತೆ ಹೆಚ್ಚಿಸಿದ್ದಾರೆ.

Sonu Nigam receives death threats

ಈ ಹಿಂದೆ ಹಲವು ಬಾರಿ ಸೋನಿ ನಿಗಮ್ ವಿವಾದಾತ್ಮಕ ಹೇಳಿಕೆಗಳನ್ನ ಕೊಟ್ಟು ವಿವಿಧ ಸಮುದಾಯಗಳ ಆಕ್ರೋಶಕ್ಕೆ ಗುರಿಯಾಗಿದ್ದರು. ಅದರಲ್ಲೂ ಮಸೀದಿಗಳಲ್ಲಿ ಮೊಳಗುವ ಆಜಾನ್ ವಿರುದ್ಧ ಸೋನು ಕಿಡಿಕಾರಿದ್ದರು. ''ನಾನು ಮುಸ್ಲಿಂ ಅಲ್ಲ. ಆದರೂ, ಮಸೀದಿ ಧ್ವನಿ ವರ್ಧಕದ ಶಬ್ದದಿಂದಲೇ ಎಚ್ಚರಗೊಳ್ಳುತ್ತೇನೆ. ಧಾರ್ಮಿಕತೆಯ ಬಲವಂತದ ಹೇರಿಕೆ ಗೂಂಡಾಗಿರಿ ಎಂದು ಟ್ವೀಟ್ ಮಾಡಿದ್ದರು.

ಇದಲ್ಲದೆ, ರಾಷ್ಟ್ರಗೀತೆ ಬಗ್ಗೆ ಸೋನು ನೀಡಿದ್ದ ಹೇಳಿಕೆ ಕೂಡಾ ಹಲವರ ಕಣ್ಣು ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗೆ, ಒಂದಲ್ಲ ಒಂದು ವಿಷ್ಯದಲ್ಲಿ ಚರ್ಚೆಗೆ ಕಾರಣವಾಗುತ್ತಿದ್ದ ಗಾಯಕ ಸೋನು ನಿಗಮ್ ಈಗ ಡೇಂಜರ್ ಜೋನ್ ನಲ್ಲಿದ್ದಾರೆ.

More from Filmibeat

English summary
The Maharashtra State Intelligence Department (SID) has cautioned Mumbai Police about a threat to the life of Bollywood singer-actor Sonu Nigam, with a possible plan to eliminate him, a top official said here on Tuesday. ಖ್ಯಾತ ಗಾಯಕ ಸೋನು ನಿಗಮ್ ಅವರಿಗೆ ಜೀವ ಬೆದರಿಕೆಯಿದ್ದು, ಹೆಚ್ಚಿನ ಭದ್ರತೆ ನೀಡಲಾಗುವುದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X