twitter
    For Quick Alerts
    ALLOW NOTIFICATIONS  
    For Daily Alerts

    ಸಾವ್ಕಾರ್ ಜಾನಕಿ, ಸೋನು ನಿಗಮ್ ಸೇರಿ ಇತರ ಸಿನಿಮಾರಂಗದ ಸಾಧಕರಿಗೆ ಪದ್ಮ ಪ್ರಶಸ್ತಿ

    |

    ಕೇಂದ್ರ ಸರ್ಕಾರವು ಇಂದು ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ್ದು, ಕಲಾ ವಿಭಾಗದಲ್ಲಿ ನಟಿ ಸಾವ್ಕಾರ್ ಜಾನಕಿ ಹಾಗೂ ಗಾಯಕ ಸೋನು ನಿಗಮ್ ಅವರಿಗೆ ಗೌರವ ಲಭಿಸಿದೆ.

    ಸಾವ್ಕಾರ್ ಜಾನಕಿ ಹಾಗೂ ಸೋನು ನಿಗಮ್ ಅವರಿಗೆ ಮೂರನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮಶ್ರೀ ಗೌರವ ನೀಡಲಾಗಿದೆ.

    90 ವರ್ಷ ವಯಸ್ಸಿನ ಸಾವ್ಕಾರ್ ಜಾನಕಿ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಇನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಹಿರಿಯ ನಟಿಯ ನಟಿಯ ಸಾಧನೆಯನ್ನು ಸರ್ಕಾರವು ತಡವಾಗಿಯೇ ಗುರುತಿಸಿದೆ.

    Sonu Nigam, Sowcar Janaki And Others Awarded Padma Award By Government
    ಇನ್ನು ಗಾಯಕ ಸೋನು ನಿಗಮ್ ಸಹ ಪದ್ಮಶ್ರೀಗೆ ಅರ್ಹ ಸಾಧನೆಯನ್ನೇ ಮಾಡಿದ್ದಾರೆ. ಸೋನು ನಿಗಮ್ ಕನ್ನಡ ಸೇರಿದಂತೆ ಭಾರತದ ಬಹುತೇಕ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ.

    ಇವರುಗಳ ಹೊರತಾಗಿ ಸಿನಿಮಾ ರಂಗದಲ್ಲಿ ಸಾಧನೆ ಮಾಡಿದ ಇನ್ನೂ ಕೆಲವರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ.

    ಇಂಗ್ಲೀಷ್, ಬೆಂಗಾಳಿ, ಹಿಂದಿ, ಅಸ್ಸಾಮಿ ಭಾಷೆಗಳಲ್ಲಿ ನಟಿಸಿರುವ ಹಿರಿಯ ನಟ ವಿಕ್ಟರ್ ಬ್ಯಾನರ್ಜಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಭಾರತದ ಅತ್ಯುತ್ತಮ ನಿರ್ದೇಶಕರುಗಳಾದ ಸತ್ಯಜಿತ್ ರೇ, ಶ್ಯಾಮ್ ಬೆನಗಲ್, ರಾಮ್ ಗೋಪಾಲ್ ವರ್ಮಾ, ಮ್ರಿನಾಲ್ ಸೇನ್ ಅವರೊಟ್ಟಿಗೆ ಕೆಲಸ ಮಾಡಿದ್ದಾರೆ. ವಿದೇಶಿ ಸಿನಿಮಾಗಳಲ್ಲಿ ನಟಿಸಿರುವ ವಿಕ್ಟರ್ ಬ್ಯಾನರ್ಜಿ, ರೊಮನ್ ಪೋಲೆಸ್ಕಿ, ಜೇಮ್ಸ್ ಐವರಿ, ಡೇವಡ್ ಲೀನ್, ರೋನಾಲ್ಡ್ ನೀನ್ ಅವರೊಟ್ಟಿಗೂ ಕೆಲಸ ಮಾಡಿದ್ದಾರೆ.

    ಸಿನಿಮಾ ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ವೈದ್ಯರಾಗಿದ್ದ ಚಂದ್ರಪ್ರಕಾಶ್ ದ್ವಿವೇದಿ, ಸಾಹಿತ್ಯ ನಾಟಕದೆಡೆಗೆ ಆಸಕ್ತಿವಹಿಸಿ ಉದ್ಯೋಗಕ್ಕೆ ತಿಲಾಂಜಲಿ ಇಟ್ಟು, ನಾಟಕಗಳಲ್ಲಿ ತೊಡಗಿಕೊಂಡರು. 'ಏಕ್ ಔರ್ ಮಹಾಭಾರತ್', 'ಛತ್ರಪತಿ ಶಿವಾಜಿ' ಸೇರಿದಂತೆ ಕೆಲವು ಧಾರಾವಾಹಿಗಳನ್ನು ನಿರ್ದೇಶಿಸಿರುವ ಚಂದ್ರಪ್ರಕಾಶ್ ದ್ವಿವೇದಿ, ಕೆಲವು ಸಿನಿಮಾಗಳನ್ನೂ ನಿರ್ದೇಶನ ಮಾಡಿದ್ದಾರೆ. ಅವರ ನಿರ್ದೇಶನದ 'ಪೃಥ್ವಿರಾಜ್' ಹಿಂದಿ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ.

    ಈ ವರ್ಷ ಕೇಂದ್ರ ಸರ್ಕಾರವು 128 ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ನಾಲ್ಕು ಪದ್ಮ ವಿಭೂಷಣ, 17 ಪದ್ಮ ಭೂಷಣ, 1047 ಮಂದಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಲಾಗಿದೆ. ಪ್ರಶಸ್ತಿ ವಿತರಣೆ ಕಾರ್ಯಕ್ರಮವು ರಾಷ್ಟ್ರಪ್ರಶಸ್ತಿ ಭವನದಲ್ಲಿ ಇದೇ ನಡೆಯಲಿದೆ.

    English summary
    Singer Sonu Nigam, actress Sowcar Janaki, Actor Victor Banarjee, Film maker Chandraprakash Dwivedi awarded Padma by government.
    Tuesday, January 25, 2022, 22:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X