twitter
    For Quick Alerts
    ALLOW NOTIFICATIONS  
    For Daily Alerts

    ಆಫೀಸ್ ಆಯ್ತು ಇದೀಗ ಸೋನು ಸೂದ್ ಮನೆಯಲ್ಲಿ ಐಟಿ ಅಧಿಕಾರಿಗಳ ಸರ್ವೆ

    |

    ಕೊರೊನಾ ಲಾಕ್‌ ಡೌನ್ ಸಮಯದಲ್ಲಿ ಲಕ್ಷಾಂತರ ಮಂದಿಗೆ ಸಹಾಯ ಮಾಡಿದ ನಟ ಸೋನು ಸೂದ್ ಗೆ ಈಗ ಐಟಿ ಸಂಕಷ್ಟ ಎದುರಾಗಿದೆ. ಸೋನು ಸೂದ್ ಗೆ ಸಂಬಂಧಿಸಿದ ಮುಂಬೈನ ಆರು ಆಸ್ತಿಗಳ ಮೇಲೆ ಐಟಿ ಅಧಿಕಾರಿಗಳು ಕಣ್ಣಿಟ್ಟಿದ್ದು, ನಿಗಾವಣೆಗೆ ತೆಗೆದುಕೊಂಡಿವೆ. ಸೋನು ಸೂದ್ ತಮ್ಮ ಆದಾಯ ಲೆಕ್ಕಪತ್ರದಲ್ಲಿ ತಪ್ಪು ಮಾಡಿದ್ದಾರೆ ಎಂಬ ಆರೋಪದ ಮೇಲೆ ಐಟಿ ಅಧಿಕಾರಿಗಳು ನಿಗಾವಣೆ ಇಟ್ಟಿದ್ದಾರೆ.

    ನಿನ್ನೆ (ಸೆಪ್ಟಂಬರ್ 15) ತಡರಾತ್ರಿ ವರೆಗೂ ಅಧಿಕಾರಿಗಳು ಸೋನು ಸೂದ್ ಕಚೇರಿಗಳ ಸರ್ವೆ ಮಾಡಿದ್ದು ಬಳಿಕ ಕೊನೆಗೊಳಿಸಿದ್ದರು. ಇಂದು (ಸೆಪ್ಟಂಬರ್ 16) ಬೆಳಗ್ಗೆ ಅಧಿಕಾರಿಗಳು ಸೋನು ಅವರ ಮನೆಗೆ ತೆರಳಿದ್ದು, ಮನೆಯಲ್ಲಿ ಸರ್ವೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಬೆಳಗ್ಗೆಯಿಂದ ಸೋನು ಸೂದ್ ಮನೆಯಲ್ಲಿ ಅಧಿಕಾರಿಗಳು ಬೀಡುಬಿಟ್ಟಿದ್ದು ಸರ್ವೆ ಮಾಡುತ್ತಿದ್ದಾರೆ ಎನ್ನಲಾಗಿದೆ.

    ಲಕ್ನೋ ಮೂಲದ ರಿಯಲ್ ಎಸ್ಟೇಟ್ ಕಂಪನಿಯೊಂದಿಗಿನ ಆಸ್ತಿ ಒಪ್ಪಂದದ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸೋನು ಸೂದ್ ಕಂಪನಿ ಮತ್ತು ಲಕ್ನೋ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯ ನಡುವಿನ ಇತ್ತೀಚಿನ ಒಪ್ಪಂದದ ಕುರಿತಂತೆ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಒಪ್ಪಂದದ ಮೇಲೆ ತೆರಿಗೆ ವಂಚನೆಯ ಆರೋಪ ಬಂದ ಕಾರಣ ಆ ಕುರಿತು ಸಮೀಕ್ಷೆಯನ್ನು ಮಾಡುತ್ತಿದ್ದಾರೆ. ಈ ಕಾರ್ಯಾಚರಣೆ ದಾಳಿಯಲ್ಲ, ಕೇವಲ 'ಸರ್ವೆ'(ಸಮೀಕ್ಷೆ) ಎಂದು ಎಂದು ಮೂಲಗಳು ತಿಳಿಸಿವೆ.

    Sonu Sood: After Survey at Sonu Sood Offices, IT Survey at his Residence today

    ಕೊರೊನಾ ಸಮಯದಲ್ಲಿ ಜನರ ನೆರವಿಗೆ ನಿಂತಿದ್ದ, ಲಕ್ಷಾಂತರ ಮಂದಿಗೆ ಸಹಾಯಹಸ್ತ ಚಾಚಿದ್ದ ನಟ ಸೋನು ಸೂದ್ ಕಚೇರಿ ಮತ್ತು ಮನೆಯನ್ನು ಸರ್ವೆಗೆ ಮಾಡುತ್ತಿರುವುದನ್ನು ವಿರೋಧ ಪಕ್ಷಗಳು ಖಂಡಿಸಿವೆ.

    ಈ ಬಗ್ಗೆ ಈಗಾಗಲೇ ಎಎಪಿ, ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದೆ. ಇತ್ತೀಚೆಗಷ್ಟೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ರನ್ನು ಸೋನು ಸೂದ್ ಭೇಟಿಯಾಗಿದ್ದರು. ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮೇರೆಗೆ ದೆಹಲಿ ಸರ್ಕಾರದ ಶಿಕ್ಷಣ ಯೋಜನೆಗಳಿಗೆ ಸೋನು ಸೂದ್ ರಾಯಭಾರಿ ಆಗಿದ್ದರು. ಅರವಿಂದ ಕೇಜ್ರಿವಾಲ್ ಜೊತೆಗೆ ಕೈ ಸೇರಿಸಿದ್ದಕ್ಕೆ ಸೋನು ಸೂದ್ ಮೇಲೆ ಐಟಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ ಎಂದು ಕೆಲವು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಪಕ್ಕಾ ರಾಜಕೀಯ ಪ್ರೇರಿತ ಎನ್ನುವ ಮಾತುಗಳು ಕೇಳಿಬರುತ್ತಿವೆ.

    ಕಳೆದ ವರ್ಷ ಕೊರೊನಾ ಲಾಕ್ ಡೌನ್ ಬಳಿಕ ಸೋನು ಸೂದ್ ರಿಯಲ್ ಹೀರೋ ಆಗಿದ್ದರು. ಸಂಕಷ್ಟದಲ್ಲಿ ಸಿಲುಕ್ಕಿದ್ದ ಲಕ್ಷಾಂತರ ಮಂದಿಗೆ ಸೋನು ಸೂದ್ ಸಹಾಯ ಹಸ್ತ ಚಾಚಿದ್ದಾರೆ. ದಿನಗೂಲಿ ಕಾರ್ಮಿಕರಿಗೆ ಬಸ್ಸು, ರೈಲು ವ್ಯವಸ್ಥೆ ಮಾಡುವ ಮೂಲಕ ಅವರನ್ನು ಮರಳಿ ಮನೆಗೆ ಸೇರಿಸುವ ಕೆಲಸದಿಂದ ಪ್ರಾರಂಭವಾದ ಸೋನು ಸೂದ್ ಮಾನವೀಯ ಕೆಲಸ ಈ ಬಾರಿ ಭೀಕರಪರಿಸ್ಥಿತಿ ಸೃಷ್ಟಿಮಾಡಿದ್ದ ಕೊರೊನಾ 2ನೇ ಅಲೆಯ ವರೆಗೂ ಮುಂದುವರೆದಿದೆ. ಆಕ್ಸಿಜನ್, ಆಸ್ಪತ್ರೆ, ಬೆಡ್, ಶಿಕ್ಷಣ ಹೀಗೆ ಅನೇಕ ರೀತಿಯಲ್ಲಿ ಸೋನು ಸೂದ್ ಸಹಾಯ ಮಾಡಿದ್ದರು.

    English summary
    Sonu Sood: After Survey at Sonu Sood Offices, IT Survey at his Residence today.
    Thursday, September 16, 2021, 16:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X