For Quick Alerts
  ALLOW NOTIFICATIONS  
  For Daily Alerts

  ಸರ್ಕಾರಕ್ಕೆ ನಟ ಸೋನು ಸೂದ್ ಮಾನವೀಯತೆ ತುಂಬಿದ ಮನವಿ

  |

  ಕೊರೊನಾ ಸಂಕಷ್ಟದ ಸಮಯದಲ್ಲಿ ಬಹುವಾಗಿ ಜನರ ಸಂಕಷ್ಟಕ್ಕೆ ಆಗುತ್ತಿರುವ ನಟ ಸೋನು ಸೂದ್ ಸರ್ಕಾರಕ್ಕೆ ಮನವಿಯೊಂದನ್ನು ಮಾಡಿದ್ದಾರೆ.

  ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುತ್ತಾ ಸರ್ಕಾರ?? | Filmibeat Kannada

  ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ ಉಳ್ಳ ಸೋನು ಸೂದ್, 'ಯಾರ ಪೋಷಕರು ಕೊರೊನಾದಿಂದಾಗಿ ನಿಧನ ಹೊಂದಿರುತ್ತಾರೆಯೋ ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿ' ಎಂದು ಸೋನು ಸೂದ್ ಮನವಿ ಮಾಡಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿರುವ ಸೋನು ಸೂದ್, ''ಕೊರೊನಾದಿಂದ ತಮ್ಮ ಪ್ರೀತಿ ಪಾತ್ರರರನ್ನು ಕಳೆದುಕೊಂಡವರ ನೆರವಿಗೆ ನಾವುಗಳು ನಿಲ್ಲಬೇಕಿದೆ. ಕೊರೊನಾ ಎರಡನೇ ಅಲೆಯಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ಪೋಷಕರನ್ನು ಕಳೆದುಕೊಂಡ ಆ ಮಕ್ಕಳ ಭವಿಷ್ಯದ ಬಗ್ಗೆ ನಾವು ಚಿಂತಿಸಬೇಕಾಗಿದೆ' ಎಂದಿದ್ದಾರೆ ಸೋನು ಸೂದ್.

  ''ನಾನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಶಿಕ್ಷಣದ ವಿಷಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಸಂಸ್ಥೆಗಳಲ್ಲಿ ಮನವಿ ಮಾಡುವುದೆಂದರೆ ಯಾವ ಮಕ್ಕಳು ಈ ಕೊರೊನಾದಿಂದ ತಮ್ಮ ಪೋಷಕರನ್ನು ಕಳೆದುಕೊಂಡಿರುತ್ತಾರೆಯೋ ಅವರಿಗೆ ಉಚಿತ ಶಿಕ್ಷಣ ಸಿಗುವಂತಾಗಬೇಕು'' ಎಂದಿದ್ದಾರೆ.

  ''ಸರ್ಕಾರಿ, ಖಾಸಗಿ ಶಾಲೆ ಎಲ್ಲೇ ಓದುತ್ತಿದ್ದರೂ ಸಹ ಆ ಮಕ್ಕಳು ಎಲ್ಲಿಯವರೆಗೆ ಓದುತ್ತಾರೋ ಅಲ್ಲಿಯ ವರೆಗೆ ಅವರಿಗೆ ಸರ್ಕಾರವೇ ಉಚಿತವಾಗಿ ಶಿಕ್ಷಣ ಒದಗಿಸಬೇಕು ಹೀಗೊಂದು ಆದೇವನ್ನು ಸರ್ಕಾರ ಹೊರಡಿಸಬೇಕು'' ಎಂದಿದ್ದಾರೆ ಸೋನು ಸೂದ್.

  ಸೋನು ಸೂದ್ ಅವರು ಈ ಹಿಂದೆ ಕೊರೊನಾ ಇರುವ ಕಾರಣಕ್ಕೆ ಬೋರ್ಡ್ ಪರೀಕ್ಷೆಗಳನ್ನು ಮುಂದೂಡುವಂತೆ ಸರ್ಕಾರವನ್ನು ಮನವಿ ಮಾಡಿದ್ದರು. ಅಂತೆಯೇ ಸರ್ಕಾರವು ಪರೀಕ್ಷೆಗಳನ್ನು ಮುಂದೂಡಿತ್ತು. ಇದು ಮಾತ್ರವೇ ಅಲ್ಲದೆ ಸೋನು ಸೂದ್ ಅವರು ಆಮ್ಲಜನಕ ಸಿಲಿಂಡರ್ ವಿತರಣೆ, ಆಸ್ಪತ್ರೆ ಬೆಡ್ ವ್ಯವಸ್ಥೆ, ಅವಶ್ಯಕತೆ ಇರುವವರಿಗೆ ಪ್ಲಾಸ್ಮಾ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಕಳೆದ ವರ್ಷವೂ ಅವರು ಮಾಡಿದ್ದ ಮಾನವೀಯ ಕಾರ್ಯಕ್ಕೆ ದೇಶವೇ ಮೆಚ್ಚುಗೆ ಸೂಚಿಸಿತ್ತು.

  English summary
  Actor Sonu Sood request state and central govt to provide free education to children who lost their parents due to pandemic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X