ಕಾಮಿಡಿ ಶೋನಲ್ಲಿ ಕಣ್ಣೀರಿಟ್ಟ 'ನಿಜ ಹೀರೋ' ನಟ ಸೋನು ಸೂದ್
ನಟ ಸೋನು ಸೂದ್ ವಿಲನ್ ಆಗಿ ದಕ್ಷಿಣ ಭಾರತ ಚಿತ್ರರಂಗಕ್ಕೆ ಪರಿಚಯ. ಬಾಲಿವುಡ್‌ನಲ್ಲಿಯೂ ಸಹ ಬಹುತೇಕ ವಿಲನ್ ಪಾತ್ರಗಳನ್ನೇ ಮಾಡಿದ್ದರು ಸೋನು ಸೂದ್. ಆದರೆ ಕೊರೊನಾ ಸಮಯದಲ್ಲಿ ಅವರು ನಿಜವಾದ ಹೀರೋ ಆಗಿ ಬದಲಾಗಿದ್ದಾರೆ.
Recommended Video
ಅಧಿಕಾರವುಳ್ಳ ಸಚಿವರುಗಳು ಮಾಡದ ಕಾರ್ಯವನ್ನು ಯಾವುದೇ ಅಧಿಕಾರವಿಲ್ಲದೆ, ಸರ್ಕಾರಿ ಹಣವಿಲ್ಲದೆ ಮಾಡಿ ಮುಗಿಸಿ ಲಕ್ಷಾಂತರ ಜನರ ನೆಮ್ಮದಿಗೆ ಕಾರಣವಾಗಿದ್ದಾರೆ ನಟ ಸೋನು ಸೂದ್.
ಕೊರೊನಾ ಸಮಯದಲ್ಲಿ ಸಾವಿರಾರು ಮಂದಿಯನ್ನು ಸ್ವಂತ ಊರುಗಳಿಗೆ ಕಳುಹಿಸಲು ಸೋನು ಸೂದ್ ಸಹಾಯ ಮಾಡಿದ್ದಾರೆ. ಅವರನ್ನು ಯಾರೆಲ್ಲಾ ಸಹಾಯ ಕೇಳಿದ್ದಾರೋ ಅವರೆಲ್ಲರಿಗೂ ಬಿಡದೆ ಸಹಾಯ ಮಾಡಿದ್ದಾರೆ ಸೋನು. ದೇಶವೇ ಅವರನ್ನು ಕೊರೊನಾ ಹೀರೋ ಎಂದು ಬಣ್ಣಿಸುತ್ತಿದೆ. ಆದರೆ ಅಂಥಹಾ ಸೋನು ಸೂದ್, ಕಾಮಿಡಿ ಶೋ ಒಂದರಲ್ಲಿ ಕಣ್ಣೀರು ಹಾಕಿದ್ದಾರೆ.

ಕಪಿಲ್ ಶರ್ಮಾ ಶೋ ನಲ್ಲಿ ವಿಶೇಷ ಅತಿಥಿ
ಹಿಂದಿಯ ಖ್ಯಾತ ಕಾಮಿಡಿ ಶೋ 'ಕಪಿಲ್ ಶರ್ಮಾ ಶೋ' ನಲ್ಲಿ ವಿಶೇಷ ಅತಿಥಿಯಾಗಿ ಸೋನು ಸೂದ್ ಭಾಗವಹಿಸಿದ್ದಾರೆ. ಅದರ ಚಿತ್ರೀಕರಣ ಮುಗಿದಿದ್ದು, ಪ್ರಚಾರದ ಫ್ರೊಮೊಗಳು ಪ್ರಸಾರವಾಗುತ್ತಿವೆ. ಪ್ರೋಮೋದಲ್ಲಿ ಸೋನು ಸೂದ್ ಅಳುತ್ತಿರುವ ದೃಶ್ಯವಿದೆ.

ವಿಶೇಷ ಉಡುಗೊರೆ ನೀಡಿದ ತಂಡ
ಕಾಮಿಡಿ ಶೋ ಕಾರ್ಯಕ್ರಮದಲ್ಲಿ ಸೋನು ಸೂದ್‌ಗೆ ವಿಶೇಷ ಉಡುಗೊರೆಯನ್ನು ಕಪಿಲ್ ಶರ್ಮಾ ಶೋ ನ ತಂಡ ನೀಡಿದೆ. ಸೋನು ಸೂದ್ ಸಹಾಯ ಮಾಡಿದ ವ್ಯಕ್ತಿಗಳು ಸೋನು ಸೂದ್‌ಗೆ ಧನ್ಯವಾದ ತಿಳಿಸಿದ ವಿಡಿಯೋವನ್ನು ಶೋ ನಲ್ಲಿ ಪ್ರಸಾರ ಮಾಡಲಾಗಿದೆ.

ಭಾವುಕರಾಗಿ ಕಣ್ಣೀರಿಟ್ಟ ಸೋನು ಸೂದ್
ತಮಗೆ ಧನ್ಯವಾದ ತಿಳಿಸಿದ, ತಮ್ಮನ್ನು ಹರಸಿದ ಜನರನ್ನು ಕಂಡು ಸೋನು ಸೂದ್ ಕಾರ್ಯಕ್ರಮದಲ್ಲಿ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ. ಸಾವಿರಾರು ಮಂದಿಗೆ ಸೋನು ಸೂದ್ ಸಹಾಯ ಮಾಡಿದ್ದು, ಅವರಲ್ಲಿ ಹಲವರು ಸೋನು ಸೂದ್‌ಗಾಗಿ ಕಳುಹಿಸಿದ್ದ ಸಂದೇಶವನ್ನು ಪ್ರಕಟಿಸಲಾಗಿದೆ.

ಆಗಸ್ಟ್ 1 ರಂದು ಪ್ರಸಾರವಾಗಲಿದೆ
ಕಪಿಲ್ ಶರ್ಮಾ ಶೋ ಕಾರ್ಯಕ್ರಮದಲ್ಲಿ ಹಲವು ಭಾರಿ ಸೋನು ಸೂದ್ ಭಾಗವಹಿಸಿದ್ದರು. ಜಾಕಿ ಚಾನ್ ಅನ್ನು ಶೋ ಗೆ ಕರೆತಂದಿದ್ದರು ಸೋನು ಸೂದ್ ಆದರೆ ಈ ಬಾರಿಯ ಕಾರ್ಯಕ್ರಮ ವಿಶೇಷವಾಗಿರಲಿದೆ. ಕಾರ್ಯಕ್ರಮವು ಆಗಸ್ಟ್ 1 ರಂದು ರಾತ್ರಿ ಪ್ರಸಾರವಾಗಲಿದೆ.


Click it and Unblock the Notifications











