ಸೋನು ಸೂದ್ ಹೆಸರಲ್ಲಿ ನಕಲಿ ಪೋಸ್ಟ್‌ಗಳು: ಎಚ್ಚರಿಕೆ ನೀಡಿದ ನಟ

ದೇಶಾದ್ಯಂತ ಕೊರೊನಾ ವೈರಸ್‌ನಿಂದ ಸಂಕಷ್ಟದಲ್ಲಿರುವ ಜನರಿಗೆ ಸೋನು ಸೂದ್ ತಮ್ಮ ಫೌಂಡೇಶನ್ ಮೂಲಕ ಸಹಾಯ ಮಾಡುತ್ತಿದ್ದಾರೆ. ಸೋನು ಸೂದ್ ಅವರ ಜೊತೆ ಹಲವು ಎನ್‌ಜಿಓ ಸಂಸ್ಥೆಗಳು ಕೈ ಜೋಡಿಸಿದ್ದು, ಅಗತ್ಯ ಆಕ್ಸಿಜನ್, ಬೆಡ್, ಔಷಧ ಹಾಗೂ ದಿನಸಿ ಒದಗಿಸುವ ಮಹತ್ವದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

Recommended Video

Fake! Fake!! ಇದು ನಾನಲ್ಲ ಹುಷಾರಾಗಿರಿ ಎಂದ ಸೋನು ಸೂದ್ | Filmibeat Kannada

ಸೋನು ಸೂದ್ ಅವರ ಈ ಕೆಲಸಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಸೋನು ಅವರ ಕೆಲಸವನ್ನು ಶ್ಲಾಘಿಸಿ ಅನೇಕರು ಸ್ವ-ಇಚ್ಚೆಯಿಂದ ಅವರ ಫೌಂಡೇಶನ್‌ಗೆ ದೇಣಿಗೆ ನೀಡುತ್ತಿದ್ದಾರೆ. ಆದರೆ, ದೇಣಿಗೆ ಕೊಡಿ ಎಂದು ಸೋನು ಸೂದ್ ಎಲ್ಲಿಯೂ ಮನವಿ ಮಾಡಿಲ್ಲ.

ಸೋನು ಸೂದ್ ಅವರ ಈ ಮಾನವೀಯತೆ ಕಾರ್ಯವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಕೆಲವರು ನಕಲಿ ಪೋಸ್ಟ್‌ಗಳನ್ನು ಹಾಕಿ ಹಣ ಸಂಗ್ರಹ ಮಾಡಲು ಮುಂದಾಗಿದ್ದಾರೆ.

Sonu Sood Busts A Fake Donation Post Using His Foundation Name

ಸೋನು ಸೂದ್ ಅವರ ಭಾವಚಿತ್ರ ಹಾಕಿ, ಅದರಲ್ಲಿ ಫೋನ್ ಪೇ ನಂಬರ್ ಹಾಕಿ ದೇಣಿಗೆ ಕೊಡಲು ಬಯಸುವವರು ಕೊಡಬಹುದು ಎಂದು ನಕಲಿ ಪೋಸ್ಟ್‌ಗಳು ವೈರಲ್ ಆಗಿದೆ. ಇದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಸೋನು ಸೂದ್ ''ಇದು ನಕಲಿ'' ಎಚ್ಚರ ಎಂದು ತಿಳಿಸಿದ್ದಾರೆ.

ಸೋನು ಸೂದ್ ಮಾತ್ರವಲ್ಲದೇ ಬಾಲಿವುಡ್‌ನ ಹಲವು ಸ್ಟಾರ್‌ಗಳು ಸಾರ್ವಜನಿಕರ ನೆರವಿಗೆ ಧಾವಿಸಿದ್ದಾರೆ. ಸುಶ್ಮಿತಾ ಸೇನ್, ಭೂಮಿ ಪಡ್ನೆಕರ್, ಅಕ್ಷಯ್ ಕುಮಾರ್, ಕತ್ರಿನಾ ಕೈಫ್, ಆಲಿಯಾ ಭಟ್, ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್ ಸೇರಿದಂತೆ ಹಲವರು ಸಹಾಯ ಹಸ್ತ ಚಾಚಿದ್ದಾರೆ.

More from Filmibeat

English summary
Sonu Sood issues warning against fake racket using his name asking for donations for COVID-19 relief works. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X