ಕೊರೊನಾ ಪಾಸಿಟಿವ್ ಬಂದರೂ ಸಾಮಾಜಿಕ ಕಾರ್ಯ ನಿಲ್ಲಿಸದ ಸೋನು ಸೂದ್

ಬಾಲಿವುಡ್ ನಟ, ಜನಸಾಮಾನ್ಯರ ಪಾಲಿನ ರಿಯಲ್ ಹೀರೋ ಸೋನು ಸೂದ್ ಗೆ ಕೊರೊನಾ ವೈರಸ್ ತಗುಲಿದೆ. ಈ ಕುರಿತು ಸ್ವತಃ ಸೋನು ಸೂದ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸುವ ಮೂಲಕ ಖಚಿತಪಡಿಸಿದ್ದಾರೆ.

ಕೊರೊನಾ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಜನರ ಬೆನ್ನಿಗೆ ನಿಂತಿದ್ದ ಸೋನು ಸೂದ್ ಸ್ವತಃ ವೈರಸ್ ಗೆ ತುತ್ತಾಗಿರುವುದು ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ರಿಯಲ್ ಹೀರೋ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.

ಸೋನು ಸೂದ್ ಸ್ವತಃ ವೈರಸ್ ಗೆ ತುತ್ತಾದರೂ ಸಹ ಹೀರೋ ಆಗಿದ್ದಾರೆ. ಕೊರೊನಾ ಪಾಸಿಟಿವ್ ಬಂದರೂ ತಮ್ಮ ಸಾಮಾಜಿಕ ಕಾರ್ಯವನ್ನು ಮುಂದುವರೆಸಿದ್ದಾರೆ. ಈ ಸಮಯದಲ್ಲಿ ಖಾಸಗಿ ಪತ್ರಿಕೆ ಜೊತೆ ಮಾತನಾಡಿದ ನಟ ಸೋನು ಸೂದ್, ನಾನು ಹೊರಗೆ ಹೋಗುತ್ತಿಲ್ಲ ಆದರೆ ಫೋನ್ ಮೂಲಕ ಮನೆಯಿಂದನೇ ಇನ್ನು ಹೆಚ್ಚಿನ ಸಾಮಾಜಿಕ ಕಾರ್ಯವನ್ನು ಮಾಡುತ್ತಿದ್ದೇನೆ. ಜನರ ಸಂತೋಷಕ್ಕಾಗಿ ನಾನು ಯಾವಾಗಲು ಶ್ರಮಿಸುತ್ತೇನೆ' ಎಂದು ಹೇಳಿದ್ದಾರೆ.

Sonu Sood continue social work spite of tests positive for corona

ಸೋನು ಸೂದ್ ಕೊರೊನಾ ಪಾಸಿಟಿವ್ ಬಂದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ 'ನನಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ನಿಮಗೆ ತಿಳಿಸಲು ಬಯಸುತ್ತೇನೆ. ಕೋವಿಡ್ ಗೆ ಸಂಬಂಧಿಸಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದ್ದು, ಪ್ರಸ್ತುತ ಕ್ವಾರಂಟೈನ್ ಗೆ ಒಳಗಾಗಿದ್ದೇನೆ' ಎಂದು ಸೋನು ಸೂದ್ ತಿಳಿಸಿದ್ದರು.

ಇತ್ತೀಚಿಗಷ್ಟೆ ಸೋನು ಸೂದ್ ಕೊರೊನಾ ಲಸಿಕೆಯನ್ನು ಪಡೆದಿದ್ದರು. ಲಸಿಕೆ ಪಡೆದ ಬೆನ್ನಲ್ಲೇ ಕೊರೊನಾ ವೈರಸ್ ಗೆ ತುತ್ತಾಗಿದ್ದಾರೆ. ಇನ್ನು ಕೊರೊನಾ ಲಸಿಕೆ ಅಭಿಯಾನದಲ್ಲಿ ಸೋನು ಸೂದ್ ಅವರನ್ನು ಪಂಜಾಬ್ ಸರ್ಕಾರ ರಾಯಭಾರಿಯಾಗಿ ನೇಮಕ ಮಾಡಿಕೊಂಡಿತ್ತು. ಕೋವಿಡ್ ಮೊದಲ ಡೋಸ್ ಪಡೆದುಕೊಂಡಿದ್ದ ಸೋನು ಸೂದ್ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಕರೆ ನೀಡಿದ್ದರು.

More from Filmibeat

English summary
Bollywood Actor Sonu Sood continue social work spite of tests positive for corona.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X