twitter
    For Quick Alerts
    ALLOW NOTIFICATIONS  
    For Daily Alerts

    ಪಂಜಾಬ್ ಚುನಾವಣೆ: ಮಾತು ತಪ್ಪಿದ ನಟ ಸೋನು ಸೂದ್

    |

    ಕೊರೊನಾ ಕಾಲದಲ್ಲಿ ತಮ್ಮ ಸಮಾಜ ಸೇವೆಯಿಂದ ನಟ ಸೋನು ಸೂದ್‌ಗೆ ದೊಡ್ಡ ಮಟ್ಟದ ಖ್ಯಾತಿ ಗಳಿಸಿದ್ದಾರೆ. ಕೊರೊನಾ ಕಾಲದಲ್ಲಿ ಸೋನು ಸೂದ್ ಮಾಡಿದ ಸಹಾಯಕ್ಕೆ ಪ್ರತಿಯಾಗಿ ಜನ ಅವರಿಗೆ 'ಮಸೀಹಾ' (ದೇವರು) ಎಂಬ ಬಿರುದು ನೀಡಿದ್ದಾರೆ.

    ಕೊರೊನಾ ಮೊದಲ ಲಾಕ್‌ಡೌನ್ ಸಮಯದಲ್ಲಿ ವಿವಿಧ ನಗರಗಳಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ತಮ್ಮ ಊರುಗಳಿಗೆ ತಲುಪಿಸುವ ಕಾರ್ಯ ಮಾಡಿದ ಸೋನು ಸೂದ್ ಆ ನಂತರವೂ ತಮ್ಮ ಸಮಾಜ ಸೇವಾ ಕಾರ್ಯವನ್ನು ಮುಂದುವರೆಸಿದ್ದಾರೆ.

    ಸೋನು ಸೂದ್ ಸಮಾಜ ಸೇವೆ ಮಾಡುವ ಸಮಯದಲ್ಲಿಯೇ ಇವರು ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶವಿಟ್ಟುಕೊಂಡು ಸಮಾಜ ಸೇವೆ ಮಾಡುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಸೂನು ಸೂದ್ ಚುನಾವಣೆಗೆ ಸ್ಪರ್ಧಿಸಲಿಲ್ಲ ಆದರೆ ಅವರ ಸಹೋದರಿ ಮಾಳವಿಕಾ ಪಂಜಾಬ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ತಮ್ಮ ಸಹೋದರಿ ಚುನಾವಣೆಗೆ ಸ್ಪರ್ಧಿಸಿರುವ ಬಗ್ಗೆ ಮಾತನಾಡಿದ್ದ ಸೋನು ಸೂದ್, ತಾವು ತಮ್ಮ ಸಹೋದರಿ ಪರವಾಗಿ ಚುನವಣೆ ಪ್ರಾರ ಮಾಡುವುದಿಲ್ಲ ಎಂದಿದ್ದರು. ಆದರೆ ಇದೀಗ ಸೋನು ಸೂದ್ ಮಾತು ತಪ್ಪಿದ್ದಾರೆ.

    ಗ್ರಾಮಗಳಿಗೆ ತೆರಳಿ ಪ್ರಚಾರ ಮಾಡಿದ ಸೋನು ಸೂದ್

    ಗ್ರಾಮಗಳಿಗೆ ತೆರಳಿ ಪ್ರಚಾರ ಮಾಡಿದ ಸೋನು ಸೂದ್

    ನಟ ಸೋನು ಸೂದ್, ತಮ್ಮ ಸಹೋದರಿ ಮಾಳವಿಕಾ ಸೂದ್ ಪರವಾಗಿ ಚುನಾವಣೆ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಪಂಜಾಬ್‌ನ ಮೋಗ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಳವಿಕಾ ಸೂದ್ ಚುನಾವಣೆ ಸ್ಪರ್ಧಿಸಿದ್ದು ಸೋಮವಾರ ಸೋನು ಸೂದ್ ತನ್ನ ಸಹೋದರಿಯೊಟ್ಟಿಗೆ ಮೋಗಾದ ಮಂಗೇವಾಲ, ಧರ್‌ಪುರ್, ಕಾಖರಾನಾ ಇತರೆ ಪಟ್ಟಣ ಹಾಗೂ ಗ್ರಾಮಗಳಿಗೆ ಭೇಟಿ ನೀಡಿ ಜನರಲ್ಲಿ ಮತ ಯಾಚನೆ ಮಾಡಿದ್ದಾರೆ.

    ಸೋದರಿ ಪರ ಸೋನು ಸೂದ್ ಪ್ರಚಾರ

    ಸೋದರಿ ಪರ ಸೋನು ಸೂದ್ ಪ್ರಚಾರ

    ಪ್ರಚಾರದ ವೇಳೆ ಮಾತನಾಡಿದ ನಟ ಸೋನು ಸೂದ್, ತಮ್ಮ ಸಹೋದರಿ ಮಾಳವಿಕಾ ಮಹಿಳೆಯರು, ವೃದ್ಧರು ಹಾಗೂ ಅಂಗವಿಕರ ಕಲ್ಯಾಣಕ್ಕಾಗಿ ಮಾಡಿದ ಕಾರ್ಯಗಳನ್ನು ಜನರಿಗೆ ತಿಳಿಸಿದರು. ''ತಮ್ಮ ಸಹೋದರಿಯನ್ನು ಗೆಲ್ಲಿಸಿದರೆ ಗ್ರಾಮೀಣ ಭಾಗದ ಅಭಿವೃದ್ಧಿ ಆಕೆಯ ಗುರಿಯಾಗಿರಲಿದೆ. ಅಲ್ಲದೆ ಮೋಗಾನಲ್ಲಿ ಒಂದು ರಾಷ್ಟ್ರಮಟ್ಟದ ಅತ್ಯುತ್ತಮ ದರ್ಜೆಯ ಆಸ್ಪತ್ರೆಯನ್ನು ನಿರ್ಮಿಸುವುದು ಸಹ ಆಕೆಯ ಕನಸು'' ಎಂದರು ಸೋನು ಸೂದ್.

    ಕಂಪ್ಯೂಟರ್ ಸೈನ್ಸ್ ಎಂಜಿನಿಯರ್ ಪದವೀಧರೆ ಮಾಳವಿಕಾ ಸೂದ್

    ಕಂಪ್ಯೂಟರ್ ಸೈನ್ಸ್ ಎಂಜಿನಿಯರ್ ಪದವೀಧರೆ ಮಾಳವಿಕಾ ಸೂದ್

    ಕಂಪ್ಯೂಟರ್ ಸೈನ್ಸ್ ಎಂಜಿನಿಯರ್ ಪದವೀಧರೆ ಆಗಿರುವ ಮಾಳವಿಕಾ ಸೂದ್ ಮಾತನಾಡಿ, ''ನನಗೆ ಮತ ನೀಡುವುದೆಂದರೆ ಕ್ಷೇತ್ರದ ಎಲ್ಲರಿಗೂ ಮತ ನೀಡಿದಂತೆ. ಹಾಗಾಗಿ ನನಗೆ ಮತ ನೀಡುವ ಮೂಲಕ ನಿಮಗೆ ನೀವೇ ಮತ ಹಾಕಿಕೊಳ್ಳಿ'' ಎಂದರು. ಗ್ರಾಮವೊಂದರಲ್ಲಿ ಮಾಳವಿಕಾ ಸೂದ್ ಅವರನ್ನು ಲಡ್ಡುನಲ್ಲಿ ತೂಗಿ ಗೌರವ ಸೂಚಿಸಲಾಯಿತು. ಸೋನು ಸೂದ್ ಅನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದು ಪ್ರಚಾರದ ವಿಶೇಷಗಳಲ್ಲೊಂದು.

    ಪ್ರಚಾರ ಮಾಡುವುದಿಲ್ಲ ಎಂದಿದ್ದ ಸೋನು ಸೂದ್

    ಪ್ರಚಾರ ಮಾಡುವುದಿಲ್ಲ ಎಂದಿದ್ದ ಸೋನು ಸೂದ್

    ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟ ಸೋನು ಸೂದ್, 'ಸಹೋದರಿ ಬಗ್ಗೆ ನನಗೆ ಹೆಮ್ಮೆ ಇದೆ. ಹಲವು ವರ್ಷಗಳಿಂದ ಆಕೆ ಮೋಗದಲ್ಲಿ ನೆಲೆಸಿದ್ದಾಳೆ. ಅಲ್ಲಿನ ಸಮಸ್ಯೆಗಳು ಆಕೆಗೆ ಚೆನ್ನಾಗಿ ಗೊತ್ತಿವೆ. ರಾಜಕೀಯದ ಮೂಲಕ ಆಕೆ ನೇರವಾಗಿ ಜನರೊಟ್ಟಿಗೆ ಸಂಪರ್ಕ ಸಾಧಿಸಿ, ನೇರವಾಗಿ ಜನರಿಗೆ ಸಹಾಯ ಮಾಡಲು ಸಾಧ್ಯವಾಗುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಸಹೋದರಿಯ ಪರವಾಗಿ ನಾನು ಪ್ರಚಾರ ಮಾಡುವುದಿಲ್ಲ. ಇದು ಆಕೆಯ ಪ್ರಯಾಣ. ಅಲ್ಲದೆ ನನಗೂ ರಾಜಕೀಯಕ್ಕೂ ಸಂಬಂಧವಿಲ್ಲ. ನಾನು ಈ ವರೆಗೆ ಮಾಡಿಕೊಂಡು ಬಂದಿರುವ ಕಾರ್ಯವನ್ನು ಮುಂದುವರೆಸುತ್ತೇನೆ. ನಾನು ಆಕೆಯ ಪರವಾಗಿ ಪ್ರಚಾರ ಮಾಡುವುದಿಲ್ಲ. ಆಕೆಯೇ ಕಷ್ಟಪಟ್ಟು ಕೆಲಸ ಮಾಡಿ ತನ್ನ ಜಯವನ್ನು ತಾನೇ ಗಳಿಸಲಿ ಎಂಬ ಉದ್ದೇಶ ನನ್ನದು'' ಎಂದಿದ್ದರು. ಆದರೆ ಈಗ ಸಹೋದರಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.

    ಹಲವು ರಾಜಕೀಯ ಪಕ್ಷಗಳಿಂದ ಆಹ್ವಾನ

    ಹಲವು ರಾಜಕೀಯ ಪಕ್ಷಗಳಿಂದ ಆಹ್ವಾನ

    ಸೋನು ಸೂದ್‌ಗೆ ಹಲವು ರಾಜಕೀಯ ಪಕ್ಷಗಳು ಸದಸ್ಯತ್ವದ ಆಹ್ವಾನ ನೀಡಿದ್ದವು. ಎಎಪಿ ಪಕ್ಷದಿಂದ ಸೋನು ಸೂದ್ ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಸೋನು ಸೂದ್ ಎಲ್ಲ ಪಕ್ಷಗಳ ಆಹ್ವಾನ ತಿರಸ್ಕರಿಸಿದರು. ಇದೇ ಸಮಯಕ್ಕೆ ಸರಿಯಾಗಿ ಸೋನು ಸೂದ್ ಮೇಲೆ ಐಟಿ ರೇಡ್ ಸಹ ಮಾಡಲಾಯಿತು. ಇದೀಗ ಸೋನು ಸೂದ್ ಸಹೋದರಿ ಮಾಳವಿಕಾ ಕಾಂಗ್ರೆಸ್ ಟಿಕೆಟ್‌ನಿಂದ ಚುನಾವಣೆ ಸ್ಪರ್ಧಿಸಿದ್ದು, ಸ್ವತಃ ಸೋನು ಸೂದ್ ಸಹೋದರಿಯ ಚುನಾವಣೆಯ ಉಸ್ತುವಾರಿ ವಹಿಸಿದ್ದಾರೆ. ಹಲವು ಬಾರಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧುವನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪಂಜಾಬ್ ಸಿಎಂ ಚೆನ್ನಿ ಬಗ್ಗೆಯೂ ಧನಾತ್ಮಕವಾಗಿ ಸೋನು ಸೂದ್ ಮಾತನಾಡಿದ್ದಾರೆ.

    English summary
    Actor Sonu Sood did election campaign for his sister Malavika Sood. She contested from Moga assembly constituency of Punjab from Congress ticket.
    Tuesday, January 25, 2022, 9:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X