ಅಭಿಮಾನಿ ಕೊಟ್ಟ ವಿಚಿತ್ರ ಉಡುಗೊರೆ ಕಂಡು ಬೇಸರಗೊಂಡ ಸೋನು ಸೂದ್

Sonu Sood felt sad after receiving the photo sketch from a fan

ಕೊರೊನಾ ಸಂದರ್ಭದಲ್ಲಿ ನಟ ಸೋನು ಸೂದ್ ಮಾಡಿದ ಸಹಾಯ ಒಂದೆರಡಲ್ಲ. ಊಟವಿಲ್ಲದವರಿಗೆ ಉಚಿತ ಊಟದ ವ್ಯವಸ್ಥೆ, ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದವರಿಗೆ ನೆರವು ಹಾಗೂ ತಮ್ಮ ತಮ್ಮ ಊರುಗಳಿಗೆ ತೆರಳಲು ಆಗದೇ ಸಿಲುಕಿಕೊಂಡಿದ್ದ ಜನರಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ನಟ ಸೋನು ಸೂದ್ ಕಲ್ಪಿಸಿ ವಿಶಾಲ ಹೃದಯವಂತಿಕೆ ಮೆರೆದಿದ್ದರು.

ಸೋನು ಸೂದ್ ಅವರ ಈ ಒಳ್ಳೆಯ ಕೆಲಸದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು, ಇವರಿಂದ ಸಹಾಯ ಪಡೆದ ಜನರು ಸೋನು ಸೂದ್ ದೇವರಂಥಾ ಮನುಷ್ಯ ಎಂದು ಕೊಂಡಾಡಿದರು. ಹೀಗೆ ಸೋನು ಸೂದ್ ಅವರ ಸಮಾಜಮುಖಿ ಕೆಲಸಗಳ ವಿಡಿಯೋಗಳನ್ನು ನೋಡಿದ ಜನರು ಸೋನು ಸೂದ್ ಅವರನ್ನು ಆರಾಧಿಸಲು ಆರಂಭಿಸಿದರು. ಸೋನು ಸೂದ್ ಅವರಿಗೆ ದೇವರ ಸ್ಥಾನ ನೀಡಿ ಕೆಲ ಮಂದಿ ಪೂಜಿಸಲಾರಂಭಿಸಿದರು.

ಅಷ್ಟೇ ಅಲ್ಲದೆ ಸೋನು ಸೂದ್ ಅವರನ್ನು ಭೇಟಿಯಾಗಲು ಅವರ ನಿವಾಸದ ಮುಂದೆ ಅಭಿಮಾನಿಗಳು ಜಮಾಯಿಸಲಾರಂಭಿಸಿದರು. ತಮ್ಮ ನೆಚ್ಚಿನ ನಟನಿಗೆ ಭಿನ್ನವಿಭಿನ್ನ ಉಡುಗೊರೆಗಳನ್ನು ಅವರ ಅಭಿಮಾನಿಗಳು ನೀಡಿದ್ದರು. ಇದೀಗ ಮತ್ತೋರ್ವ ಸೋನು ಸೂದ್ ಅವರ ಅಭಿಮಾನಿ ತನ್ನ ನೆಚ್ಚಿನ ನಟನಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಾಜಸ್ತಾನ ಮೂಲದ ಕಲಾವಿದ ಮಧು ಗುರ್ಜರ್ ಎಂಬಾತ ತಾನೇ ಬಿಡಿಸಿದ ಚಿತ್ರವನ್ನು ಸೋನು ಸೂದ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಈ ವಿಶೇಷ ಪೇಂಟಿಂಗ್ ನೋಡಿದ ಸೋನು ಸೂದ್ ತುಂಬಾ ಚೆನ್ನಾಗಿ ರಚಿಸಿದ್ದೀರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ನಂತರದಲ್ಲಿ ಈ ಚಿತ್ರವನ್ನು ಬಿಡಿಸಲು ಆ ಕಲಾವಿದ ರಕ್ತವನ್ನು ಬಳಸಿದ್ದ ಎಂಬ ವಿಷಯವನ್ನು ತಿಳಿದ ಸೋನು ಸೂದ್ ಬೇಸರ ವ್ಯಕ್ತಪಡಿಸಿದ್ದಾರೆ. ರಕ್ತ ಅತ್ಯಮೂಲ್ಯವಾಗಿದ್ದು ಈ ರೀತಿ ಚಿತ್ರ ಬರೆಯಲು ಬಳಸಿ ವ್ಯರ್ಥ ಮಾಡಬಾರದು ಬದಲಾಗಿ ರಕ್ತದಾನ ಮಾಡಬೇಕು ಎಂದು ಸೋನು ಸೂದ್ ಸಂದೇಶವನ್ನು ನೀಡಿದ್ದಾರೆ. ಸದ್ಯ ಮಧು ಗುರ್ಜರ್ ಹಾಗೂ ಸೋನು ಸೂದ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

More from Filmibeat

English summary
Sonu Sood felt sad after receiving the photo sketch from a fan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X