ಫೋಟೋ ವೈರಲ್; ಸಿನಿಮಾ ಕಾರ್ಮಿಕರಿಗೆ ಮೊಬೈಲ್ ಗಿಫ್ಟ್ ನೀಡಿದ ಸೋನು ಸೂದ್

ಬಹುಭಾಷಾ ನಟ ಸೋನು ಸೂದ್ ಅವರ ಮಾನವೀಯ ಕೆಲಸದ ಬಗ್ಗೆ ವಿವರ ನೀಡಬೇಕಾಗಿಲ್ಲ. ಸೋನು ಸೂದ್ ಅವರನ್ನು ಅಭಿಮಾನಿಗಳು ದೇವರಂತೆ ಆರಾಧಿಸುತ್ತಾರೆ. ರಿಯಲ್ ಹೀರೋ ಸೋನು ಸೂದ್ ತನ್ನ ಮಾನವೀಯ ಕೆಲಸವನ್ನು ಮುಂದುರೆಸಿಕೊಂಡು ಬಂದಿದ್ದಾರೆ.

ಇದೀಗ ಸಿನಿಮಾದಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರಿಗೆ ಮೊಬೈಲ್ ಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಸೋನು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಇತ್ತೀಚಿಗಷ್ಟೆ ಸೋನು, ಶಾಲಾ ಮಕ್ಕಳಿಗೆ ಸ್ಮಾರ್ಟ್ ಫೋನ್ ಗಳನ್ನು ವಿತರಿಸಿದ್ದರು. ಈ ಮೂಲಕ ಅನೇಕ ಮಕ್ಕಳ ಆನ್ ಲೈನ್ ಶಿಕ್ಷಣಕ್ಕೆ ನೆರವಾಗಿದ್ದರು ಸೋನು ಸೂದ್.

ಇದೀಗ ಮತ್ತೊಮ್ಮೆ ಮೊಬೈಲ್ ಫೋನ್ ಗಳನ್ನು ಉಚಿತವಾಗಿ ನೀಡಿದ್ದಾರೆ. ಸುಮಾರು 100 ಮಂದಿ ಸಿನಿಮಾ ಕಾರ್ಮಿಕರಿಗೆ ಮೊಬೈಲ್ ಕೊಟ್ಟಿದ್ದಾರೆ. ಸೋನು ಸೂದ್ ಸದ್ಯ ಹೈದರಾಬಾದ್ ನಲ್ಲಿದ್ದಾರೆ. ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Sonu Sood gifts 100 smartphones to Acharya crew in Hyderabad

ಆಚಾರ್ಯ ಸಿನಿಮಾ ಸೆಟ್ ನಲ್ಲಿ ಕೆಲಸ ಮಾಡುತ್ತಿದ್ದ ಅನೇಕ ದಿನಗೂಲಿ ನೌಕರರ ಬಳಿ ಸ್ಮಾರ್ಟ್ ಫೋನ್ ಗಳಿಲ್ಲ ಎಂದು ತಿಳಿದ ಸೋನು ಸೂದ್, ತಕ್ಷಣ ಫೋನ್ ಗಳನ್ನು ತರಿಸಿಕೊಂಡು ಗಿಫ್ಟ್ ಮಾಡಿದ್ದಾರೆ. ಇದು ಅವರ ಮಕ್ಕಳ ಶಿಕ್ಷಣಕ್ಕು ಸಹಾಯವಾಗಲಿದೆ ಎನ್ನುವುದು ಸೋನು ಸೂದ್ ಅವರ ಉದ್ದೇಶ. ಮೊಬೈಲ್ ಪಡೆದ ಕಾರ್ಮಿಕರು ಸಂತಸ ವ್ಯಕ್ತಪಡಿಸಿ, ಮನಸಾರೆ ಹರಿಸಿದ್ದಾರೆ.

Sonu Sood gifts 100 smartphones to Acharya crew in Hyderabad

ಮೊಬೈಲ್ ಫೋನ್ ನೀಡುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೋನು ಸೂದ್ ಕೆಲಸಕ್ಕೆ ತೆಲುಗು ಅಭಿಮಾನಿಗಳು ಮೆಚ್ಚಿಗೆ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಸೋನು ಸೂದ್ ಆಚಾರ್ಯ ಸಿನಿಮಾದ ಅನುಭವ ಹಂಚಿಕೊಂಡಿದ್ದರು. ವಿಲನ್ ಆಗಿ ಕಾಣಿಸಿಕೊಳ್ಳುತ್ತಿರುವ ಸೋನ್ ಸೂದ್ ಮೇಲೆ ನಟ ಚಿರಂಜೀವಿ ಕೈ ಮಾಡಲು ಹಿಂದೇಟು ಹಾಕಿದ್ದ ಬಗ್ಗೆ ಬಹಿರಂಗ ಪಡಿಸಿದ್ದರು. ಇದೀಗ ಅಭಿಮಾನಿಗಳು ವಿಲನ್ ಆಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸೋನು ಸೂದ್ ಹೇಳಿದ್ದಾರೆ.

Recommended Video

ಕಛೇರಿ ಕೆಲಸದವನ ಮದುವೆಗೆ ಕುಮುಟಾಗೆ ಬಂದ ಅಪ್ಪು | Puneeth Rajkumar | Filmibeat Kannada

More from Filmibeat

English summary
Actor Sonu Sood gifts 100 smartphones to Acharya crew in Hyderabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X