ಚಂಡಮಾರುತದ ಹೊಡೆತಕ್ಕೆ ಸಿಲುಕಿದ 28 ಸಾವಿರ ನಿರಾಶ್ರಿತರಿಗೆ ನೆರವಾದ ನಟ ಸೋನು ಸೂದ್
ಸಾವಿರಾರು ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಮೆನೆಗೆ ಕಳುಹಿಕೊಡುತ್ತಿರುವ ನಟ ಸೋನು ಸೂದ್ ಈಗ ನಿಸರ್ಗ ಚಂಡಮಾರುತ್ತಕ್ಕೆ ಸಿಲುಕಿದ ಕುಟುಂಬದವರಿಗೆ ನೆರವಾಗಿದೆ. ಚಂಡಮಾರುತದ ಹೊಡೆತಕ್ಕೆ ಸಿಲುಗಿದ ನಲಗುತ್ತಿದ್ದ 28 ಸಾವಿರ ನಿರಾಶ್ರಿತರಿಗೆ ಸೋನು ಸೂದ್ ಸಹಾಯ ಹಸ್ತ ಚಾಚಿದ್ದಾರೆ.
Recommended Video
28 ಸಾವಿರ ಮಂದಿಗೆ ಆಹಾರ ಒದಗಿಸುವ ಜೊತೆಗೆ ಆಶ್ರಯದ ವ್ಯವಸ್ಥೆಯನ್ನು ಮಾಡಿದ್ದಾರೆ. ನಿರಾಶ್ರಿತರನ್ನು ಹಲವಾರು ಶಾಲೆ ಮತ್ತು ಕಾಲೇಜುಗಳಗೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೋನು ಸೂದ್, "ಇಂದು ನಾವೆಲ್ಲರು ಕಠಿಣ ಸಮಯವನ್ನು ಎದುರಿಸುತ್ತಿದ್ದೀವಿ. ಇದರ ವಿರುದ್ಧ ಹೋರಾಡಲು ಉತ್ತಮ ಮಾರ್ಗವೆಂದರೆ ಪರಸ್ಪರ ಬೆಂಬಲದ ವ್ಯವಸ್ಥೆ. ನನ್ನ ತಂಡ ಮತ್ತು ನಾನು 28 ಸಾವಿರಕ್ಕೂ ಹೆಚ್ಚು ಜನರಿಗೆ ಆಹಾರವನ್ನು ವಿತರಿಸಿದ್ದೇವೆ" ಎಂದಿದ್ದಾರೆ.
"ಕರಾವಳಿ ಪ್ರದೇಶಗಳ ಜನರು ಮತ್ತು ಅವರನ್ನು ವಿವಿಧ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಪುನರ್ವಸತಿ ಮಾಡಿದ್ದೀವಿ. ಅವರೆಲ್ಲರೂ ಈಗ ಸುರಕ್ಷಿತವಾಗಿದ್ದಾರೆ. ನಿಸರ್ಗ ಚಂಡಮಾರುತದಿಂದಗಾಗಿ ಮುಂಬೈನಲ್ಲಿ ಸಿಲುಕಿಕೊಂಡದ್ದ 200 ಅಸ್ಸಾಮಿನ ವಲಸಿಗನ್ನು ಆಶ್ರಯ ಮನೆಗಳಿಗೆ ಸ್ಥಳಾಂತರಿಸಲಾಗಿದೆ" ಎಂದು ಹೇಳಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ಎಬ್ಬಿರುವ ನಿಸರ್ಗ ಸೈಕ್ಲೋನ್ ಮಹಾರಷ್ಟ್ರದಲ್ಲಿ ಭಾರಿ ಆತಂಕ ಸೃಷ್ಟಿಸಿತ್ತು. ಈಗಾಗಲೆ ಕೊರೊನಾ ಹಾವಳಿಯಿಂದ ತತ್ತರಿಸಿರುವ ಮುಂಬೈ ನಗರಕ್ಕೆ ಮತ್ತೊಂದು ಬೀತಿ ಎದುರಾಗಿತ್ತು. ಆದರೆ ನಿಸರ್ಗ ಚಂಡಮಾರುತದ ವೇಗ ಇಳಿಕೆಯಾದ ಪರಿಣಾಮ ಭಾರಿ ಪ್ರಮಾಣದ ಅನಾಹುತ ತಪ್ಪಿದೆ.


Click it and Unblock the Notifications











