twitter
    For Quick Alerts
    ALLOW NOTIFICATIONS  
    For Daily Alerts

    ಒಂಟಿ ಕಾಲಲ್ಲಿ ಒಂದು ಕಿ.ಮೀ ನಡೆದು ಶಾಲೆಗೆ ಹೋಗುತ್ತಿದ್ದ ಬಾಲಕಿಗೆ ಸೋನು ಸೂದ್ ಸಹಾಯ

    |

    ಕೋವಿಡ್ ಸಮಯದಲ್ಲಿ ಸಾವಿರಾರು ಕಾರ್ಮಿಕರಿಗೆ ಸಹಾಯ ಮಾಡಿ 'ಮಸೀಯಾ' (ದೇವರು) ಎನಿಸಿಕೊಂಡಿದ್ದ ನಟ ಸೋನು ಸೂದ್ ತಮ್ಮ ಸಹಾಯ ಹಸ್ತವನ್ನು ಹಿಂತೆಗೆದುಕೊಂಡಿಲ್ಲ.

    ಕೋವಿಡ್ ಆರಂಭವಾದಾಗಿನಿಂದಲೂ ಸತತವಾಗಿ ಸಮಾಜ ಸೇವೆಯಲ್ಲಿ ತೊಡಗಿರುವ ಸೋನು ಸೂದ್ ತಮ್ಮ ಗಮನಕ್ಕೆ ಬರುವ ಅಥವಾ ಸಹಾಯ ಅರಸಿ ಬರುವ ವ್ಯಕ್ತಿಗಳಿಗೆ ಕೈಲಾದ ಸಹಾಯ ಮಾಡುತ್ತಲೇ ಬಂದಿದ್ದಾರೆ.

    ಇದೀಗ ಬಿಹಾರದ ಬಾಲಕಿಯೊಬ್ಬರಿಗೆ ಸೋನು ಸೂದ್ ಮಾಡಿರುವ ಸಹಾಯ ಮತ್ತೊಮ್ಮೆ ಸೋನು ಅವರ ವಿಶಾಲ ವ್ಯಕ್ತಿತ್ವದ ಪರಿಚಯವನ್ನು ಜಗತ್ತಿಗೆ ಮಾಡಿಕೊಟ್ಟಿದೆ.

    Sonu Sood Helping Bihar Girl Who Walks One KM In One Leg To Go To School

    ಒಂದೇ ಕಾಲಿನಲ್ಲಿ ಸುಮಾರು ಒಂದು ಕಿ.ಮೀ ನಡೆದು ಶಾಲೆಗೆ ಹೋಗುತ್ತಿದ್ದ ಬಿಹಾರದ ಹುಡುಗಿಯೊಬ್ಬಳ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಹಲವರು ಆ ಬಾಲಕಿಯ ಪರಿಸ್ಥಿತಿಯ ಬಗ್ಗೆ ಮರುಗಿದ್ದರು. ಇನ್ನು ಕೆಲವರು ವ್ಯವಸ್ಥೆಯ ಬಗ್ಗೆ ಹಿಡಿ ಶಾಪ ಹಾಕಿದ್ದರು. ಆದರೆ ಸೋನು ಸೂದ್ ಮಾತ್ರ ಆ ಬಾಲಕಿಯ ಕಷ್ಟ ನೋಡಿ ಆಕೆಯ ಸಹಾಯಕ್ಕೆ ಧಾವಿಸಿದ್ದಾರೆ.

    ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸೋನು ಸೂದ್, ''ಇನ್ನು ಮುಂದೆ ಈ ಬಾಲಕಿ ಒಂದು ಕಾಲಿನಲ್ಲಿ ಅಲ್ಲ, ಎರಡೂ ಕಾಲಿನಲ್ಲಿ ಕುಣಿಯುತ್ತಾ ಶಾಲೆಗೆ ಹೋಗುತ್ತಾಳೆ. ನಿಮಗಾಗಿ ಟಿಕೆಟ್ ಕಳಿಸುತ್ತಿದ್ದೇನೆ. ನೀವು ಎರಡೂ ಕಾಲಿನಿಂದ ನಡೆಯುವ ಸಮಯ ಬಂದಾಗಿದೆ'' ಎಂದಿದ್ದಾರೆ.

    ಬಾಲಕಿಗೆ 'ಪ್ರಾಸ್ಥೆಟಿಕ್ ಲೆಗ್' ಹಾಕಿಸಲು ಸೋನು ಸೂದ್ ನಿರ್ಧಾರ ಮಾಡಿದ್ದು, ಅದೇ ಕಾರಣಕ್ಕೆ ಬಾಲಕಿಯನ್ನು ಮುಂಬೈಗೆ ಕರೆಸಿಕೊಂಡು ಶಸ್ತ್ರಚಿಕಿತ್ಸೆ ಮಾಡಿಸುತ್ತಿದ್ದಾರೆ.

    ಹೀಗೆ ಒಂಟಿ ಕಾಲಿನಲ್ಲಿ ಶಾಲೆಗೆ ಹೋಗುತ್ತಿರುವ ಬಾಲಕಿಯ ಹೆಸರು ಸೀಮಾ ಎಂದಾಗಿದ್ದು, ಬಿಹಾರದ ಜಮುಯಿ ಜಿಲ್ಲೆಯಲ್ಲಿ ಸೀಮಾ ವಾಸಿಸುತ್ತಿದ್ದಾಳೆ. ಹತ್ತು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಸೀಮಾ ತನ್ನ ಒಂದು ಕಾಲನ್ನು ಕಳೆದುಕೊಂಡಿದ್ದಾಳೆ. ಆದರೂ ಒಂದೇ ಕಾಲಿನಲ್ಲಿಯೇ ದಿನನಿತ್ಯದ ಕೆಲಸಗಳನ್ನು ಮಾಡುತ್ತಿದ್ದಾಳೆ. ಸುಮಾರು ಒಂದು ಕಿ.ಮೀ ನಡೆದು ಪ್ರತಿದಿನ ಶಾಲೆ ಸೇರುವ ಸೀಮಾ, ಓದಿನಲ್ಲೂ ಮುಂದಿದ್ದಾಳೆ. ಸೀಮಾಳ ತಂದೆ ಕೂಲಿ ಕಾರ್ಮಿಕ ವೃತ್ತಿ ಮಾಡುತ್ತಿದ್ದಾರೆ.

    ಸೀಮಾ, ಒಂದು ಕಾಲಿನಲ್ಲಿ ಕುಪ್ಪಳಿಸುತ್ತಾ ಶಾಲೆಗೆ ಹೋಗುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಸೀಮಾಳ ವಿಡಿಯೋ ಹಲವರಿಗೆ ಸ್ಪೂರ್ತಿ ತುಂಬಿದೆ. ಈ ಬಾಲಕಿಗೆ ಸಹಾಯ ಮಾಡಲು ಹಲವರು ಮುಂದೆ ಬಂದಿದ್ದಾರೆ. ಇದೀಗ ಸೋನು ಸೂದ್, ಆ ಬಾಲಕಿಗೆ ನಕಲಿ ಕಾಲು ಹಾಕಿಸುತ್ತಿದ್ದಾರೆ.

    English summary
    Actor Sonu Sood helping Bihar girl who walks one kn daily in one leg to go to school. Bihar's Sima lost her leg in an accident, she walks one KM daily in just one leg to reach school.
    Friday, May 27, 2022, 9:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X