For Quick Alerts
  ALLOW NOTIFICATIONS  
  For Daily Alerts

  '10 ನಿಮಿಷದಲ್ಲಿ ಸಿಲಿಂಡರ್ ತಲುಪಲಿದೆ ಸಹೋದರ..' ಸುರೇಶ್ ರೈನಾಗೆ ಸೋನು ಸೂದ್ ನೆರವು

  |

  ಕೊರೊನಾ ವೈರಸ್ ಬಡವ, ಶ್ರೀಮಂತ, ಗಣ್ಯರು ಎನ್ನದೇ ಎಲ್ಲರನ್ನು ಕಾಡುತ್ತಿದೆ, ಬಲಿ ಪಡೆಯುತ್ತಿದೆ. ಕೊರೊನಾ ಸೋಂಕಿನಿಂದ ಕ್ರಿಕೆಟಿಗ ಸುರೇಶ್ ರೈನಾ ಕುಟುಂಬ ಕೂಡ ನರಳಾಡುತ್ತಿದೆ. ಆಕ್ಸಿಜನ್ ಸಿಗದೆ ಪರದಾಡುತ್ತಿದ್ದ ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಕುಟುಂಬಕ್ಕೆ ಸೋನು ಸೂದ್ ನೆರವಾಗಿದ್ದಾರೆ.

  ಯೋಗಿ ಕಯ್ಯಲ್ಲಿ ಆಗದೆ ಇದ್ದಿದ್ದನ್ನು ಸೋನು ಸೂದ್ 10 ನಿಮಿಷದಲ್ಲಿ ಮಾಡಿದ್ರು | Filmibeat Kannada

  ಸುರೇಶ್ ರೈನಾ ಚಿಕ್ಕಮ್ಮ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ರೈನಾ ಚಿಕ್ಕಮ್ಮ ಆಕ್ಸಿಜನ್ ಸಿಲಿಂಡರ್ ಸಿಗದೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಈ ಬಗ್ಗೆ ಸುರೇಶ್ ರೈನಾ ಟ್ವಿಟ್ಟರ್ ಮೂಲಕ ಸಿಎಂ ಯೋಗಿ ಆದಿತ್ಯನಾಥ್‌ಗೆ ಸಹಾಯ ಕೋರಿದ್ದಾರೆ.

  ಯಲಹಂಕದ ಆಸ್ಪತ್ರೆಗೆ ಆಮ್ಲಜನಕ ಒದಗಿಸಿದ ಸೋನು ಸೂದ್ಯಲಹಂಕದ ಆಸ್ಪತ್ರೆಗೆ ಆಮ್ಲಜನಕ ಒದಗಿಸಿದ ಸೋನು ಸೂದ್

  ಆದರೆ ಆದಿತ್ಯನಾಥ್ ಸಹಾಯಕ್ಕೆ ಧಾವಿಸಿಲ್ಲ. ಮೀರತ್‌ನಲ್ಲಿರುವ 65 ವರ್ಷದ ಸುರೇಶ್ ರೈನಾ ಚಿಕ್ಕಮ್ಮನ ಸಹಾಯಕ್ಕೆ ನಟ ಸೋನು ಸೂದ್ ನೆರವಾಗಿದ್ದಾರೆ. ತಕ್ಷಣ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ ಸೋನು ಸೂದ್ ವಿಳಾಸ ನೀಡುವಂತೆ ಕೇಳಿಕೊಂಡಿದ್ದಾರೆ. '10 ನಿಮಿಷದಲ್ಲೇ ಸಿಲಿಂಡರ್ ತಲುಪಲಿದೆ ಸಹೋದರ' ಎಂದು ಸೋನು ಸೂದ್ ಹೇಳಿದ್ದಾರೆ. ಮಾತಿನಂತೆ 10 ನಿಮಿಷದಲ್ಲಿ ರೈನಾಗೆ ಸಿಲಿಂಡರ್ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ ಸೋನು ಸೂದ್.

  ಸಿಎಂ ಆದಿತ್ಯನಾಥ್ ಅವರಿಂದ ಸಾಧ್ಯವಾಗದ ಕೆಲಸವನ್ನು ಸೋನು ಸೂದ್ ಮಾಡಿರುವ ಬಗ್ಗೆ ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಉತ್ತರ ಪ್ರದೇಶದ ಸಿಎಂ ಆದಿತ್ಯನಾಥ್ ಅವರೋ ಅಥವಾ ಸೋನು ಸೂದ್ ಅವರೋ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಯುಪಿಯಲ್ಲಿಯೂ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿದೆ. ಆಕ್ಸಿಜನ್, ಬೆಡ್, ಚಿಕಿತ್ಸೆಗಾಗಿ ಜನ ಪರದಾಡುತ್ತಿದ್ದಾರೆ.

  ನಟ ಸೋನು ಸೂದ್ ಯಾವುದೇ ಪ್ರದೇಶದ ಜನತೆ ಕಷ್ಟ ಎಂದರೆ ತಕ್ಷಣಕ್ಕೆ ಸ್ಪಂದಿಸುತ್ತಿದ್ದಾರೆ. ಇಡೀ ದೇಶಕ್ಕೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಕರ್ನಾಟಕದ ಕೆಲವು ಆಸ್ಪತ್ರೆಗಳಿಗೂ ಸೋನು ಸೂದ್ ಆಕ್ಸಿಜನ್ ಸಹಾಯ ಮಾಡಿದ್ದಾರೆ.

  English summary
  Sonu Sood helps Suresh Raina by Arranging oxygen cylinder for his Aunt.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X