For Quick Alerts
  ALLOW NOTIFICATIONS  
  For Daily Alerts

  ಸರ್ ನನಗೆ 1 ಕೋಟಿ ರೂ. ಕೊಡಿ; ನೆಟ್ಟಿಗನ ಬೇಡಿಕೆಗೆ ಸೋನು ಸೂದ್ ಪ್ರತಿಕ್ರಿಯೆ ಹೀಗಿತ್ತು

  |

  ರಿಯಲ್ ಹೀರೋ ಸೋನು ಸೂದ್ ಮಾನವೀಯ ಕೆಲಸಗಳ ಬಗ್ಗೆ ಎಲ್ಲರಿಗೂ ಗೊತ್ತಿರುವುದೆ. ಕೊರೊನಾ ಬಳಿಕ ಸೋನು ಸೂದ್ ರಿಯಲ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಕೊರೊನಾ ಭೀಕರತೆಯ ಸಮಯದಲ್ಲಿ ಕಷ್ಟದಲ್ಲಿರೋರ ಸಹಾಯಕ್ಕೆ ನಿಂತು ಸಾಕಷ್ಟು ಜನರ ಪ್ರಾಣ ಉಳಿಸಿರು. ಸೋನು ಸೂದ್ ಸಹಾಯ ಆಸ್ಪತ್ರೆ, ಚಿಕಿತ್ಸೆಗೆ ಮಾತ್ರ ಸೀಮಿತವಾಗಿಲ್ಲ. ಬದುಕಲು ಕಷ್ಟಪಡುತ್ತಿರುವ, ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಅದೆಷ್ಟೋ ಜನರ ಹಸಿವನ್ನು ನೀಗಿಸಿದ್ದಾರೆ.

  ಕೇವಲ ಕೊರೊನಾ ಪರಿಸ್ಥಿತಿ ಸಮಯದಲ್ಲಿ ಮಾತ್ರವಲ್ಲ. ಕೊರೊನಾ ಬಳಿಕವೂ ಸೋನು ಸೂದ್ ಮಾನವೀಯ ಕೆಲಸ ಮುಂದು ವರೆದಿದೆ. ಸೋನು ಸೂದ್‌ಗೆ ಸಹಾಯ ಕೋರಿ ಸಾವಿರಾರು ಮೆಸೇಜ್‌ಗಳು ಬರುತ್ತವೆ. ಪ್ರತ್ಯೇಕ ಸಹಾಯವಾಣಿ ತೆರೆದರೂ, ಫೋನ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಸಾವಿರಾರು ಮಂದಿ ಸಹಾಯ ಕೋರಿ ಸಂದೇಶ ಕಳುಹಿಸುತ್ತಿರುತ್ತಾರೆ. ಇದಲ್ಲದೆ ಸೋನು ಸೂದ್ ಮನೆಯ ಮುಂದೆಯೂ ಸಾಕಷ್ಟು ಮಂದಿ ಕ್ಯೂ ನಿಂತಿರುತ್ತಾರೆ. ಸಾಧ್ಯವಾದಷ್ಟು ಮಂದಿಗೆ ಸೋನು ಸೂದ್ ಸಹಾಯ ಮಾಡುತ್ತಾರೆ. ಸದಾ ಸೇವೆ ಮಾಡೋ ಗುಣಹೊಂದಿರುವ ಸೋನು ಸೂದ್‌ಗೆ ಅಭಿಮಾನಿಯೊಬ್ಬ ಟ್ವಿಟ್ಟರ್‌ನಲ್ಲಿ ಒಂದು ಕೋಟಿ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ.

  ಸೋನು ಸೂದ್, 'ಕೆಜಿಎಫ್' ಸುಂದರಿಯ ಭೇಟಿ ಮಾಡಲು ಇಲ್ಲಿದೆ 'ಜೋಶ್‌' ಭರಿತ ಅವಕಾಶ!ಸೋನು ಸೂದ್, 'ಕೆಜಿಎಫ್' ಸುಂದರಿಯ ಭೇಟಿ ಮಾಡಲು ಇಲ್ಲಿದೆ 'ಜೋಶ್‌' ಭರಿತ ಅವಕಾಶ!

  ನೆಟ್ಟಿಗನ ಬೇಡಿಕೆಗೆ ಸೋನು ಸೂದ್ ತಮಾಷೆಯ ಉತ್ತರ ಎಲ್ಲರ ಮೆಚ್ಚುಗೆಗೆ ಪಾತ್ರಾಗಿದೆ. ಮಹೇಂದ್ರ ಎನ್ನುವ ಟ್ವಿಟ್ಟರ್ ಬಳಕೆದಾರ, "ಸರ್ ದಯವಿಟ್ಟು ನನಗೆ ಒಂದು ಕೋಟಿ ರೂಪಾಯಿ ನೀಡಿ" ಎಂದು ಕೇಳಿದ್ದಾರೆ. ನೆಟ್ಟಿಗನ ಬೇಡಿಕೆ ಗಮನಿಸಿದ ಸೋನು ಸೂದ್ "ಬಾಸ್ ಕೇವಲ 1 ಕೋಟಿ ರೂ.? ನೀವು ಹೆಚ್ಚಿನದನ್ನು ಕೇಳಬಹುದಿತ್ತು" ಎಂದು ಸೋನು ಸೂದ್ ಪ್ರತಿಕ್ರಿಯೆ ನೀಡಿದ್ದಾರೆ. ಸೋನು ಸೂದ್ ಉತ್ತರದ ಬಳಿಕ ತನ್ನ ಬೇಡಿಕೆಯ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.

  ಮತ್ತೊಬ್ಬ ನೆಟ್ಟಿಗ ಸೋನು ಸೂದ್ ವಿಶೇಷ ಬೇಡಿಕೆ ಇಟ್ಟಿದ್ದಾರೆ. "ನಿಮ್ಮ ಮುಂದಿನ ಸಿನಿಮಾದಲ್ಲಿ ನನಗೆ ಒಂದು ಪಾತ್ರ ನೀಡುತ್ತೀರಾ" ಎಂದು ಕೇಳಿಕೊಂಡಿದ್ದಾರೆ. ಇದಕ್ಕೂ ಸೋನು ಉತ್ತರ ನೀಡಿದ್ದು, ಸೋನು ಪ್ರತಿಕ್ರಿಯೆ ವೈರಲ್ ಆಗಿದೆ. "ಯಾರಿಗಾದರೂ ಸಹಾಯ ಮಾಡುವುದಕ್ಕಿಂತ ದೊಡ್ಡ ಪಾತ್ರ ಇಲ್ಲ. ನೀವು ಆ ಪಾತ್ರವನ್ನು ನಿರ್ವಹಿಸಿದರೆ ನಿಮಗಿಂತ ದೊಡ್ಡ ನಾಯಕ ಇನ್ನಿಲ್ಲ" ಎಂದು ಸೋನು ಹೇಳಿದ್ದಾರೆ.

  ನೆಟ್ಟಿಗರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸೋನು ಸ್ಫೂರ್ತಿ ದಾಯಕ ಮಾತುಗಳನ್ನು ಹೇಳುತ್ತಿದ್ದಾರೆ. ಇತ್ತೀಚಿಗಷ್ಟೆ ಸೋನು ಸಣ್ಣ ಕೈಗಾರಿಕೆಗಳಿಗೆ ಸಹಾಯ ಮಾಡಿ ಎನ್ನುವ ಸಂದೇಶವನ್ನು ನೀಡಿದ್ದರು. ರಸ್ತೆ ಬದಿ ಇದ್ದ ಜ್ಯೂಸ್ ಸೆಂಟರ್‌ಗೆ ಎಂಟ್ರಿ ಕೊಟ್ಟಿದ್ದ ಸೋನು ತಾವೆ ಜ್ಯೋಸ್ ಮಾಡಿ ಕುಡಿದಿದ್ದರು. ಪುಟ್ಟ ಜ್ಯೂಸ್ ಅಂಗಡಿಯೊಳಗೆ ಜ್ಯೂಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಡಿಯೋ ಜೊತೆಗೆ ಸಣ್ಣ ವ್ಯಾಪಾರಿಗಳಿಗೆ ಉತ್ತೇಜನ ನೀಡಿ ಎಂದು ಸೋನು ಹೇಳಿದ್ದರು. ಇಂಥ ಮಾನವೀಯ ಗುಣಗಳಿಂದನೇ ಸೋನು ಸೂದ್ ಪದೇ ಪದೇ ಅಭಿಮಾನಿಗಳ ಹೃದಯ ಗೆಲ್ಲುತ್ತಿದ್ದಾರೆ.

  Sonu Sood hilarious respond to netizen asking for Rs.1 crore

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಸೋನು ಸೂದ್ ಸದ್ಯ ತೆಲುಗಿನ ಆಚಾರ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿಗೆ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಜೊತೆಗೆ ತಮಿಳು ಸಿನಿಮಾ ಕೂಡ ಸೋನು ಕೈಯಲ್ಲಿದೆ. ಈ ಸಿನಿಮಾಗಳ ಬಳಿಕ ಸೋನು ಇನ್ನು ಹೊಸ ಸಿನಿಮಾಗಳನ್ನು ಘೋಷಣೆ ಮಾಡಿಲ್ಲ. ಈ ಸಿನಿಮಾಗಳು ಕೊರೊನಾ ಮೊದಲು ಒಪ್ಪಿಕೊಂಡ ಸಿನಿಮಾಗಳಾಗಿವೆ. ಸದ್ಯ ಸೋನು ಸೂದ್ ಸಿನಿಮಾ ಆಯ್ಕೆ ಹೇಗಿರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ.

  English summary
  Real Hero Sonu Sood hilarious respond to netizen asking for Rs.1 crore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X