For Quick Alerts
  ALLOW NOTIFICATIONS  
  For Daily Alerts

  ಸೋನು ಸೂದ್, 'ಕೆಜಿಎಫ್' ಸುಂದರಿಯ ಭೇಟಿ ಮಾಡಲು ಇಲ್ಲಿದೆ 'ಜೋಶ್‌' ಭರಿತ ಅವಕಾಶ!

  By ಫಿಲ್ಮಿಬೀಟ್ ಡೆಸ್ಕ್
  |

  ಭಾರತದ ಅತ್ಯುತ್ತಮ ಕಿರು ವಿಡಿಯೋ ಫ್ಲ್ಯಾಟ್‌ಫಾರ್ಮ್ 'ಜೋಶ್' ಹೊಸ ಸ್ಪರ್ಧೆಯನ್ನು ಹೊತ್ತು ತಂದಿದೆ. ಯಾರು ಬೇಕಾದರೂ ಭಾಗವಹಿಸಬಹುದಾದ ಈ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನದ ಜೊತೆಗೆ ನಟ ಸೋನು ಸೂದ್ ಹಾಗೂ 'ಕೆಜಿಎಫ್' ಬೆಡಗಿ ಮೌನಿ ರಾಯ್ ಅನ್ನು ಭೇಟಿ ಮಾಡುವ ಸುರ್ವಣಾವಕಾಶ ಸಿಗಲಿದೆ.

  ಕಿರು ವಿಡಿಯೋ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಜೋಶ್ ಆಪ್‌ನಲ್ಲಿ ಪ್ರತಿದಿನ 200 ಕೋಟಿ ಬಾರಿ ವಿಡಿಯೋಗಳನ್ನು ನೋಡಲಾಗುತ್ತದೆ. ಅತ್ಯುತ್ತಮ ತಂತ್ರಜ್ಞರ ತಂಡವನ್ನು ಹೊಂದಿರುವ ಜೋಶ್ 20000 ಕ್ಕೂ ಹೆಚ್ಚು ಕಂಟೆಂಟ್ ಕ್ರಿಯೇಟರ್‌ಗಳನ್ನು ಹೊಂದಿದ್ದು ಅತ್ಯುತ್ತಮ ವಿಡಿಯೋ ಕಂಟೆಂಟ್ ಜನರಿಗೆ ತಲುಪುವಂತೆ ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿಯೂ ದೊಡ್ಡ ಸಂಖ್ಯೆಯ ಫಾಲೋವರ್‌ಗಳನ್ನು ಹೊಂದಿರುವ ಜೋಶ್ ತನ್ನ ಹೊಸ ರೀತಿಯ ಕಂಟೆಂಟ್ ಮೂಲಕ ಬಳಕೆದಾರರನ್ನು ಸೆಳೆಯುತ್ತಿದೆ. ಕೋವಿಡ್‌ನಿಂದ ದೇಶ ಸಂಕಷ್ಟದಲ್ಲಿರುವ ಸಮಯದಲ್ಲಿ 'ಬ್ಲೂ ವಾರಿಯರ್' ಹೆಸರಿನಲ್ಲಿ ದೇಶದ ಜನರ ನೆರವಿಗೆ ಧಾವಿಸಿದ ಜೋಶ್ ತನ್ನ ಸೃಜನಶೀಲ ಆಲೋಚನೆಗಳಿಂದ ಸದಾ ತನ್ನ ಪ್ರತಿಸ್ಪರ್ಧಿಗಳಿಗಿಂತಲೂ ಹಲವು ಹೆಜ್ಜೆ ಮುಂದೆಯೇ ಇದೆ. ಕಿರು ವಿಡಿಯೋ ವಿಭಾಗದ ಲೀಡರ್‌ ಆಗಿರುವ ಜೋಶ್ ಇದೀಗ ದೇಶದ ಜನರಿಗಾಗಿ ಒಂದು ವಿನೂತನ ಅವಕಾಶ ಹೊತ್ತು ತಂದಿದೆ. ಅದುವೇ 'ಏಕ್ ನಂಬರ್' ಚಾಲೆಂಜ್.

  'ಜೋಶ್' ಆಪ್‌ ಕಾರ್ಯ ಆರಂಭಿಸಿ ಒಂದು ವರ್ಷವಾದ ಸಂತಸದ ಸಂದರ್ಭಕ್ಕಾಗಿ 'ಏಕ್ ನಂಬರ್' ಹೆಸರಿನ ಹೊಸ ಚಾಲೆಂಜ್ ಅನ್ನು ತರಲಾಗಿದ್ದು, ಡ್ಯಾನ್ಸ್, ಫೂಡ್, ಫ್ಯಾಷನ್, ಕಾಮಿಡಿ, ಫಿಟ್‌ನೆಸ್ ಯಾವುದೇ ವಿಭಾಗದಲ್ಲಿ ವಿಡಿಯೋಗಳನ್ನು ಚಿತ್ರಿಸಿ ಜೋಶ್‌ ಆಪ್‌ಗೆ ಅಪ್‌ಲೋಡ್ ಮಾಡಬೇಕು. ಹೀಗೆ ಅಪ್‌ಲೋಡ್ ಆದ ವಿಡಿಯೋ ಕಂಟೆಂಟ್ ಅನ್ನು ಭಾರತದ ಸೆಲೆಬ್ರಿಟಿ ಕಂಟೆಂಟ್ ಕ್ರಿಯೇಟರ್‌ಗಳು ವೀಕ್ಷಿಸಿ, ಪರಿಶೀಲಿಸಿ 120 ಅತ್ಯುತ್ತಮ ಕಂಟೆಂಟ್ ಅನ್ನು ಆಯ್ಕೆ ಮಾಡುತ್ತಾರೆ. ಈ 120 ಮಂದಿ ಹತ್ತು ದಿನಗಳ ಕಾಲ ಕಿರು ವಿಡಿಯೋಗಳನ್ನು ಅಪ್‌ಲೋಡ್ ಮಾಡಬೇಕು. ಹತ್ತು ದಿನದ ಬಳಿಕ ಅತ್ಯುತ್ತಮ ಕಂಟೆಂಟ್ ಕ್ರಿಯೇಟರ್‌ಗಳನ್ನು ಜಡ್ಜ್‌ ಮಾಡಿ ವಿಜೇತರನ್ನು ಘೋಷಿಸಲಾಗುತ್ತದೆ. ಆಗಸ್ಟ್ 17ರಿಂದ ಚಾಲೆಂಜ್ ಪ್ರಾರಂಭವಾಗಿದೆ.

  ಸ್ಪರ್ಧೆಯಲ್ಲಿ ಗೆದ್ದ ಎಲ್ಲರಿಗೂ 50,000 ನಗದು ಬಹುಮಾನ ನೀಡಲಾಗುತ್ತದೆ. ಹಾಗೂ ಸೋನು ಸೂದ್, ಮೌನಿ ರಾಯ್ ಹಾಗೂ ಇತರೆ ಸೆಲೆಬ್ರಿಟಿ ಕಂಟೆಂಟ್ ಕ್ರಿಯೇಟರ್‌ಗಳನ್ನು ಭೇಟಿ ಮಾಡುವ ಅವಕಾಶ ಪಡೆದುಕೊಳ್ಳುತ್ತಾರೆ. ಇದರ ಜೊತೆಗೆ ವಿಜೇತರು 'ಜೋಶ್ ಅಕಾಡೆಮಿ'ಗೆ ಸೇರಿ ತರಬೇತಿ ಪಡೆದು ಅತ್ಯುತ್ತಮ ಕಂಟೆಂಟ್ ಕ್ರಿಯೇಟರ್ ಆಗುವ ಅವಕಾಶ ಸಹ ಇದೆ.

  ಈ ಸ್ಪರ್ಧೆಗೆ ದೇಶದ ಯಾವ ಮೂಲೆಯಿಂದಾದರೂ ವಿಡಿಯೋಗಳನ್ನು ಕಳಿಸಬಹುದು. ಜೋಶ್‌ ಆಪ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡುವಾಗ #EkNumber #EkNumberDanceStar #EkNumberFashionStar #EkNumberFoodStar #EkNumberComedyStar #EkNumberFitnessStar ಹ್ಯಾಷ್‌ಟ್ಯಾಗ್‌ಗಳನ್ನು ಮರೆಯುವಂತಿಲ್ಲ.

  Sonu Sood Mouni Roy Launch Ek Number Challenge On First Anniversary Of Josh App

  ಜೋಶ್‌ನ 'ಏಕ್‌ ನಂಬರ್' ಚಾಲೆಂಜ್‌ಗೆ ಸಲ್ಲಿಕೆಯಾಗುವ ವಿಡಿಯೋಗಳನ್ನು ಪರಿಶೀಲಿಸಲು ದೇಶದ ಅತ್ಯುತ್ತಮ ಕಂಟೆಂಟ್ ಕ್ರಿಯೇಟರ್‌ಗಳಾದ ಫೈಜು, ಸಮೀಕ್ಷಾ, ಎಷಾನ್, ಮಧುರಾ ಮತ್ತು ಶದಾನ್ ಸೆಲೆಬ್ರಿಟಿಗಳಾದ ರಣ್ವೀರ್ ಬ್ರಾರ್, ರೂಹಿ ಸಿಂಗ್ ಇನ್ನೂ ಹಲವರಿದ್ದಾರೆ. ಈ ಸವಾಲಿಗೆ ಇನ್ನಷ್ಟು ಫನ್‌ ತುಂಬಲು ಐಜಿ ಫಿಲ್ಟರ್, ಜೋಶ್ ಫಿಲ್ಟರ್‌ಗಳನ್ನು ಸಹ ಜೋಶ್‌ ಆಪ್‌ನಲ್ಲಿ ಪರಿಚಯಿಸಲಾಗಿದೆ. ಇವುಗಳನ್ನು ಬಳಸಿಕೊಂಡು ಕಿರು ವಿಡಿಯೋವನ್ನು ಇನ್ನಷ್ಟು ಅಂದವಾಗಿ, ಪರಿಣಾಮಕಾರಿ ಮಾಡಬಹುದಾಗಿದೆ.

  ಜೋಶ್‌ನ 'ಏಕ್ ನಂಬರ್' ಸವಾಲಿಗೆ ಹೆಚ್ಚಿನ ಉತ್ಸಾಹ ತುಂಬಲು 'ಆಜಾ ಜೋಶ್‌ ಪೆ' ಹೆಸರಿನ ಹಾಡನ್ನು ಸಹ ಬಿಡುಗಡೆ ಮಾಡಲಾಗಿದೆ. ಯೂಟ್ಯೂಬ್‌ನಲ್ಲಿ ಹಾಗೂ ಜೋಶ್‌ ಆಪ್‌ನಲ್ಲಿ ಲಭ್ಯವಿರುವ ಈ ಹಾಡನ್ನು ಕ್ಲಿಂಟನ್ ಸೆರೆಜೊ ಹಾಗೂ ಬಿಯಾಂಕಾ ಗೋಮೆಸ್ ಸಂಯೋಜಿಸಿದ್ದಾರೆ. ಹಾಡಿನಲ್ಲಿ ಸೋನು ಸೂದ್, ಮೌನಿ ರಾಯ್ ಹಾಗೂ ಇತರ ಸೆಲೆಬ್ರಿಟಿಗಳು ಇದ್ದಾರೆ.

  English summary
  Actor Sonu Sood and actress Mouni Roy launched Ek number challenge on first anniversary of Josh app. People can send short videos and can win cash prize and many more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X