twitter
    For Quick Alerts
    ALLOW NOTIFICATIONS  
    For Daily Alerts

    ವಾರಿಯರ್ ಅಜ್ಜಿಗೆ ಸೋನು ಸೂದ್ ಸಹಾಯ: ಮಾರ್ಷಲ್ ಆರ್ಟ್ಸ್ ತರಬೇತಿ ಶಾಲೆ ನಿರ್ಮಿಸಿದ ನಟ

    |

    ಲಕ್ಷಾಂತರ ಕಾರ್ಮಿಕರ ನೆರವಿಗೆ ನಿಂತ ನಟ ಸೋನು ಸೂದ್ ರಿಯಲ್ ಲೈಫ್ ಹೀರೋ ಆಗಿದ್ದಾರೆ. ಲಾಕ್ ಡೌನ್ ಬಳಿಕವೂ ಜನಪರ ಕೆಲಸ ಮುಂದುವರೆಸಿರುವ ಸೋನು ಸೂದ್ ಸಾವಿರಾರು ಮಂದಿಯ ಕಷ್ಟಕ್ಕೆ ನೆರವಾಗುತ್ತಿದ್ದಾರೆ. ಲಾಕ್ ಡೌನ್ ಬಳಿಕವೂ ಸಮಾಜ ಸೇವೆ ಮುಂದುವರೆಸಿರುವ ಸೋನು ಸೂದ್ ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ. ಈ ಮೂಲಕ ಬಡವರಿಗೆ, ಕಷ್ಟದಲ್ಲಿರೋರಿಗೆ ಸಹಾಯ ಮಾಡುತ್ತಿದ್ದಾರೆ.

    Recommended Video

    Brahma ಚಿತ್ರದ ಅದ್ದೂರಿ ತೆರೆ ಹಿಂದಿನ ದೃಶ್ಯಗಳು | Behind the scenes | Filmibeat Kannada

    ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಪುಣೆ ಮೂಲದ ಶಾಂತಾ ಬಾಲು ಪವಾರ್ ವಾರಿಯರ್ ಅಜ್ಜಿಯ ವಿಡಿಯೋ ಫುಲ್ ವೈರಲ್ ಆಗಿತ್ತು. 75 ವರ್ಷದ ಅಜ್ಜಿ ಹೊಟ್ಟೆ ಪಾಡಿಗಾಗಿ ರಸ್ತೆಗೆ ಇಳಿದು, ತಾನು ಕಲಿತ ಸಮರ ಕಲೆಯನ್ನು ಪ್ರದರ್ಶಿಸುತ್ತಾ ಹಣ ಸಂಪಾದನೆ ಮಾಡುತ್ತಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಕಡೆ ಹರಿಡಾದುತ್ತಿತ್ತು. ಈ ಅಜ್ಜಿಗೆ ನಟ ಸೋನು ಸೂದ್ ನೆರವಾಗಿದ್ದಾರೆ. ಮುಂದೆ ಓದಿ...

    ಪ್ರವಾಹದಿಂದ ಹಾನಿಗೊಳಗಾದ ಕುಟುಂಬಕ್ಕೆ ಎಮ್ಮೆ ಖರೀದಿಸಿ ಸೋನು ಸೂದ್ ಹೇಳಿದ್ದೇನು?ಪ್ರವಾಹದಿಂದ ಹಾನಿಗೊಳಗಾದ ಕುಟುಂಬಕ್ಕೆ ಎಮ್ಮೆ ಖರೀದಿಸಿ ಸೋನು ಸೂದ್ ಹೇಳಿದ್ದೇನು?

    ಅಜ್ಜಿಯ ಕಲೆಗೆ ಬಾಲಿವುಡ್ ಕಲಾವಿದರು ಫಿದಾ

    ಅಜ್ಜಿಯ ಕಲೆಗೆ ಬಾಲಿವುಡ್ ಕಲಾವಿದರು ಫಿದಾ

    ಬೀದಿಯಲ್ಲಿ ನಿಂತು ಸಮರ ಕಲೆ ಪ್ರದರ್ಶಿಸುತ್ತಾ ಹಣ ಸಂಪಾದನೆ ಮಾಡುತ್ತಿದ್ದ ಅಜ್ಜಿಯ ಕಲೆಗೆ ಬಾಲಿವುಡ್ ಕಲಾವಿದರು ಫಿದಾ ಆಗಿದ್ದರು. ಅಜ್ಜಿಯ ಸಮರ ಕಲೆಯ ವಿಡಿಯೋ ಶೇರ್ ಮಾಡಿ ನಟ ಸೋನು ಸೂದ್ ಮತ್ತು ರಿತೇಶ್ ದೇಶಮುಖ್ ಈ ವಾರಿಯರ್ ಅಜ್ಜಿಯ ವಿಳಾಸ ನೀಡಿ ಎಂದು ಕೇಳಿಕೊಂಡಿದ್ದರು.

    ತರಬೇತಿ ಶಾಲೆ ಓಪನ್ ಮಾಡುವುದಾಗಿ ಹೇಳಿದ್ದ ಸೋನು ಸೂದ್

    ತರಬೇತಿ ಶಾಲೆ ಓಪನ್ ಮಾಡುವುದಾಗಿ ಹೇಳಿದ್ದ ಸೋನು ಸೂದ್

    ನಮ್ಮ ದೇಶದ ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣೆ ಮಾಡಿಕೊಳ್ಳಲು ತರಬೇತಿ ನೀಡಬೇಕು. ಅವರ ವಿಳಾಸವನ್ನು ದಯವಿಟ್ಟು ತಿಳಿಸಿ ಎಂದು ಹೇಳಿದ್ದರು. "ನಾನು ಒಂದು ಸಣ್ಣ ತರಬೇತಿ ಕೇಂದ್ರವನ್ನು ತೆರೆಯಬೇಕು. ನಮ್ಮ ದೇಶದ ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣೆ ತಂತ್ರಗಳನ್ನು ಹೇಳಿಕೊಡಬೇಕು" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದೀಗ ಮಾತಿನಂತೆ ಅಜ್ಜಿಗೆ ಮಾರ್ಷಲ್ ಆರ್ಟ್ಸ್ ತರಬೇತಿ ಶಾಲೆಯನ್ನು ತೆರೆದುಕೊಟ್ಟಿದ್ದಾರೆ.

    ಯಾರಾದರು ಈ ವಾರಿಯರ್ ಅಜ್ಜಿಯ ವಿಳಾಸ ತಿಳಿಸಿ: ನಟ ಸೋನು ಸೂದ್, ರಿತೇಶ್ ದೇಶ್ ಮುಖ್ಯಾರಾದರು ಈ ವಾರಿಯರ್ ಅಜ್ಜಿಯ ವಿಳಾಸ ತಿಳಿಸಿ: ನಟ ಸೋನು ಸೂದ್, ರಿತೇಶ್ ದೇಶ್ ಮುಖ್

    ಸೋನು ಸೂದ್ ಗೆ ಧನ್ಯವಾದ ತಿಳಿಸಿದ ವಾರಿಯರ್ ಅಜ್ಜಿ

    ಸೋನು ಸೂದ್ ಗೆ ಧನ್ಯವಾದ ತಿಳಿಸಿದ ವಾರಿಯರ್ ಅಜ್ಜಿ

    ಗಣಪತಿ ಹಬ್ಬದ ಹಬ್ಬದ ದಿನವೇ ತರಬೇತಿ ಶಾಲೆಯನ್ನು ಓಪನ್ ಮಾಡಲಾಗಿದೆ. ಈ ಶಾಲೆಗೆ ಸೋನು ಸೂದ್ ಹೆಸರನ್ನೆ ಇಡಲಾಗಿದೆ. ಈ ಶಾಲೆಯಲ್ಲಿ ವಾರಿಯರ್ ಅಜ್ಜಿ ಈಗ ಶಿಷ್ಯಂದಿರಿಗೆ ಸಮರ ಕಲೆಯ ಬಗ್ಗೆ ಹೇಳಿಕೊಡುತ್ತಿದ್ದಾರೆ. 'ನನ್ನ ಕನಸನ್ನು ಸೋನು ಸೂದ್ ಈಡೇರಿಸಿದ್ದಾರೆ. ನನ್ನ ಶಾಲೆಗೆ ಅವರ ಹೆಸರನ್ನು ಇಟ್ಟಿದ್ದೇನೆ. ನಾನು ಅವರಿಗೆ ತುಂಬಾ ಕೃತಜ್ಞನಾಗಿದ್ದೇನೆ' ಎಂದು ಅಜ್ಜಿ ವಿಡಿಯೋದಲ್ಲಿ ತಿಳಿಸಿದ್ದಾರೆ.

    ಅಜ್ಜಿಯ ತರಬೇತಿ ವಿಡಿಯೋ ವೈರಲ್

    ಅಜ್ಜಿಯ ತರಬೇತಿ ವಿಡಿಯೋ ವೈರಲ್

    ಅಜ್ಜಿ ಶಾಲೆಯಲ್ಲಿ ಚಿಕ್ಕ ಮಕ್ಕಳು, ಮಹಿಳೆಯರು ಸ್ವರಕ್ಷಣೆ ತಂತ್ರಗಳನ್ನು ಕಲಿಯುತ್ತಿದ್ದಾರೆ. ಬಿದಿರಿನ ಕೋಲುಗಳಿಂದ ಕೆಲವು ಕಲೆಗಳನ್ನು ಹೇಳಿಕೊಡುತ್ತಿದ್ದಾರೆ. ಅಜ್ಜಿ ತರಬೇತಿ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸೋನು ಸೂದ್ ಕೆಲಸಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೊತೆಗೆ ಸಹಾಯ ಕೋರಿ ಸಾವಿರಾರು ಸಂದೇಶಗಳು ಹರಿದು ಬರುತ್ತಿವೆ. ಸೋನು ಸೂದ್ ಪೋಸ್ಟ್ ಕೆಳಗೆ ಕಾಮೆಂಟ್ ಬಾಕ್ಸ್ ನಲ್ಲಿ ಸಹಾಯಕೋರಿ ಮಾಡಿರುವ ಕಾಮೆಂಟ್ ಗಳೇ ಹೆಚ್ಚಾಗಿವೆ.

    English summary
    Sonu Sood opens martial arts training school for warrior Aaji.
    Monday, August 24, 2020, 12:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X