ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಸೋನು ಸೂದ್: ಈ ಬಗ್ಗೆ ನಟ ಹೇಳಿದ್ದೇನು?

ಖಳ ನಟನಾಗಿ ಬೆಳ್ಳಿ ಪರದೆ ಮೇಲೆ ಮಿಂಚುವ ಮೂಲಕ ದೇಶದ ಜನರ ಗಮನ ಸೆಳೆದಿದ್ದ ನಟ ಸೋನು ಸೂದ್, ಇದೀಗ ಸಾಟಿ ಇಲ್ಲದ ಮಾನವೀಯ ಕೆಲಸಗಳ ಮೂಲಕ ಮೂಲಕ ರಿಯಲ್ ಹೀರೋ ಆಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಸೋನು ಸೂದ್ ಮಾಡಿದ ಕೆಲಸವನ್ನು ಇಡೀ ದೇಶ ಮೆಚ್ಚಿಕೊಂಡಿದೆ.

ಕಷ್ಟದ ಸಮಯದಲ್ಲಿ ಮನೆಯಿಂದ ಹೊರಬಂದು ವಲಸೆ ಕಾರ್ಮಿಕರ ಬದುಕಿಗೆ ನೆರವಾದ ಸೋನು ಸೂದ್ ಅವರನ್ನು ದೇವರೆಂದು ಆರಾಧಿಸುತ್ತಾರೆ. ಲಾಕ್ ಡೌನ್ ಆಗುತ್ತಿದ್ದಂತೆ ವಲಸೆ ಕಾರ್ಮಿಕರ ಬದುಕು ಬೀದಿಗೆ ಬಂದಿತ್ತು. ಮನೆ ಸೇರಲಾಗದೆ, ಕೈಯಲ್ಲಿ ಕೆಲಸವೂ ಇಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುತ್ತ ಬೀದಿಯಲ್ಲಿದ್ದ ಸಾವಿರಾರು ಜನರನ್ನು ಮರಳಿ ಗೂಡು ಸೇರಿಸುವ ಮೂಲಕ ಸೋನು ಸೂದ್ ಅವರ ಪಾಲಿನ ನಿಜವಾದ ದೇವರಾಗಿದ್ದಾರೆ.

ಸೋನು ಸೂದ್ ಮಾನವೀಯ ಕೆಲಸದ ಜೊತೆಗೆ ಅವರ ಬಗ್ಗೆ ಸಾಕಷ್ಟು ವದಂತಿಗಳು ಹರದಾಡುತ್ತಿರುತ್ತವೆ. ಇದೀಗ ಸೋನು ರಾಜಕೀಯಕ್ಕೆ ಬರ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಸೋನು ಸೂದ್ ಪ್ರತಿಕ್ರಿಯೆ ನೀಡಿದ್ದಾರೆ.

ಮಾನವೀಯ ಕೆಲಸ ಮಾಡಿದ್ರು ಸೋನು ಸೂದ್ ಟ್ರೋಲ್

ಮಾನವೀಯ ಕೆಲಸ ಮಾಡಿದ್ರು ಸೋನು ಸೂದ್ ಟ್ರೋಲ್

ಸೋನು ಸೂದ್ ಈ ಕೆಲಸದ ಬಗ್ಗೆ ಮೆಚ್ಚುಗೆಯ ಜೊತೆಗೆ ತೆಗಳಿಕೆಗಳು ಬರುತ್ತಿವೆ. ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಅನೇಕ ಬಾರಿ ಟ್ರೋಲ್ ಆಗಿದ್ದಾರೆ. ಕೆಲವೊಮ್ಮೆ ಟ್ರೋಲ್ ಗಳಿಗೆ ಸಾಕ್ಷಿ ಸಮೇತ ಉತ್ತರ ನೀಡುತ್ತಾರೆ, ಇನ್ನು ಕೆಲವೊಮ್ಮೆ ಯಾವುದಕ್ಕು ತಲೆಕೆಡಿಸಿಕೊಳ್ಳದೆ ತನ್ನ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಇದೆಲ್ಲದರ ನಡುವೆ ಈಗ ಸೋನು ಸೂದ್ ಅವರ ಈ ಕೆಲಸದ ಹಿಂದೆ ದೊಡ್ಡ ಯೋಜನೆ ಇದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅದೆ ರಾಜಕೀಯ ಪ್ರವೇಶ.

ರಾಜಕೀಯ ಎಂಟ್ರಿ ಬಗ್ಗೆ ಸೋನು ಸೂದ್ ಮಾತು

ರಾಜಕೀಯ ಎಂಟ್ರಿ ಬಗ್ಗೆ ಸೋನು ಸೂದ್ ಮಾತು

ಹೌದು, ಸೋನು ಸೂದ್ ರಾಜಕೀಯಕ್ಕೆ ಎಂಟ್ರಿ ಕೊಡಲು ಇದೆಲ್ಲ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ ಸೋನು ಸೂದ್ ಉತ್ತರ ನೀಡಿದ್ದಾರೆ. ಆಂಗ್ಲ ವೆಬ್ ಪೋರ್ಟಲ್ ಗೆ ನೀಡಿದ ಸಂದರ್ಶನದಲ್ಲಿ ಸೋನು ಸೂದ್ ರಾಜಕೀಯ ಎಂಟ್ರಿ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ರಾಜಕೀಯದಲ್ಲಿ ಆಸಕ್ತಿ ಇಲ್ಲ- ಸೋನು ಸೂದ್

ರಾಜಕೀಯದಲ್ಲಿ ಆಸಕ್ತಿ ಇಲ್ಲ- ಸೋನು ಸೂದ್

ನಾನು ನಟನಾಗಿ ಇನ್ನೂ ಬಹಳ ದೂರ ಸಾಗಬೇಕಿದೆ. ನನ್ನ ಕನಸುಗಳು ಇನ್ನು ಅಪೂರ್ಣವಾಗಿವೆ. ಮೊದಲು ಅದನ್ನು ಸಂಪೂರ್ಣ ಮಾಡಬೇಕು ಎಂದು ಭಾವಿಸುತ್ತೇನೆ. ರಾಜಕೀಯ ಪ್ರವೇಶಿಸಲು ನಿರ್ದಿಷ್ಟ ಸಮಯ, ಅವಧಿ ಇಲ್ಲ. 5 ವರ್ಷ ಅಥವಾ 10 ವರ್ಷದ ಬಳಿಕವೂ ಸೇರಬಹುದು. ನನಗೆ 10 ವರ್ಷಗಳ ಹಿಂದೆಯೇ ರಾಜಕೀಯಕ್ಕೆ ಸೇರುವಂತೆ ಆಫರ್ ಬಂದಿತ್ತು. ಈಗಲೂ ಬರುತ್ತಿದೆ. ಆದರೆ ನನಗೆ ಅದರಲ್ಲಿ ಆಸಕ್ತಿ ಇಲ್ಲ' ಎಂದಿದ್ದಾರೆ.

ಕೆಲಸ ಮಾಡಲು ಬಹಳಷ್ಟಿದೆ

ಕೆಲಸ ಮಾಡಲು ಬಹಳಷ್ಟಿದೆ

'ನಾನು ನ್ಯಾಯಯುತವಾದ ಕೆಲಸವನ್ನು ಮಾಡಬೇಕೆಂದು ಭಾವಿಸಿದ್ದೇನೆ. ನನಗೆ ಜವಾಬ್ದಾರಿಯುತ ಸ್ಥಾನ ನೀಡಿದರೆ ಜನರಿಗೆ ಸಹಾಯ ಮಾಡಲು ಹಳ್ಳಿಗಳಿಗೆ ಮತ್ತು ಪಟ್ಟಣಗಳಿಗೆ ಹೋಗಲು ಹೋಗಲು ಸಾಧ್ಯವಾಗದಿದ್ದರೆ ಏನು ಪ್ರಯೋಜನ. ಹಾಗಾಗಿ ನಾನು ಅವರ ಭಾಗವಾಗಿರಲು, ಅವರೊಂದಿಗೆ ವಾಸಿಸಲು ಮತ್ತು ಅವರೆ ಸೇವೆ ಸಲ್ಲಿಸಲು ಸಾಧ್ಯವಾದಾಗ ಅದರ ಬಗ್ಗೆ ಯೋಚಿಸುತ್ತೇನೆ. ಸದ್ಯಕ್ಕೆ ನಾನು ಒಬ್ಬ ನಟನಾಗಿ ಬಹಳಷ್ಟು ಕೆಲಸಗಳನ್ನು ಮಾಡಬೇಕಿದೆ, ಬಹಳಷ್ಟು ಸಾಧಿಸಬೇಕಿದೆ' ಹೇಳಿದ್ದಾರೆ.

More from Filmibeat

English summary
Actor Sonu Sood opens up If he plans to join Politics.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X