twitter
    For Quick Alerts
    ALLOW NOTIFICATIONS  
    For Daily Alerts

    'ಮುಂದಿನ ಪ್ರಧಾನಿ' ಎಂದವರಿಗೆ ಸೋನು ಸೂದ್ ಕೊಟ್ಟ ಉತ್ತರ ಹೀಗಿದೆ

    |

    ನಟ ಸೋನು ಸೂದ್ ಕೊರೊನಾ ಸೋಂಕಿತರ ಪ್ರಾಣ ಉಳಿಸಲು ಹರಸಾಹಸ ಪಡುತ್ತಿದ್ದಾರೆ. ಸೋಂಕಿತರಿಗೆ ಆಕ್ಸಿಜನ್, ಬೆಡ್, ಆಸ್ಪತ್ರೆ ವ್ಯವಸ್ಥೆ ಮಾಡಿಸಲು ಸೋನು ಸೂದ್ ಹಗಲು ರಾತ್ರಿ ಎನ್ನದೇ ಕಷ್ಟಪಡುತ್ತಿದ್ದಾರೆ. ದೇಶದ ರಿಯಲ್ ಹೀರೋ ಆಗಿರುವ ಸೋನು ಸೂದ್ ಅವರನ್ನು ಜನರು ದೇವರ ಹಾಗೆ ಪೂಜಿಸುತ್ತಿದ್ದಾರೆ.

    ಜವಾಬ್ದಾರಿಯುತ ಸ್ಥಾನದಲ್ಲಿರೋರು, ಜನರಸೇವೆ ಮಾಡಬೇಕಾದವರೇ ಅಸಹಾಯಕರಾಗಿರುವ ಈ ಸಂದರ್ಭದಲ್ಲಿ ನಟ ಸೋನು ಸೂದ್ ಕಷ್ಟದಲ್ಲಿರೋರ ಸಹಾಯಕ್ಕೆ ನಿಂತಿದ್ದಾರೆ. ಜನರ ಪ್ರಾಣ ಉಳಿಸಲು ಸಾಹಸಪಡುತ್ತಿದ್ದಾರೆ. ಸೋನು ಸೂದ್ ಮಾನವೀಯ ಕೆಲಸ ನೋಡಿ ಅಭಿಮಾನಿಗಳು ಇಂಥವರು ದೇಶದ ಪ್ರಧಾನಿಯಾಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಮುಂದೆ ಓದಿ..

    ಈ ಇಬ್ಬರು ನಟರು ದೇಶದ ಪ್ರಧಾನಿ ಆಗಬೇಕೆಂಬುದು ರಾಖಿ ಸಾವಂತ್ ಆಸೆಈ ಇಬ್ಬರು ನಟರು ದೇಶದ ಪ್ರಧಾನಿ ಆಗಬೇಕೆಂಬುದು ರಾಖಿ ಸಾವಂತ್ ಆಸೆ

    ಸೋನು ಸೂದ್ ಪ್ರಧಾನಿ ಅಗಬೇಕು: ರಾಖಿ ಸಾವಂತ್

    ಸೋನು ಸೂದ್ ಪ್ರಧಾನಿ ಅಗಬೇಕು: ರಾಖಿ ಸಾವಂತ್

    ಇತ್ತೀಚಿಗೆ ವಿವಾದಾತ್ಮಕ ನಟಿ ರಾಖಿ ಸಾವಂತ್ ಕೂಡ ಸೋನು ಸೂದ್ ದೇಶದ ಮುಂದಿನ ಪ್ರಧಾನಿಯಾಗಬೇಕು ಎಂದು ಹೇಳಿದ್ದರು. ಈ ಬಗ್ಗೆ ಈಗ ನಟ ಸೂದ್ ಪ್ರತಿಕ್ರಿಯೆ ನೀಡಿದ್ದಾರೆ. ಮುಂಬೈನಲ್ಲಿ ಪಾಪರಾಜಿಗಳು ಕೇಳದ ಪ್ರಶ್ನೆಗೆ ಸೋನು ಉತ್ತರಿಸಿದ್ದಾರೆ.

    ಸೋನು ಸೂದ್ ಪ್ರತಿಕ್ರಿಯೆ

    ಸೋನು ಸೂದ್ ಪ್ರತಿಕ್ರಿಯೆ

    ಕ್ಯಾಮರಾ ಕಣ್ಣಿಗೆ ಸೆರೆಯಾದ ಸೋನು ಸೂದ್‌ಗೆ ಪಾಪರಾಜಿಗಳು 'ಚುನಾವಣೆಗೆ ಸ್ಪರ್ಧಿಸುತ್ತೀರಾ?' ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೂಲ್ ಆಗಿಯೇ ಪ್ರತಿಕ್ರಿಯೆ ನೀಡಿರುವ ಸೋನು ಸೂದ್ 'ನಾನು ಸಾಮಾನ್ಯ ಮನುಷ್ಯನಾಗಿ ಇರುವುದೇ ಉತ್ತಮ' ಎಂದು ಹೇಳಿದ್ದಾರೆ.

    ಸಾವಿರಾರು ಮಂದಿಗೆ ಸೋನು ಸಹಾಯ

    ಸಾವಿರಾರು ಮಂದಿಗೆ ಸೋನು ಸಹಾಯ

    ಕಳೆದ ವರ್ಷ ಲಾಕ್ ಡೌನ್ ನಿಂದ ಸಾಮಾಜಿಕ ಕೆಲಸ ಶುರು ಮಾಡಿದ ಸೋನು ಸೂದ್ ತನ್ನ ಮಾನವೀಯ ಕೆಲಸವನ್ನು ಮುಂದುವರೆಸಿದ್ದಾರೆ. ಕೊರೊನಾ ಎರಡನೇ ಅಲೆ ಭೀಕರತೆಯ ಸಮಯದಲ್ಲಿ ಸೋನು ಸೂದ್ ಸೋಂಕಿತರ ನೆರವಿಗೆ ನಿಂತಿದ್ದಾರೆ. ಒಂದು ದಿನದಲ್ಲಿ ಸಾವಿರಾರು ಮಂದಿ ಸಹಾಯಕೋರಿ ಫೋನ್ ಮಾಡುತ್ತಿರುತ್ತಾರೆ. ಈ ಬಗ್ಗೆ ಮಾತನಾಡಿದ ಸೋನು ಸೂದ್ 'ನಿನ್ನೆ 41,660 ರಿಕ್ವೆಸ್ಟ್ ಗಳು ಬಂದಿವೆ. ಎಲ್ಲರನ್ನೂ ತಲುಪಲು ಪ್ರಯತ್ನ ಪಡುತ್ತಿದ್ದಾರೆ. ನಾನು ಎಲ್ಲರನ್ನೂ ತಲುಪಬೇಕಾದರೆ 14ವರ್ಷಗಳು ಬೇಕಾಗುತ್ತೆ. ಅಂದರೆ 2035ಕ್ಕೆ ಆಗಬಹುದು' ಎಂದು ಹೇಳಿದ್ದಾರೆ.

    Recommended Video

    Ragini Dwivedi, Corona Vaccination ಹಾಕಿಸಿಕೊಂಡ್ಮೇಲೆ ಏನಾಗುತ್ತೆ?ಎಲ್ಲೆಲ್ಲಿ ಸಿಗುತ್ತೆ ವ್ಯಾಕ್ಸಿನೇಷನ್?
    ಫ್ರಾನ್ಸ್ ನಿಂದ ಆಕ್ಸಿಜನ್ ಆಮದು

    ಫ್ರಾನ್ಸ್ ನಿಂದ ಆಕ್ಸಿಜನ್ ಆಮದು

    ಸದ್ಯ ಭಾರತ ಆಕ್ಸಿಜನ್ ಕೊರತೆಯಲ್ಲಿದೆ. ಆಕ್ಸಿಜನ್ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿರುವ ಜನರಿಗೆ ಜೀವರಕ್ಷಕ ತರಲು ಸೋನು ಸೂದ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಫ್ರಾನ್ಸ್ ನಿಂದ ಆಕ್ಸಿಜನ್ ಆಮದು ಮಾಡಿಕೊಳ್ಳಲು ರಿಯಲ್ ಹೀರೋ ಮುಂದಾಗಿದ್ದಾರೆ. ದೆಹಲಿ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದಲ್ಲಿ ಅತೀ ಹೆಚ್ಚು ಕಷ್ಟ ಅನುಭವಿಸುತ್ತಿರುವ ಪ್ರಮುಖ ನಾಲ್ಕು ಸ್ಥಳಗಳಲ್ಲಿ ಆಮ್ಲಜನಕ ಸ್ಥಾವರ ಸ್ಥಾಪಿಸಲು ಸೋನು ಸೂದ್ ತೀರ್ಮಾಸಿದ್ದಾರೆ.

    English summary
    Actor Sonu Sood reaction to viral post of next prime minister.
    Wednesday, May 12, 2021, 10:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X