ನನ್ನ ಗರ್ಲ್ ಫ್ರೆಂಡ್‌ಗೆ ಐ ಫೋನ್ ಕೊಡಿಸಿ; ನೆಟ್ಟಿಗನ ಮನವಿಗೆ ಸೋನು ಸೂದ್ ಪ್ರತಿಕ್ರಿಯೆ ಹೀಗಿದೆ
ರಿಯಲ್ ಹೀರೋ ಸೋನು ಸೂದ್ ಮಾನವೀಯ ಕೆಲಸಗಳ ಬಗ್ಗೆ ಎಲ್ಲರಿಗೂ ಗೊತ್ತಿರುವುದೆ. ಕೊರೊನಾ ಭೀಕರತೆಯ ಸಮಯದಲ್ಲಿ ಕಷ್ಟದಲ್ಲಿರೋರ ಸಹಾಯಕ್ಕೆ ನಿಂತು ಅನೇಕರ ಪ್ರಾಣ ಕಾಪಾಡಿದ ನಟ. ಸೋನು ಸೂದ್ ಸಹಾಯ ಆಸ್ಪತ್ರೆ, ಚಿಕಿತ್ಸೆಗೆ ಮಾತ್ರ ಸಮಿತವಾಗಿಲ್ಲ. ಬದುಕಲು ಕಷ್ಟಪಡುತ್ತಿರುವ, ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಅದೆಷ್ಟೋ ಜನರ ಬಾಳಿಗೆ ಬೆಳಕಾಗಿದ್ದಾರೆ.
ಸೋನು ಸೂದ್‌ಗೆ ಸಹಾಯ ಕೋರಿ ಸಾವಿರಾರು ಮೆಸೇಜ್‌ಗಳು ಬರುತ್ತವೆ. ಪ್ರತ್ಯೇಕ ಸಹಾಯವಾಣಿಯನ್ನು ತೆರೆದರು, ಫೋನ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಸಾವಿರಾರು ಮಂದಿ ಸಹಾಯ ಕೋರಿ ಸಂದೇಶ ಕಳುಹಿಸುತ್ತಿರುತ್ತಾರೆ. ಇದರಲ್ಲಿ ಸಾಧ್ಯವಾದಷ್ಟು ಮಂದಿಗೆ ಸೋನು ಸೂದ್ ಸಹಾಯ ಮಾಡುತ್ತಾರೆ.
ಇತ್ತೀಚಿಗೆ ನೆಟ್ಟಿಗನೊಬ್ಬ ಸೋನು ಸೂದ್ ಬಳಿ ವಿಚಿತ್ರವಾದ ಮನವಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನೆಟ್ಟಿಗನ ಮನವಿಗೆ ಸೋನು ಸೂದ್ ನೀಡಿರುವ ಉತ್ತರ ತಮಾಷೆಯ ಉತ್ತರ ನೀಡಿದ್ದಾರೆ. ಅಂದಹಾಗೆ ನೆಟ್ಟಿಗ ಸೋನು ಸೂದ್ ಗೆ ಟ್ವೀಟ್ ಮಾಡಿ, "ಸಹೋದರ, ನನ್ನ ಗರ್ಲ್ ಫ್ರೆಂಡ್ ಐ ಫೋನ್ ಕೇಳುತ್ತಿದ್ದಾಳೆ. ನನಗೆ ಸಹಾಯ ಮಾಡುತ್ತೀರಾ?" ಎಂದು ಕೇಳಿದ್ದಾರೆ.

ನೆಟ್ಟಿಗರ ಮನವಿಗೆ ಪ್ರತಿಕ್ರಿಯೆ ನೀಡಿರುವ ಸೋನು ಸೂದ್, "ನಿಮ್ಮ ಗರ್ಲ್ ಫ್ರೆಂಡ್ ಬಗ್ಗೆ ನನಗೆ ಗೊತ್ತಿಲ. ಒಂದು ವೇಳೆ ಅವಳಿಗೆ ಐ ಫೋನ್ ನೀಡಿದರೆ, ನಿಮಗೇನು ಪ್ರಯೋಜನ ವಾಗುವುದಿಲ್ವಲ್ಲಾ?," ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸೋನು ಸೂದ್ ಉತ್ತರ ಅಭಿಮಾನಿಗಳ ಮೆಚ್ಚಿಗೆ ಪಡೆದಿದೆ.
ಸೋನು ಸೂದ್ ಬಳಿ ಐ ಫೋನ್ ಸಹಾಯ ಕೇಳಿದ ನೆಟ್ಟಿಗನನ್ನು ಅಭಿಮಾನಿಗಳು ತರಾಟೆ ತೆಗೆದುಕೊಂಡಿದ್ದಾರೆ. ಸಾಕಷ್ಟು ಮಂದಿ ಕಾಮೆಂಟ್ ಮಾಡಿ "ಯಾವ ರೀತಿಯ ಸಹಾಯ ಕೇಳಬೇಕೆನ್ನುವುದು ಸಹ ಗೊತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. "ಮನಸ್ಸಿಗೆ ಬಂದಹಾಗೆ ಸಹಾಯ ಕೇಳಬಾರದು" ಎಂದು ಸಲಹೆ ನೀಡುತ್ತಿದ್ದಾರೆ.
Recommended Video
ಇತ್ತೀಚಿಗಷ್ಟೆ ಸೋನು ಸೂದ್ ಮಗನಿಗೆ ದುಬಾರಿ ಕಾರ್ ಗಿಫ್ಟ್ ನೀಡಿದ್ದಾರೆ ಎನ್ನುವ ವಿಚಾರವಾಗಿ ಸುದ್ದಿಯಾಗಿದ್ದರು. 3 ಕೋಟಿ ರೂ. ಬೆಲೆಬಾಳುವ ಐಷಾರಾಮಿ ಕಾರನ್ನು ಮೊದಲ ಮಗನಿಗೆ ಕೊಡಿಸಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ಪ್ರತಿಕ್ರಿಯೆ ನೀಡಿದ್ದ ಸೋನು ಸೂದ್, ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡುವ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದರು.


Click it and Unblock the Notifications










