twitter
    For Quick Alerts
    ALLOW NOTIFICATIONS  
    For Daily Alerts

    ಆಸ್ಟ್ರೇಲಿಯಾ ಆಟಗಾರರನ್ನು ಮನೆಗೆ ಕಳುಹಿಸಲು ಸಹಾಯ ಮಾಡಿ; ನೆಟ್ಟಿಗನ ಮನವಿಗೆ ಸೋನು ಸೂದ್ ಹೇಳಿದ್ದೇನು?

    |

    ನಟ ಸೋನು ಸೂದ್ ಕಳೆದ ವರ್ಷ ಲಾಕ್ ಡೌನ್ ನಿಂದ ಪ್ರಾರಂಭ ಮಾಡಿದ ಸಾಮಾಜಿಕ ಕೆಲಸವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಸಾಕಷ್ಟು ಮಂದಿಗೆ ಸೋನು ಸೂದ್ ನೆರವಾಗಿದ್ದಾರೆ. ಕೊರೊನಾ ಎರಡನೇ ಅಲೆಯ ಭೀಕರ ಸ್ಥಿತಿಯಲ್ಲೂ ಸೋನು ಸೂದ್ ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದಾರೆ.

    ಆಕ್ಸಿಜನ್, ವೆಂಟಿಲೇಟರ್, ಆಸ್ಪತ್ರೆ, ಬೆಡ್ ಸಿಗದೆ ಪರದಾಡುತ್ತಿರುವ ಅದಷ್ಟೋ ಸೋಂಕಿತರಿಗೆ ದೇವರ ಹಾಗೆ ಬಂದು ಸಹಾಯ ಮಾಡಿದ್ದಾರೆ. ಅದೆಷ್ಟೋ ಜನರ ಪ್ರಾಣ ಉಳಿಸಿದ್ದಾರೆ. ಲಕ್ಷಾಂತರ ಮಂದಿ ಸಹಾಯ ಕೋರಿ ಸೋನು ಸೂದ್ ಗೆ ಮೆಸೇಜ್ ಮಾಡುತ್ತಿದ್ದಾರೆ, ಫೋನ್ ಫೋನ್ ಕರೆಗಳು ಬರುತ್ತಿವೆ. ಇದೆಲ್ಲದರ ನಡುವೆ ರಿಯಲ್ ಹೀರೋಗೆ ಮತ್ತೊಂದು ಮನವಿ ಬಂದಿದ್ದು, ಆಸೀಸ್ ಆಟಗಾರರನ್ನು ಮನೆಗೆ ಕಳುಹಿಸಲು ಸಹಾಯ ಮಾಡುವಂತೆ ಅಭಿಮಾನಿಯೊಬ್ಬ ಮನವಿ ಮಾಡಿಕೊಂಡಿದ್ದಾನೆ.

    ಆಸೀಸ್ ಆಟಗಾರರಿಗೆ ಸಹಾಯ ಮಾಡ್ತಾರಾ ಸೋನು ಸೂದ್?

    ಆಸೀಸ್ ಆಟಗಾರರಿಗೆ ಸಹಾಯ ಮಾಡ್ತಾರಾ ಸೋನು ಸೂದ್?

    ಕೊರೊನಾದಿಂದ ಐಪಿಲ್ ರದ್ದಾದ ಬಳಿಕ ಆಸೀಸ್ ಆಟಗಾರರು ಭಾರತದಲ್ಲೇ ಸಿಲುಕ್ದಿದ್ದಾರೆ. ಅವರನ್ನು ವಾಪಸ್ ಆಸ್ಟ್ರೇಲಿಯಾಗೆ ಕಳುಹಿಸಲು ಸಹಾಯ ಮಾಡುವಂತೆ ನೆಟ್ಟಿಗನೊಬ್ಬ ಮನವಿ ಮಾಡಿಕೊಂಡಿದ್ದಾನೆ. ಟ್ವಿಟ್ಟರ್ ಮೂಲಕ ಸೋನು ಸೂದ್ ಗೆ ಮನವಿ ಮಾಡಿರುವ ನೆಟ್ಟಿಗನು, 'ಆಸ್ಟ್ರೇಲಿಯಾ ಆಟಗಾರರನ್ನು ಮನೆಗೆ ಕಳುಹಿಸಲು ಸಹಾಯ ಮಾಡುತ್ತೀರಾ ಸೋನು ಸೂದ್ ಭಾಯ್?' ಎಂದು ಕೇಳಿದ್ದಾನೆ.

    '10 ನಿಮಿಷದಲ್ಲಿ ಸಿಲಿಂಡರ್ ತಲುಪಲಿದೆ ಸಹೋದರ..' ಸುರೇಶ್ ರೈನಾಗೆ ಸೋನು ಸೂದ್ ನೆರವು'10 ನಿಮಿಷದಲ್ಲಿ ಸಿಲಿಂಡರ್ ತಲುಪಲಿದೆ ಸಹೋದರ..' ಸುರೇಶ್ ರೈನಾಗೆ ಸೋನು ಸೂದ್ ನೆರವು

    ಗಮನ ಸೆಳೆಯುತ್ತಿದೆ ಕಾರ್ಟೂನ್

    ಗಮನ ಸೆಳೆಯುತ್ತಿದೆ ಕಾರ್ಟೂನ್

    ಮನವಿ ಜೊತೆಗೆ ಕಾರ್ಟೂನ್ ಅನ್ನು ಶೇರ್ ಮಾಡಿದ್ದಾರೆ. ಐಸಿಯು, ಬೆಡ್, ಆಕ್ಸಿಜನ್ ಸಹಾಯ ಮಾಡುತ್ತಿರುವ ಸೋನು ಸೂದ್ ಗೆ ಆಸೀಸ್ ಆಟಗಾರರಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮ್ಯಾಕ್ಸ್ ವೆಲ್ ಎಲ್ಲರೂ ಸೋನು ಸೂದ್ ಬಳಿ ಮನೆಗೆ ಹೋಗಲು ನಿಮ್ಮ ಸಹಾಯ ಬೇಕು ಎಂದು ಮನವಿ ಮಾಡುತ್ತಿದ್ದಾರೆ. ಈ ಕಾರ್ಟೂನ್ ಎಲ್ಲರ ಗಮನ ಸೆಳೆಯುತ್ತಿದ್ದು, ಸೋನು ಸೂದ್ ಗಮನಕ್ಕು ಬಂದಿದೆ.

    ಬ್ಯಾಗ್ ಪ್ಯಾಕ್ ಮಾಡಿಕೊಳ್ಳಿ ಎಂದ ರಿಯಲ್ ಹೀರೋ

    ಬ್ಯಾಗ್ ಪ್ಯಾಕ್ ಮಾಡಿಕೊಳ್ಳಿ ಎಂದ ರಿಯಲ್ ಹೀರೋ

    ಸಂಕಷ್ಟದಲ್ಲಿರೋರಿಗೆ ಸಹಾಯ ಮಾಡುವ ಜೊತೆಗೆ ಸೋನು ಸೂದ್ ನೆಟ್ಟಿಗನ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಈಗಲೇ ನಿಮ್ಮ ಬ್ಯಾಗ್ ಗಳನ್ನು ಪ್ಯಾಕ್ ಮಾಡಿಕೊಳ್ಳಿ' ಎಂದು ಹೇಳಿ ಜೋರಾಗಿ ನಗುವ ಇಮೋಜಿಯನ್ನು ಹಾಕಿದ್ದಾರೆ. ಸೋನು ಸೂದ್ ತಮಾಷೆಯ ಉತ್ತರ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ. ಒತ್ತಡದ ನಡುವೆಯೂ ಎಲ್ಲವನ್ನು ಗಮನಿಸುತ್ತಾ ಸಮಾಷೆಯ ಉತ್ತರ ನೀಡುತ್ತಾ ಕೆಲಸ ಮಾಡುತ್ತಿರುವ ಸೋನು ಸೂದ್ ಗೆ ಅಭಿಮಾನಿಗಳು ಹ್ಯಾಟ್ಸಪ್ ಹೇಳುತ್ತಿದ್ದಾರೆ.

    ಯಲಹಂಕದ ಆಸ್ಪತ್ರೆಗೆ ಆಮ್ಲಜನಕ ಒದಗಿಸಿದ ಸೋನು ಸೂದ್ಯಲಹಂಕದ ಆಸ್ಪತ್ರೆಗೆ ಆಮ್ಲಜನಕ ಒದಗಿಸಿದ ಸೋನು ಸೂದ್

    Recommended Video

    ಯೋಗಿ ಕಯ್ಯಲ್ಲಿ ಆಗದೆ ಇದ್ದಿದ್ದನ್ನು ಸೋನು ಸೂದ್ 10 ನಿಮಿಷದಲ್ಲಿ ಮಾಡಿದ್ರು | Filmibeat Kannada
    ಭಾರತದಿಂದ ಬರುವವರಿಗೆ ಆಸ್ಟ್ರೇಲಿಯಾದಲ್ಲಿ ನಿರ್ಬಂಧ

    ಭಾರತದಿಂದ ಬರುವವರಿಗೆ ಆಸ್ಟ್ರೇಲಿಯಾದಲ್ಲಿ ನಿರ್ಬಂಧ

    ಅಂದಹಾಗೆ ಭಾರತದಲ್ಲಿ ಕೊರೊನಾ ಎರಡನೇ ಅಲೆಯ ಭೀಕರತೆಯಿಂದ ಆಸ್ಟ್ರೇಲಿಯಾಗೆ ಬರುವವರ ಮೇಲೆ ನಿರ್ಬಂಧ ಹೇರಲಾಗಿದೆ. ಭಾರತದಿಂದ ಯಾರು ಸಹ ಆಸ್ಟ್ರೇಲಿಯಾಗೆ ಹೋಗುವ ಹಾಗಿಲ್ಲ. ಹಾಗಾಗಿ ಆಸ್ಟ್ರೇಲಿಯಾ ಆಟಗಾಗರು ಐಪಿಲ್ ರದ್ದಾದರೂ ಭಾರತದಲ್ಲೇ ಉಳಿದುಕೊಳ್ಳುವಂತೆ ಆಗಿದೆ. ಬೇರೆ ದೇಶಕ್ಕೆ ತೆರಳಿ ಅಲ್ಲಿ ಕ್ವಾರಂಟೈನ್ ಆಗಿ ಬಳಿಕ ಆಸ್ಟ್ರೇಲಿಯಾಗೆ ವಾಪಸ್ ಆಗುವ ಬಗ್ಗೆಯೂ ಪ್ಲಾನ್ ಮಾಡಲಾಗುತ್ತಿದೆ.

    English summary
    Real Hero Sonu sood replies to fan asking help Australian cricketers back to home.
    Friday, May 7, 2021, 17:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X