Just In
Don't Miss!
- News
ಕರ್ನಾಟಕದಲ್ಲಿ 573 ಕೊರೊನಾ ಸೋಂಕಿತರು ಪತ್ತೆ
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸೋನು ಸೂದ್ ಆತ್ಮಚರಿತ್ರೆ 'I Am No Messiah'; ಬಿಡುಗಡೆಯಾದ ಒಂದು ವಾರದೊಳಗೆ ದಾಖಲೆಯ ಮಾರಾಟ
ಖಳನಟನಾಗಿ ಬೆಳ್ಳಿ ಪರದೆ ಮೇಲೆ ಮಿಂಚುವ ಮೂಲಕ ಚಿತ್ರಾಭಿಮಾನಿಗಳ ಗಮನ ಸೆಳೆದಿದ್ದ ನಟ ಸೋನು ಸೂದ್, ಇದೀಗ ಸಾಟಿ ಇಲ್ಲದ ಮಾನವೀಯ ಕೆಲಸಗಳ ಮೂಲಕ ಮೂಲಕ ರಿಯಲ್ ಹೀರೋ ಆಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಸೋನು ಸೂದ್ ಮಾಡಿದ ಕೆಲಸಕ್ಕೆ ಇಡೀ ದೇಶ ಮೆಚ್ಚಿಕೊಂಡಿದೆ.
ಕಷ್ಟದ ಸಮಯದಲ್ಲಿ ಮನೆಯಿಂದ ಹೊರಬಂದು ವಲಸೆ ಕಾರ್ಮಿಕರ ಬದುಕಿಗೆ ನೆರವಾದ ಸೋನು ಸೂದ್ ಅವರನ್ನು ದೇವರೆಂದು ಆರಾಧಿಸುತ್ತಾರೆ. ಲಾಕ್ ಡೌನ್ ಆಗುತ್ತಿದ್ದಂತೆ ವಲಸೆ ಕಾರ್ಮಿಕರ ಬದುಕು ಬೀದಿಗೆ ಬಂದಿತ್ತು. ಗೂಡು ಸೇರಲಾಗದೆ, ಕೈಯಲ್ಲಿ ಕೆಲಸವೂ ಇಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುತ್ತ ಬೀದಿಯಲ್ಲಿದ್ದ ಸಾವಿರಾರು ಜನರನ್ನು ಮರಳಿ ಗೂಡು ಸೇರಿಸುವ ಮೂಲಕ ಸೋನು ಸೂದ್ ಅವರ ಪಾಲಿನ ನಿಜವಾದ ದೇವರಾಗಿದ್ದಾರೆ.
ಹುಟ್ಟೂರಿನ ರಸ್ತೆಗೆ ತಾಯಿಯ ಹೆಸರು: ಭಾವುಕರಾದ ಸೋನು ಸೂದ್
ಲಾಕ್ ಡೌನ್ ಮುಗಿದ ಬಳಿಕವೂ ತನ್ನ ಮಾನವೀಯ ಕೆಲಸಗಳನ್ನು ಮುಂದುವರೆಸಿಕೊಂಡು ಬಂದಿರುವ ಸೋನು ಸೂದ್ ಅನೇಕರ ಕಷ್ಟಕ್ಕೆ ನೆರವಾಗಿದ್ದಾರೆ. ಉದಾತ್ತ ಕಾರ್ಯಗಳನ್ನು ಮುಂದುವರೆಸಿಕೊಂಡು ಬಂದಿರುವ ಸೋನು ಸೂದ್ ಈ ಸಮಯದಲ್ಲೇ ಆತ್ಮಚರಿತ್ರೆಯನ್ನು ಬರೆದಿದ್ದಾರೆ. 'I'm not Messiah' ಹೆಸರಿನಲ್ಲಿ ಸೋನು ಸೂದ್ ಆತ್ಮಚರಿತೆ ಬರೆದು ಬಿಡುಗಡೆ ಮಾಡಿದ್ದಾರೆ. ಮುಂದೆ ಓದಿ..

'I Am No Messiah' ಎಂದರೇನು?
Messiah ಎನ್ನವ ಪದ ಕ್ರಿಶ್ಚಿಯನ್ ಧರ್ಮದಲ್ಲಿ ಬಳಕೆಯಲ್ಲಿರುವ ಪದ. Messiah ಎಂದರೆ ಜಗತ್ತನ್ನು ಉಳಿಸುವ, ಕಾಪಾಡುವ ವ್ಯಕ್ತಿ, ವಿಶ್ವದ ಸಮಸ್ಯೆಯನ್ನು ಪರಿಹರಿಸುವ ನಾಯಕ ಎಂದರ್ಥ. ಸೋನು ಸೂದ್ ಅವರನ್ನು ದೇವರಿಗೆ ಹೋಲಿಸಲಾಗುತ್ತಿದೆ. ಆದರೆ ಅಂತಹ ವ್ಯಕ್ತಿ ನಾನಲ್ಲ ಎಂದು ಸೋನು ಆತ್ಮಚರಿತ್ರೆಗೆ ಶೀರ್ಷಿಕೆ ಇಟ್ಟಿದ್ದಾರೆ.
ಟೀಕಿಸಿದ ಟ್ರೋಲ್ಗಳಿಗೆ ಸೋನು ಸೂದ್ ಖಡಕ್ ಉತ್ತರ

ಸೋನು ಸೂದ್ ಆತ್ಮಚರಿತ್ರೆಯಲ್ಲಿದೆ ಲಾಕ್ ಡೌನ್ ಅನುಭವ
ಆತ್ಮಚರಿತ್ರೆಯಲ್ಲಿ ಸೋನು ಸೂದ್, ಲಾಕ್ ಡೌನ್ ಸಮಯದ ಅವರ ಅನುಭವವನ್ನು ವಿವರವಾಗಿ ಹೇಳಿದ್ದಾರೆ. ಜನರೊಂದಿಗೆ ಅವರ ಭಾವನಾತ್ಮಕ ಸಂಬಂಧ ಮತ್ತು ಎದುರಾದ ಸವಾಲು, ಜನರನ್ನು ರಕ್ಷಣೆ ಮಾಡಿರುವ ಬಗ್ಗೆ ಬರೆದುಕೊಂಡಿದ್ದಾರೆ. ಸೋನು ಸೂದ್ ಅವರ ಆತ್ಮಚರಿತ್ರೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಭಿಮಾನಿಗಳು-ಗಣ್ಯರಿಂದ ಮೆಚ್ಚುಗೆ
ಸೋನು ಸೂದ್ ಆತ್ಮ ಚರಿತ್ರೆಯನ್ನು ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗದ ಗಣ್ಯರು ಸಹ ಮೆಚ್ಚಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್, ಮೆಗಾ ಸ್ಟಾರ್ ಚಿರಂಜೀವಿ, ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ಸೋನು ಸೂದ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ 'ನಿಮ್ಮ ಪಯಣ ನಿಜಕ್ಕೂ ಸ್ಫೂರ್ತಿದಾಕವಾಗಿದೆ ರಿಯಲ್ ಹೀರೋ' ಎಂದು ಹೊಗಳುತ್ತಿದ್ದಾರೆ.

ಅತೀ ಹೆಚ್ಚು ಮಾರಾಟವಾದ ಪುಸ್ತಕ
ಇನ್ನು ವಿಶೇಷ ಎಂದರೆ 'I AM NO MESSIAH' ಆತ್ಮಚರಿತ್ರೆ ಬಿಡುಗಡೆಯಾದ ಒಂದು ವಾರದೊಳಗೆ ಭಾರತದಲ್ಲಿ ಅತಿ ಹೆಚ್ಚು ಮಾರಟವಾದ ಪುಸ್ತಕ ಎಂದು ದಾಖಲೆ ಮಾಡಿದೆ. ಜನಮುಗಿಬಿದ್ದು ಸೋನು ಸೂದ್ ಅವರ ಆತ್ಮಚರಿತ್ರೆಯನ್ನು ಕೊಂಡು ಓದುತ್ತಿದ್ದಾರೆ. ಒಂದು ವಾರದೊಳಗೆ 40 ಸಾವಿರಕ್ಕು ಅಧಿಕ ಪ್ರತಿ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ.

ಸೋನು ಸೂದ್ ಸಿನಿಮಾಗಳು
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಸೋನು ಸೂದ್, ಸದ್ಯ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿರಂಜೀವಿ ನಟನೆಯ ಬಹುನಿರೀಕ್ಷೆಯ ಆಚಾರ್ಯ ಸಿನಿಮಾದಲ್ಲಿ ಬಣ್ಣಹಚ್ಚಿದ್ದಾರೆ. ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸೋನು ಸೂದ್ ಗೆ ಹೊಡೆಯಲು ನಟ ಚಿರಂಜೀವಿಗೆ ಹಿಂದೇಟು ಹಾಕಿದ್ದರು ಎಂದು ಸೋನು ಸೂದ್ ರಿವೀಲ್ ಮಾಡಿದ್ದರು. ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಜಲ್ ಕಾಣಿಸಿಕೊಳ್ಳುತ್ತಿದ್ದಾರೆ.