ಬಡ ಕಾರ್ಮಿಕರ ನೆರವಿಗೆ ನಿಂತಿರುವುದೇಕೆ ಸೋನು ಸೂದ್: ಉತ್ತರ ಹೇಳುತ್ತಿದೆ ಹಳೆಯ ಚಿತ್ರ
ಕೊರೊನಾ ವಿರುದ್ಧ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಹಲವಾರು ಮಂದಿ ಬಾಲಿವುಡ್ ನಟರು ಬೆನ್ನೆಲುಬಾಗಿ ನಿಂತಿದ್ದಾರೆ. ಆದರೆ ಅತಿ ಹೆಚ್ಚು ಹೆಸರು ಗಳಿಸಿದ್ದು ನಟ ಸೋನು ಸೂದ್.
Recommended Video
ಅಕ್ಷಯ್ ಕುಮಾರ್, ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್ ಹೀಗೆ ಹಲವು ನಟ-ನಟಿಯರು ಕೋಟ್ಯಂತರ ಹಣವನ್ನು ಪ್ರಧಾನ ಮಂದಿ ಪರಿಹಾರ ನಿಧಿಗೆ ದಾನವಾಗಿ ನೀಡಿದ್ದಾರೆ. ಈ ನಟರಷ್ಟು ದೊಡ್ಡ ಮೊತ್ತದ ಹಣವನ್ನು ಸೋನು ಸೂದ್ ನೀಡಿಲ್ಲವಾದರೂ ಅವರ ಸೇವೆ ಬಹು ಹೊಗಳಿಕೆಗೆ ಪಾತ್ರವಾಗಿದೆ.
ಏಕೆಂದರೆ ಸೋನು ಸೂದ್ ಕೇವಲ ಹಣ ಕೊಟ್ಟು ಸುಮ್ಮನೆ ಮನೆಯಲ್ಲಿ ಕೂರಲಿಲ್ಲ. ಬದಲಿಗೆ ರಸ್ತೆಗೆ ಇಳಿದರು. ಸರ್ಕಾರಕ್ಕೆ ಹಣ ಕೊಟ್ಟು ಕೈತೊಳೆದುಕೊಳ್ಳುವ ಬದಲಿಗೆ ಪ್ರಸ್ತುತ ಸನ್ನಿವೇಶದಲ್ಲಿ ಜನರಿಗೆ ಬೇಕಾದ, ಅತ್ಯಂತ ಅವಶ್ಯಕವಾದ ಸಹಾಯಗಳನ್ನು ಮಾಡಿದರು. ಅದು ನೇರವಾಗಿ ಕಾರ್ಮಿಕರಿಗೆ, ಬಡವರಿಗೆ ತಲುಪುವಂತೆ ಖುದ್ದಾಗಿ ಇದ್ದು ನೋಡಿಕೊಂಡರು.

ಹಳೆಯ ಚಿತ್ರವೊಂದು ಹರಿದಾಡುತ್ತಿದೆ
ಆದರೆ ಸೋನು ಸೂದ್ ಏಕೆ ಇಷ್ಟೊಂದೆಲ್ಲಾ ಕಾರ್ಮಿಕರು, ಬಡವರ ಪರ ಕಾಳಜಿ ತೋರುತ್ತಿದ್ದಾರೆ ಎಂಬ ಪ್ರಶ್ನೆಯನ್ನೂ ಕೆಲವರು ಎತ್ತಿದರು. ಇದಕ್ಕೆ ಉತ್ತರವಾಗಿ ಸೋನು ಸೂದ್ ಅವರ ಹಳೆಯ ಚಿತ್ರವೊಂದು ಹರಿದಾಡುತ್ತಿದೆ.

ಹಳೆಯ ರೈಲ್ವೆ ಪಾಸ್ ಚಿತ್ರ ವೈರಲ್
ಸೋನು ಸೂದ್ ಅವರ ಹಳೆಯ ರೈಲ್ವೆ ಪಾಸ್ ನ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬೋರಿವಲಿ ಇಂದ ಚರ್ಚ್‌ಗೇಟ್ ಗೆ ತೆರಳಲು ಸೋನುಸೂದ್ 1998 ರಲ್ಲಿ ಮಾಡಿಸಿದ್ದ ರೈಲ್ವೆ ಪಾಸ್ ಆದಾಗಿದೆ. ಆ ವಾರ್ಷಿಕ ಪಾಸ್‌ಗೆ ಸೋನು ಸೂದ್ 420 ರೂಪಾಯಿ ಪಾವತಿಸಿದ್ದಾರೆ.

ಮಧ್ಯಮ ವರ್ಗ ಕುಟುಂಬದ ಸೋನು ಸೂದ್
ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಸೋನುಸೂದ್ ಎಂಜಿನಿಯರ್ ಪದವೀಧರರು. ಪ್ರಾರಂಭದಲ್ಲಿ ಸಾಕಷ್ಟು ಕಷ್ಟದ ದಿನಗಳನ್ನು ಕಂಡಿರುವ ಸೋನು ಸೂದ್ ಈಗ ದೊಡ್ಡ ನಟನಾದರೂ ಆ ದಿನಗಳನ್ನು ಮರೆತಿಲ್ಲ. ಹಾಗಾಗಿ ಕಾರ್ಮಿಕರಿಗೆ, ಬಡವರಿಗೆ ಸಹಾಯ ಮಾಡುತ್ತಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿವೆ.

177 ಮಂದಿ ಹೆಣ್ಣುಮಕ್ಕಳಿಗೆ ವಿಶೇಷ ವಿಮಾನ
ಸಾವಿರಾರು ಮಂದಿ ಬಡ ಕಾರ್ಮಿಕರಿಗೆ ವಾಹನದ ವ್ಯವಸ್ಥೆ ಮಾಡಿ ತವರಿಗೆ ತಲುಪಿಸುವ ಕಾರ್ಯವನ್ನು ಸೋನು ಸೂದ್ ಮಾಡಿದ್ದಾರೆ. ನಿನ್ನೆ ಸಹ 177 ಮಂದಿ ಹೆಣ್ಣು ಮಕ್ಕಳನ್ನು ಕೇರಳದಿಂದ ವಿಶೇಷ ವಿಮಾನದಲ್ಲಿ ತಮ್ಮ-ತಮ್ಮ ರಾಜ್ಯಗಳಿಗೆ ಸುರಕ್ಷಿತವಾಗಿ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಶಂಸೆ
ಸೋನು ಸೂದ್ ಮಾಡುತ್ತಿರುವ ಒಳ್ಳೆಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅತೀವ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ಸೋನು ಸೂದ್ ಸಾಮಾಜಿಕ ಕಾರ್ಯದ ಬಗ್ಗೆ ಪ್ರಶಂಸಿಸುವ ಕಾರ್ಟೂನುಗಳು, ಟಿಕ್‌ಕಾಟ್ ವಿಡಿಯೋಗಳು, ಮೀಮ್‌ಗಳು, ಅಭಿನಂದನಾ ಸಂದೇಶಗಳು ಹರಿದಾಡುತ್ತಿವೆ.


Click it and Unblock the Notifications











