ಹಣದ ಕೊರತೆಯಿಂದ ರೈಲಿನಲ್ಲಿ ಓಡಾಡುತ್ತಿದ್ದ ನಟನ ಚಿತ್ರ ಇಂದು ವಿಮಾನದ ಮೇಲೆ!

ಕೊರೊನಾ ಲಾಕ್‌ಡೌನ್ ನಂತರ ನಟ ಸೋನು ಸೂದ್ ಎಂಬ 'ಖಳನಟ'ನ ಮಾನವೀಯ ಮುಖ ದೇಶಕ್ಕೆ ಪರಿಚಯವಾಯ್ತು.

ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರು, ಬಡವರ ಪಾಲಿಗೆ ದೇವರಂತೆ ಒದಗಿಬಂದ ಸೋನು ಸೂದ್, ಲಾಕ್‌ಡೌನ್‌ನಿಂದಾಗಿ ಬೇರೆ-ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ಮಂದಿಯನ್ನು ತಮ್ಮದೇ ಖರ್ಚಿನ ಮೂಲಕ ಅವರವರ ಮನೆಗಳಿಗೆ ತಲುಪಿಸುವ ಕಾರ್ಯ ಮಾಡಿದರು.

ಕೊರೊನಾ ಸಮಯದಲ್ಲಿ ಸೋನು ಸೂದ್ ಮಾಡಿದ ಕಾರ್ಯ ದೇಶವ್ಯಾಪಿ ಪ್ರಶಂಸೆಗೆ ಪ್ರಾಪ್ತಿಯಾಯಿತು. ಖಳನಟನ ಪಾತ್ರಗಳಲ್ಲಿ ನಟಿಸುತ್ತಿದ್ದ ಸೋನು ಸೂದ್ ನಿಜಜೀವನದಲ್ಲಿ 'ಹೀರೋ' ಎಂಬುದು ಮನದಟ್ಟಾಯಿತು.

 Sonu Soods Photo Printed On SpiceJet Plane

ಇದೀಗ ಜನಪ್ರಿಯ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ಸೋನು ಸೂದ್‌ಗೆ ಗೌರವ ಸೂಚಿಸಲೆಂದು, ತನ್ನ ವಿಮಾನದ ಮೇಲೆ ದೊಡ್ಡದಾಗಿ ಸೋನು ಸೂದ್‌ರ ಚಿತ್ರವನ್ನು ಪ್ರಕಟಿಸಿದೆ. ಜೊತೆಗೆ 'ಸಂರಕ್ಷಕ ಸೋನು ಸೂದ್‌ಗೆ ಸೆಲ್ಯೂಟ್' ಎಂದು ದೊಡ್ಡ ಅಕ್ಷರಗಳಲ್ಲಿ ಬರೆದಿದ್ದಾರೆ.

ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಸೋನು ಸೂದ್, 'ಪಂಜಾಬ್‌ನ ಮೋಗಾ ದಿಂದ ಮುಂಬೈಗೆ ರಿಸರ್ವ್‌ ಇಲ್ಲದ ಟಿಕೆಟ್‌ನಲ್ಲಿ ಪ್ರಯಾಣಿಸುತ್ತಿದ್ದಿದ್ದು ಇನ್ನೂ ನೆನಪಿದೆ. ಈ ಪ್ರೀತಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ. ನನ್ನ ಪೋಷಕರನ್ನು ನಾನು ಹೆಚ್ಚು ಮಿಸ್ ಮಾಡಿಕೊಳ್ಳುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ ಸೋನು.

Recommended Video

ಯುವರತ್ನ ಟ್ರೈಲರ್ ನೋಡಿ ಫಿದಾ ಆದ್ರು ಅಧೀರ ಸಂಜಯ್ ದತ್ | Filmibeat Kannada

ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸೋನು ಸೂದ್ ಅವರ ರೈಲ್ವೆ ಪಾಸ್‌ನ ಚಿತ್ರವೊಂದು ವೈರಲ್ ಆಗಿತ್ತು. ರೈಲಿನಲ್ಲಿ ಓಡಾಡಲು ಕಷ್ಟಪಡುತ್ತಿದ್ದ ಸೋನು ಸೂದ್ ಇಂದು ಸಾವಿರಾರು ಜನರನ್ನು ವಿಮಾನಗಳ ಮೂಲಕ ಮನೆಗಳಿಗೆ ಕಳಿಸುತ್ತಿದ್ದಾರೆ ಎಂಬ ವಾಕ್ಯಗಳೊಂದಿಗೆ ಆ ಚಿತ್ರ ಸಖತ್ ವೈರಲ್ ಆಗಿತ್ತು. ಮುಂಬೈನ ಲೋಕಲ್ ರೈಲಿನಲ್ಲಿ ಪಾಸ್ ಪಡೆದು ಓಡಾಡುತ್ತಿದ್ದ ಸೋನು ಸೂದ್ ಚಿತ್ರ ಇಂದು ವಿಮಾನದ ಮೇಲೆ ಮದ್ರಿತವಾಗಿದೆ.

More from Filmibeat

English summary
Spice jet printed Sonu Sood's photo on its aircraft. Sonu Sood said Remember coming from Moga to Mumbai on an unreserved ticket. Thank you everyone for all the love. Miss my parents more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X