twitter
    For Quick Alerts
    ALLOW NOTIFICATIONS  
    For Daily Alerts

    ರಾಜಕೀಯ ಪಕ್ಷಗಳು ತಮಗೆ ನೀಡಿದ್ದ ಆಫರ್‌ ಬಗ್ಗೆ ಸೋನು ಸೂದ್ ಮಾತು

    |

    ನಟ ಸೋನು ಸೂದ್ ಮನೆ, ಕಚೇರಿ ಮೇಲೆ ಮಾಡಿದ ಐಟಿ ದಾಳಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸೋನು ಸೂದ್ 20 ಕೋಟಿ ಹಣಕ್ಕೆ ತಪ್ಪು ಲೆಕ್ಕ ತೋರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಕೊರೊನಾ ಸಮಯದಲ್ಲಿ ಎಲ್ಲ ರಾಜಕೀಯ ಪಕ್ಷದವರು ಸೇರಿ ಸೋನು ಸೂದ್‌ರ ಸಾಮಾಜಿಕ ಕಾರ್ಯವನ್ನು ಮನಸಾರೆ ಅಭಿನಂದಿಸಿದ್ದರು. ನನಗೆ ಸಹಾಯ ಮಾಡಿರೆಂದು ಬಿಜೆಪಿಯ ಶಾಸಕರೇ ಒಬ್ಬರು ಸೋನು ಸೂದ್‌ಗೆ ಮನವಿ ಮಾಡಿದ್ದರು.

    ಆದರೆ ಈಗ ಸೋನು ಸೂದ್‌ ನಿವಾಸದ ಮೇಲೆ ಹಠಾತ್ತನೆ ದಾಳಿ ಮಾಡಲಾಗಿದೆ. ಈ ದಾಳಿಯು ರಾಜಕೀಯ ಪ್ರೇರಿತ ಎಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡದಾಗಿ ಚರ್ಚೆ ನಡೆಯುತ್ತಿದೆ. ಐಟಿ ರೇಡ್ ಕುರಿತು ಸೋನು ಸೂದ್‌ ಸಹ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು ಸೋನು ಸಹ ಐಟಿ ರೇಡ್‌ನಿಂದ ಅಸಮಾಧಾನಗೊಂಡಿರುವುದು ಸ್ಪಷ್ಟವಾಗುತ್ತಿದೆ.

    ಐಟಿ ರೇಡ್ ಹಾಗೂ ಅದರ ಹಿಂದೆ ಇರಬಹುದಾದ ರಾಜಕೀಯ ಬಗ್ಗೆ ಇತ್ತೀಚೆಗೆ ಎನ್‌ಡಿಟಿವಿಯಲ್ಲಿ ಮಾತನಾಡಿದ ಸೋನು ಸೂದ್, ''ಕೊರೊನಾ ಲಾಕ್‌ಡೌನ್ ನಂತರ ನನಗೆ ಎರಡು ಪ್ರಮುಖ ರಾಜಕೀಯ ಪಕ್ಷಗಳು ರಾಜ್ಯಸಭಾ ಸದಸ್ಯ ಸ್ಥಾನವನ್ನು ಆಫರ್ ಮಾಡಿದವು. ಆದರೆ ನಾನು ರಾಜಕೀಯಕ್ಕೆ ಮಾನಸಿಕವಾಗಿ ಸಿದ್ಧನಿಲ್ಲ. ಹಾಗಾಗಿ ಎರಡೂ ಅವಕಾಶಗಳನ್ನು ನಿರಾಕರಿಸಿದೆ. ಇನ್ನು ರಾಜಕೀಯ ಪಕ್ಷ ಸೇರುವಂತೆ ಹಲವು ಆಹ್ವಾನಗಳು ನನಗೆ ಬಂದಿವೆ'' ಎಂದಿದ್ದಾರೆ ಸೋನು ಸೂದ್.

    ''ಕೇಳಿದ ಎಲ್ಲ ದಾಖಲೆ ಕೊಟ್ಟಿದ್ದೇವೆ, ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ''

    ''ಕೇಳಿದ ಎಲ್ಲ ದಾಖಲೆ ಕೊಟ್ಟಿದ್ದೇವೆ, ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ''

    ಐಟಿ ರೇಡ್ ಬಗ್ಗೆ ಮಾತನಾಡಿದ ಸೋನು ಸೂದ್, ''ಅವರು (ಐಟಿ ಅಧಿಕಾರಿಗಳು) ಯಾವ ಯಾವ ದಾಖಲೆಗಳನ್ನು ಕೇಳಿದರೊ ಎಲ್ಲ ದಾಖಲೆಗಳನ್ನು ಸಹ ನಾವು ನೀಡಿದ್ದೇವೆ. ಈಗಲೂ ನೀಡುತ್ತಿದ್ದೇವೆ. ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೇನೆ. ನನ್ನ ಭಾಗದ ಕಾರ್ಯವನ್ನು ನಾನು ಮಾಡಿದ್ದೇನೆ. ಅವರ ಭಾಗದ ಕಾರ್ಯವನ್ನು ಅವರು ಮಾಡುತ್ತಿದ್ದಾರೆ. ನಾನು ಕಾನೂನನ್ನು ಶಿಸ್ತಿನಿಂದ ಪಾಲಿಸುವ ಭಾರತೀಯ ನಾಗರಿಕ'' ಎಂದಿದ್ದಾರೆ ಸೋನು ಸೂದ್.

    ದಾಖಲೆಗಳನ್ನು ನೋಡಿ ಐಟಿಯವರು ಖುಷಿಯಾದರು: ಸೋನು

    ದಾಖಲೆಗಳನ್ನು ನೋಡಿ ಐಟಿಯವರು ಖುಷಿಯಾದರು: ಸೋನು

    ''ನಾನು ಐಟಿಯವರನ್ನು ಕೇಳಿದೆ, ಇಷ್ಟು ವ್ಯವಸ್ಥಿತವಾಗಿ ದಾಖಲೆಗಳನ್ನು ಮೇಂಟೇನ್ ಮಾಡಿರುವುದನ್ನು ಎಲ್ಲಾದರೂ ನೋಡಿದ್ದೀರಾ ಎಂದು? ಅದಕ್ಕೆ ಐಟಿಯವರು, ಖಂಡಿತ ಇಲ್ಲವೆಂದು ಉತ್ತರಿಸಿದರು. ನಾಲ್ಕು ದಿನ ಬಹಳ ಆರಾಮದಾಯಕವಾಗಿ ಹೆಚ್ಚು ಗೊಂದಲಗಳಿಲ್ಲದೆ ಲೆಕ್ಕ ಪತ್ರಗಳನ್ನು ನೋಡಿದೆವು. ಎಲ್ಲ ಲೆಕ್ಕ ಪತ್ರಗಳನ್ನು ಬಹಳ ಚೆನ್ನಾಗಿ ಮೇಂಟೇನ್ ಮಾಡಿದ್ದೀರಿ'' ಎಂದು ಐಟಿಯವರೇ ಸಂತೋಶಪಟ್ಟರು ಎಂದಿದ್ದಾರೆ ಸೋನು ಸೂದ್.

    ಯಾವ ಪಕ್ಷದೊಂದಿಗೂ ಕೈ ಜೋಡಿಸಿಲ್ಲ: ಸೋನು ಸೂದ್

    ಯಾವ ಪಕ್ಷದೊಂದಿಗೂ ಕೈ ಜೋಡಿಸಿಲ್ಲ: ಸೋನು ಸೂದ್

    ಎಎಪಿ ಜೊತೆ ಕೈಜೋಡಿಸಿದ್ದಕ್ಕೆ ಬಿಜೆಪಿಯು ಹೀಗೆ ರಾಜಕೀಯ ಪ್ರೇರಿತ ಐಟಿ ದಾಳಿ ನಡೆಸಿದೆ ಎಂಬ ಆರೋಪದ ಬಗ್ಗೆ ಮಾತನಾಡಿದ ಸೋನು ಸೂದ್, ''ನಾನು ಎಎಪಿ ಜೊತೆ ಕೈಜೋಡಿಸಿಲ್ಲ. ನಾನು ಯಾವ ರಾಜಕೀಯ ಪಕ್ಷದೊಂದಿಗೂ ಕೈ ಜೋಡಿಸಿಲ್ಲ. ನಾನು ಎಲ್ಲ ರಾಜ್ಯಕ್ಕೂ ಹೋಗಿ ಕೆಲಸ ಮಾಡಿದ್ದೀನಿ. ಕರ್ನಾಟಕ, ಗುಜರಾತ್, ಆಂಧ್ರ, ಮಹಾರಾಷ್ಟ್ರ. ಬಿಜೆಪಿ ಅಧಿಕಾರದಲ್ಲಿರುವ, ಅಧಿಕಾರದಲ್ಲಿಲ್ಲದಿರುವ ಪಕ್ಷಗಳಲ್ಲಿಯೂ ನಾನು ಕೆಲಸ ಮಾಡಿದ್ದೀನಿ. ಆ ರಾಜ್ಯದವರು ನನ್ನ ಕರೆದರೆ ಸಾಕು ನಾನು ಹೋಗುತ್ತೇನೆ'' ಎಂದಿದ್ದಾರೆ ಸೋನು ಸೂದ್.

    ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿದ್ದ ಸೋನು ಸೂದ್

    ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿದ್ದ ಸೋನು ಸೂದ್

    ಐಟಿ ರೇಡ್ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಸೋನು ಸೂದ್, ''ನನ್ನ ಫೌಂಡೇಶನ್‌ನ ಪ್ರತಿ ರೂಪಾಯಿ ಕೂಡ ಅಮೂಲ್ಯವಾದ ಜೀವವನ್ನು ಉಳಿಸಲು ಮತ್ತು ಅಗತ್ಯವಿರುವವರನ್ನು ತಲುಪಲು ತನ್ನ ಸರದಿಗಾಗಿ ಕಾಯುತ್ತಿದೆ. ಅನೇಕ ಸಂದರ್ಭಗಳಲ್ಲಿ ಮಾನವೀಯ ಕೆಲಸಕ್ಕಾಗಿ ನನ್ನ ಅನುಮೋದನೆ ಶುಲ್ಕವನ್ನು ದಾನ ಮಾಡಲು ನಾನು ಬ್ರಾಂಡ್ ಗಳನ್ನು ಪ್ರೋತ್ಸಾಹಿಸಿದ್ದೇನೆ. ಇದು ಮುಂದುವರೆಯುತ್ತದೆ. ಕಳೆದ ನಾಲ್ಕು ದಿನಗಳಿಂದ ಕೆಲವು ಅತಿಥಿಗಳೊಂದಿಗೆ ಚರ್ಚೆಮಾಡುತ್ತಿದ್ದೀನಿ. ಹಾಗಾಗಿ ನಿಮ್ಮ ಸೇವೆಯಲ್ಲಿ ಇರಲು ಸಧ್ಯವಾಗಿಲ್ಲ. ಇಲ್ಲಿ ನಾನು ಮತ್ತೆ ಮರಳಿದ್ದೇನೆ. ನಿಮ್ಮ ಸೇವೆಗಾಗಿ ಮತ್ತು ಜೀವನಕ್ಕಾಗಿ'' ಎಂದಿದ್ದರು. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಅರವಿಂದ ಕೇಜ್ರಿವಾಲ್, ''ಸಿಎಂ ಅರವಿಂದ್ ಕೇಜ್ರಿವಾಲ್, ಸೋನು ಜೀ ನಿಮಗೆ ಹೆಚ್ಚಿನ ಶಕ್ತಿ ಸಿಗಲಿ. ನೀವು ಲಕ್ಷಾಂತರ ಭಾರತೀಯರಿಗೆ ಹೀರೋ ಆಗಿದ್ದೀರಿ'' ಎಂದಿದ್ದರು.

    English summary
    Actor Sonu Sood said he was offered Rajya Sabha seat by two major political parties twice. But he rejected it because he is not mentally prepared for politics.
    Tuesday, September 21, 2021, 9:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X