ದುರ್ಗಾ ಪೂಜೆ ಪೆಂಡಲ್‌ನಲ್ಲಿ ಪ್ರತಿಮೆ: 'ನನ್ನ ಜೀವನದ ಅತಿ ದೊಡ್ಡ ಪ್ರಶಸ್ತಿ' ಎಂದ ಸೋನು ಸೂದ್

ದೇಶಾದ್ಯಂತ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೊರೊನಾ ವೈರಸ್ ಭೀತಿಯಲ್ಲೂ ಸಂಪ್ರದಾಯವಾಗಿ ದುರ್ಗಾ ಪೂಜೆ ನಡೆಯುತ್ತಿದೆ. ಉತ್ತರ ಭಾರತದಲ್ಲಿ ದುರ್ಗಾ ಪೂಜೆಯನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತಿದೆ.

ಕೊಲ್ಕತ್ತಾದ ಪ್ರಫುಲ್ಲ ವೆಲ್ಫೇರ್ ಅಸೋಸಿಯೇಷನ್‌ನ ವತಿಯಿಂದ ದುರ್ಗಾ ಪೂಜೆ ಪೆಂಡಲ್‌ನಲ್ಲಿ ಬಾಲಿವುಡ್ ನಟ ಸೋನು ಸೂದ್ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಜನರ ಕಷ್ಟಕ್ಕೆ ಮಿಡಿದ ಹೃದಯವಂತ ನಟನಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ವರ್ಷದ ಪೆಂಡಲ್‌ನಲ್ಲಿ ಸೋನು ಸೂದ್ ಪ್ರತಿಮೆಗಳು, ಅವರ ಮಾಡಿದ ಸಹಾಯಗಳ ಬಗ್ಗೆ ಥೀಮ್ ಮಾಡಲಾಗಿದೆ.

ಕೊಲ್ಕತ್ತಾದ ದುರ್ಗಾ ಪೂಜೆಯ ಪೆಂಡಲ್‌ನಲ್ಲಿ ಸೋನು ಸೂದ್ ಅವರ ಪ್ರತಿಮೆ ನಿರ್ಮಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ''ಇದು ನನ್ನ ಜೀವನದಲ್ಲಿ ಅತಿ ದೊಡ್ಡ ಪ್ರಶಸ್ತಿ'' ಎಂದಿದ್ದಾರೆ.\

Sonu Sood Said that My biggest award ever after Durga Puja pandal installed Sonu sood idol

''ಕೋಲ್ಕತಾ ಐ ಲವ್ ಯು..... ನಾನು ಈ ಪಂಡಲ್‌ಗೆ ಭೇಟಿ ನೀಡಬಹುದೇ?'' ಎಂದು ಟ್ವಿಟ್ಟರ್‌ನಲ್ಲಿ ಕೇಳಿದ್ದಾರೆ.

ಲಾಕ್‌ಡೌನ್ ವೇಳೆ ಮನೆಗೆ ತೆರಳಲು ಸಾಧ್ಯವಾಗದೇ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರಿಗೆ ತಮ್ಮ ಮನೆ ತಲುಪಲು ಬಸ್ಸುಗಳು, ರೈಲುಗಳು ಮತ್ತು ವಿಮಾನಗಳನ್ನು ಏರ್ಪಡಿಸಿದ್ದರು. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಸಹಕಾರಿಯಾಗಲಿ ಎಂದು ಪೂರ್ಣ ವಿದ್ಯಾರ್ಥಿವೇತನವನ್ನು ನೀಡಲು ಯೋಜನೆಯೊಂದನ್ನು ಸೋನು ಸೂದ್ ಪ್ರಾರಂಭಿಸಿದ್ದಾರೆ.

More from Filmibeat

English summary
Sonu Sood Said that My biggest award ever after Durga Puja pandal installed Sonu sood idol.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X