₹3 ಕೋಟಿ ಲಾಭಕ್ಕೆ ಮುಂಬೈನಲ್ಲಿನ ತಮ್ಮ ಐಷಾರಾಮಿ ಮನೆ ಮಾರಿದ ಸೋನು ಸೂದ್
ಬಹುಭಾಷೆಯ ಸ್ಟಾರ್ ಅಂದರೆ ಅವರಿಗೆ ಅವರದ್ದೇ ಆದ ಅಭಿಮಾನಿಗಳಿರುತ್ತಾರೆ. ಅವರು ಯಾವ ದೇಶಕ್ಕೆ ಹೋಗಲಿ ಅಲ್ಲಿ ಆಟೋಗ್ರಾಫ್ ಪ್ಲೀಸ್ ಎಂದು ಯಾರಾದರೂ ಒಬ್ಬರು ಕೈಯೊಡ್ಡಿಯೇ ಒಡ್ಡುತ್ತಾರೆ. ಹೀಗೆ ಫ್ಯಾನ್ ಫಾಲೋವರ್ಸ್ ಗಳನ್ನು ಹೊಂದಿರುವ ಸ್ಟಾರ್‌ಗಳಲ್ಲಿ ಸೋನು ಸೂದ್ ಕೂಡ ಒಬ್ಬರು. ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಲೇ ಕನ್ನಡದಲ್ಲಿ ಕೂಡ ತನ್ನ ಚಾಪು ಮೂಡಿಸಿದ ಸೋನು ಸೋದ್...
ಕೊರೊನಾ ಕಾಲದಲ್ಲಿ ಅನೇಕರ ಪಾಲಿನ ಸೂಪರ್ ಹೀರೋ ಕೂಡ ಹೌದು. ಇರುವವರು, ಇಲ್ಲದವರು ಎನ್ನುವ ಬೇಧ ಬಾವ ಇಲ್ಲದೇ ಕೊರೊನಾ ಜಗತ್ತನ್ನೇ ಅಮರಿಕೊಂಡಾಗ ಜನಸಾಮಾನ್ಯರ ಕಷ್ಟ-ನಷ್ಟಕ್ಕೆ ಮಿಡಿದ ಸೋನು ಸೂದ್ ಅನೇಕರ ಆಸೆ ಆಕಾಂಕ್ಷೆಗಳನ್ನು ಪೂರೈಸಿದರು. ದೇಹಿ ಎಂದು ಬಂದವರ ಹಸಿವು ನೀಗಿಸಿದರು. ವಲಸೆ ಕಾರ್ಮಿಕರ ಕೈಯನ್ನು ಹಿಡಿದರು.

ಇಂಥಾ ಸೋನು ಸೂದ್ ಸದ್ಯ ಮುಂಬೈನಲ್ಲಿರುವ ತಮ್ಮ ಐಷಾರಾಮಿ ಅಪಾರ್ಟ್‌ಮೆಂಟ್ ನ ₹8.10 ಕೋಟಿಗೆ ಮಾರಾಟ ಮಾಡಿದ್ದು, ಈ ವ್ಯವಹಾರದಿಂದ ಅವರಿಗೆ ₹3 ಕೋಟಿ ಲಾಭವಾಗಿದೆ ಎಂದು ವರದಿಯಾಗಿದೆ. ಇದೇ ತಿಂಗಳಿನಲ್ಲಿ ಸೋನು ಸೂದ್ ತಮ್ಮ ಈ ಆಸ್ತಿಯನ್ನು ಮಾಡಿದ್ದಾರೆ ಎಂದು ''ವೇರ್ ಯಾರ್ಡ್ಸ್'' ಪರಿಶೀಲಿಸಿದ ಆಸ್ತಿ ನೋಂದಣಿ ದಾಖಲೆಗಳಿಂದ ತಿಳಿದುಬಂದಿದೆ.
ಲೋಖಂಡವಾಲಾದ ಮಿನರ್ವಾದಲ್ಲಿ ಇರುವ ಈ ಅಪಾರ್ಟ್‌ಮೆಂಟ್ ನ ಕಾರ್ಪೆಟ್ ಏರಿಯಾ 1,247 ಚದರ ಅಡಿ ಇದ್ದು ಬಿಲ್ಟ್-ಅಪ್ ಏರಿಯಾ ಸುಮಾರು 1,497 ಚದರ ಅಡಿ ಇದೆ. ಇನ್ನೂ ಈ ಪ್ರದೇಶದಲ್ಲಿ ಇವರಿಗೆ ಸೇರಿದ ಎರಡು ಪಾರ್ಕಿಂಗ್ ಸ್ಥಳಗಳೂ ಕೂಡ ಇವೆ. ₹48.60 ಲಕ್ಷ ಸ್ಟ್ಯಾಂಪ್ ಡ್ಯೂಟಿ ಮತ್ತು ₹30,000 ನೋಂದಣಿ ಶುಲ್ಕ ಪಾವತಿಸಿ ತಮ್ಮ ಈ ಆಸ್ತಿಯನ್ನು ಸೋನು ಸೂದ್ ಮಾರಾಟ ಮಾಡಿದ್ದಾರೆ.
ದಾಖಲೆಗಳ ಪ್ರಕಾರ ಸೋನು ಸೂದ್ 2012 ರಲ್ಲಿ ಈ ಆಸ್ತಿಯನ್ನು ₹5.16 ಕೋಟಿಗೆ ಖರೀದಿಸಿದ್ದರು. ದಕ್ಷಿಣ ಮುಂಬೈನ ಪ್ರಮುಖ ಪ್ರದೇಶವಾದ ಮಹಾಲಕ್ಷ್ಮಿಯಲ್ಲಿ ಈ ಅಪಾರ್ಟ್‌ಮೆಂಟ್ ಇದ್ದು ಲೋವರ್ ಪ್ಯಾರೆಲ್, ವೋರ್ಲಿ ಮತ್ತು ನಾರಿಮನ್ ಪಾಯಿಂಟ್‌ನಂತಹ ವ್ಯವಹಾರ ಕೇಂದ್ರಗಳಿಗೆ ಇದು ತುಂಬಾ ಹತ್ತಿರದ ಜಾಗ.
ಇನ್ನು ''ಟೈಮ್ಸ್ ನೌ ನವಭಾರತ್'' ವರದಿಯ ಪ್ರಕಾರ, ಸೋನು ಸೂದ್ ಅವರ ಆಸ್ತಿ ₹130 ಕೋಟಿ ಇದ್ದು, ಸಿನಿಮಾ, ಜಾಹೀರಾತು ಮತ್ತು ಉಳಿದ ವ್ಯವಹಾರಗಳಿಂದ ಸೋನು ಹಣ ಸಂಪಾದನೆ ಮಾಡುತ್ತಾರೆ, ತಮ್ಮ ಪ್ರತಿ ಚಿತ್ರಕ್ಕೆ 2-3 ಕೋಟಿ ಹಣ ಸಂಭಾವನೆಯನ್ನು ಪಡೆಯುತ್ತಾರೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೇವಲ ಚಿತ್ರಗಳಲ್ಲಿ ಅಭಿನಯಿಸುವುದಲ್ಲದೇ ಸೋನು ಸೂದ್ ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಖೂಡ ಹುಟ್ಟು ಹಾಕಿದ್ಧಾರೆ. ಶಕ್ತಿ ಸಾಗರ್ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯಡಿ ''ಫತೇ'' ಎಂಬ ಚಿತ್ರವನ್ನು ಕೂಡ ನಿರ್ಮಾಣ ಮಾಡಿದ್ದಾರೆ. ವಿಶೇಷ ಅಂದರೆ ಈ ಚಿತ್ರಕ್ಕೆ ಇವರದ್ದೇ ನಿರ್ದೇಶನ ಇತ್ತು. ದುರಾದೃಷ್ಟವಶಾತ್ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಹಣವನ್ನು ಕೊಳ್ಳೆ ಹೊಡೆಯಲಿಲ್ಲ.
ಇದಲ್ಲದೇ ಪ್ರಯಾಣಕ್ಕೆ ಅನುಕೂಲವಾಗುವಂತಹ ''ಎಕ್ಸ್‌ಪ್ಲರ್ಗರ್'' ಎಂಬ ಆಪ್ ಮತ್ತು ಸಾಮಾಜಿಕ ಜಾಲತಾಣವನ್ನು ಕೂಡ ಸೋನು ಸೂದ್ ಹೊಂದಿದ್ದು ಸದ್ಯ ಮುಂಬೈನ ಅಂಧೇರಿಯಲ್ಲಿರುವ ಐಶಾರಾಮಿ ಅರ್ಪಾರ್ಟ್‌ಮೆಂಟ್‌ನಲ್ಲಿ ಸೋನು ಸೂದ್ ವಾಸವಾಗಿದ್ದಾರೆ. ನಾಲ್ಕು ಬೆಡ್‌ರೂಮ್‌ಗಳನ್ನು ಹೊಂದಿರುವ ಈ ಮನೆಯ ಮೌಲ್ಯ ₹20 ಕೋಟಿ ಇರಬಹುದೆಂದು ರಾಷ್ಟ್ರೀಯ ವಾಹಿನಿಗಳು ವರದಿಯನ್ನು ಮಾಡಿವೆ. ಈ ಮನೆಯಲ್ಲದೇ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ಒಂದು ಭವ್ಯವಾದ ಮನೆ ಮತ್ತು ಪಂಜಾಬ್‌ನ ಮೊಗಾದಲ್ಲಿ ಪೂರ್ವಿಕರ ಆಸ್ತಿಯನ್ನು ಕೂಡ ಹೊಂದಿದ್ದಾರೆ ಎಂದು ಕೂಡ ರಾಷ್ಟ್ರೀಯ ಮಾಧ್ಯಮಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿವೆ.


Click it and Unblock the Notifications