ಸೋನು ಸೂದ್ ಟೈಲರ್ ಶಾಪ್: ರಸ್ತೆ ಬದಿ ಕುಳಿತು ಬಟ್ಟೆ ಹೊಲಿಯುತ್ತಿರುವ ರಿಯಲ್ ಹೀರೋ

ರಿಯಲ್ ಹೀರೋ ಸೋನು ಸೂದ್ ಮಾನವೀಯ ಕೆಲಸಗಳು ಮುಂದುವರೆದಿದೆ. ಒಂದಲ್ಲೊಂದು ವಿಚಾರದ ಮೂಲಕ ಸದಾ ಸುದ್ದಿಯಲ್ಲಿರುವ ನಟ ಸೋನು ಸೂದ್ ಇದೀಗ ಬಟ್ಟೆ ಹೊಲಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ರಸ್ತೆಬದಿಯಲ್ಲಿ ಕುಳಿತು ಬಟ್ಟೆ ಹೊಲಿಯುತ್ತಿರುವ ಸೋನು ಸೂದ್ ಸರಳತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮಾನವೀಯ ಕೆಲಸಗಳ ಮೂಲಕ ಅಭಿಮಾನಿಗಳ ಪಾಲಿನ ನಿಜವಾದ ದೇವರಾಗಿರುವ ಸೋನು ಸೂದ್ ಅವರನ್ನು ಪೂಜಿಸುತ್ತಾರೆ, ಆರಾಧಿಸುತ್ತಾರೆ. ಸರಳತೆಯ ಮೂಲಕವೇ ಎಲ್ಲರ ಮನಗೆದ್ದಿರುವ ಸೋನು ಇದೀಗ ಟೈಲರಿಂಗ್ ಶಾಪ್ ಶುರು ಮಾಡಿಕೊಂಡಿದ್ದಾರೆ.

Sonu Sood shares stitching clothes video

ಸೋನು ಸೂದ್ ಟೈಲರಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಸ್ತೆ ಬದಿಯಲ್ಲಿ, ಬರಿ ಗಾಲಿನಲ್ಲಿ ಹೊಲಿಗೆ ಯಂತ್ರದ ಮೇಲೆ ಕುಳಿತು ಸುಲಲಿತವಾಗಿ ಬಟ್ಟೆ ಹೊಲಿಯುತ್ತಿರುವ ಸೋನು ಸೂದ್ ಗೆ ಅಭಿಮಾನಿಗಳು ಮನಸೋತಿದ್ದಾರೆ.

ಈ ವಿಡಿಯೋವನ್ನು ನಟ ಸೋನು ಸೂದ್ ಅವರೇ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ಇದು ಸೋನು ಸೂದ್ ಟೈಲರಿಂಗ್ ಶಾಪ್. ಇಲ್ಲಿ ಉಚಿತವಾಗಿ ಬಟ್ಟೆ ಹೊಲಿದುಕೊಡಲಾಗುತ್ತದೆ' ಎಂದು ಬರೆದುಕೊಂಡಿದ್ದಾರೆ. ಸೋನು ಸೂದ್ ಈ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

ಸೋನು ಸೂದ್ ಸದ್ಯ ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಸೋನು ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಇತ್ತೀಚಿಗೆ ಚಿತ್ರೀಕರಣ ಸೆಟ್ ನಲ್ಲಿ ಸೋನು ಸೂದ್ ಸಿಬ್ಬಂದಿಗೆ ಉಚಿತ ಮೊಬೈಲ್ ಗಳನ್ನು ನೀಡಿ ಗಮನ ಸೆಳೆದಿದ್ದರು.

ಕೊರೊನಾ ಲಾಕ್ ಡೌನ್ ಸಮಯದಲ್ಲಿ ಪ್ರಾರಂಭಿಸಿದ ಮಾನವೀಯ ಕೆಲಸಗಳನ್ನು ಸೋನು ಸೂದ್ ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಖನಟನಾಗಿ ಖ್ಯಾತಿಗಳಿಸಿದ್ದ ಸೋನು ಇನ್ಮುಂದೆ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ವಿಲನ್ ಪಾತ್ರಗಳಲ್ಲಿ ಮಿಂಚಿದರೆ ಅಭಿಮಾನಿಗಳು ಸ್ವೀಕರಿಸುವುದು ಕಷ್ಟ ಹಾಗಾಗಿ ತೆರೆಮೇಲೂ ಹೀರೋ ಆಗಿ ಕಾಣಿಸಿಕೊಳ್ಳುವ ನಿರ್ಧಾರ ಮಾಡಿದ್ದಾರೆ.

More from Filmibeat

English summary
Actor Sonu Sood shares his tailor shop video, goes viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X