ಉಚಿತ ಮೂಸಂಬಿ ಜ್ಯೂಸ್; ಸೋನು ಸೂದ್ ಶಾಪ್‌ನಲ್ಲಿ ಮಾತ್ರ
ರಿಯಲ್ ಹೀರೋ ಸೋನು ಸೂದ್ ಮಾನವೀಯ ಕೆಲಸಗಳ ಬಗ್ಗೆ ಎಲ್ಲರಿಗೂ ಗೊತ್ತಿರುವುದೆ. ಕೊರೊನಾ ಭೀಕರತೆಯ ಸಮಯದಲ್ಲಿ ಕಷ್ಟದಲ್ಲಿರೋರ ಸಹಾಯಕ್ಕೆ ನಿಂತು ಸಾಕಷ್ಟು ಜನರ ಪ್ರಾಣ ಉಳಿಸಿದ್ದಾರೆ. ಸೋನು ಸೂದ್ ಸಹಾಯ ಆಸ್ಪತ್ರೆ, ಚಿಕಿತ್ಸೆಗೆ ಮಾತ್ರ ಸೀಮಿತವಾಗಿಲ್ಲ. ಬದುಕಲು ಕಷ್ಟಪಡುತ್ತಿರುವ, ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಅದೆಷ್ಟೋ ಜನರ ಬಾಳಿಗೆ ಬೆಳಕಾಗಿದ್ದಾರೆ.
ಸೋನು ಸೂದ್ ಗೆ ಸಹಾಯ ಕೋರಿ ಸಾವಿರಾರು ಮೆಸೇಜ್‌ಗಳು ಬರುತ್ತವೆ. ಪ್ರತ್ಯೇಕ ಸಹಾಯವಾಣಿ ತೆರೆದರೂ, ಫೋನ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಸಾವಿರಾರು ಮಂದಿ ಸಹಾಯ ಕೋರಿ ಸಂದೇಶ ಕಳುಹಿಸುತ್ತಿರುತ್ತಾರೆ. ಇದಲ್ಲದೆ ಸೋನು ಸೂದ್ ಮನೆಯ ಮುಂದೆಯೂ ಸಾಕಷ್ಟು ಮಂದಿ ಕ್ಯೂ ನಿಂತಿರುತ್ತಾರೆ. ಸಾಧ್ಯವಾದಷ್ಟು ಮಂದಿಗೆ ಸೋನು ಸೂದ್ ಸಹಾಯ ಮಾಡುತ್ತಾರೆ. ಸದಾ ಸೇವೆ ಮಾಡೋ ಗುಣಹೊಂದಿರುವ ಸೋನು ಸೂದ್ ಇದೀಗ ಮೂಸಂಬಿ ಜ್ಯೂಸ್ ಮಾರುತ್ತಿದ್ದಾರೆ.
ಹೈದರಾಬಾದ್ ನ ರಸ್ತೆ ಪಕ್ಕ ಇರುವ ಒಂದು ಚಿಕ್ಕದಾದ ಮೂಸಂಬಿ ಜ್ಯೂಸ್ ಸೆಂಟರ್ ಸೇರಿರುವ ಸೋನು ಸೂದ್, ಜ್ಯೂಸ್ ಮಾಡಿ ಕೊಡುತ್ತಿದ್ದಾರೆ. ಇತ್ತೀಚಿಗೆ ಸೈಕಲ್ ಏರಿ ಮೊಟ್ಟೆ, ಬ್ರೆಡ್ ಸೇರಿದಂತೆ ಅಗತ್ಯ ವಸ್ತು ಮಾರಾಟ ಮಾಡಿದ್ದ ಸೋನು ಇದೀಗ ಜ್ಯೂಸ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಮೂಸಂಬಿ ಜ್ಯೂಸ್ ಮಾಡಿ ವಿಟಮಿನ್ ಸಿ ಜಾಸ್ತಿ ಇದೆ, ಫ್ರೆಶ್ ಜ್ಯೂಸ್ ಬನ್ನಿ ಎಲ್ಲರು ಎಂದು ಕರೆಯುತ್ತಿದ್ದಾರೆ. ಅಂದಹಾಗೆ ಸೋನು ಹೊಸ ಜ್ಯೂಸ್ ಶಾಪ್ ತೆರೆದಿದ್ದಾರಾ ಅಂತ ಅಂದ್ಕೋಬೇಡಿ. ಸೋನ್ ಸೂದ್ ಉದ್ದೇಶ ಸಣ್ಣ ವ್ಯಾಪಾರಿಗಳಿಗೆ ಬೆಂಬಲ ನೀಡುವುದು. ಪುಟ್ಟ ಜ್ಯೂಸ್ ಶಾಪ್ ನಲ್ಲಿ ಫ್ರೆಶ್ ಜ್ಯೂಸ್ ಮಾಡಿ ಮಾರುವ ಮೂಕ ಸಣ್ಣ ವ್ಯಾಪಾರಕ್ಕೆ ಉತ್ತೇಜನ ನೀಡಿ ಎನ್ನುವ ಸಂದೇಶ ಸಾರಿದ್ದಾರೆ.
ಜ್ಯೂಸ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿ, ಸೋನು ಸೂದ್ "ಫ್ರೀ ಮೂಸಂಬಿ ಜ್ಯೂಸ್" ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಸಣ್ಣವ್ಯಾಪರಕ್ಕೆ ಬೆಂಬಲ ನೀಡಿ ಎಂದು ಹೇಳಿದ್ದಾರೆ. ಇಂಥ ಮಾನವೀಯ ಗುಣಗಳಿಂದನೇ ಸೋನು ಸೂದ್ ಪದೇ ಪದೇ ಅಭಿಮಾನಿಗಳ ಹೃದಯ ಗೆಲ್ಲುತ್ತಿದ್ದಾರೆ.
ಸೋನು ಸೂದ್ ಈ ವಿಡಿಯೋಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ ಪ್ರತಿ ಪೋಸ್ಟ್ ಮಾಡಿದಾಗಲು ಸೋನುಗೆ ಸಹಾಯ ಕೋರಿ ಸಾವಿರಾರು ಕಾಮೆಂಟ್ ಗಳು ಹರಿದುಬರುತ್ತಿವೆ. ಅದರಲ್ಲಿ ಸಾಧ್ಯವಾದಷ್ಟು ಮಂದಿಗೆ ಸೋನು ಸಹಾಯ ಮಾಡುತ್ತಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಸೋನು ಸೂದ್ ಸದ್ಯ ತೆಲುಗುಗಿನ ಆಚಾರ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿಗೆ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಜೊತೆಗೆ ತಮಿಳು ಸಿನಿಮಾ ಕೂಡ ಸೋನು ಕೈಯಲ್ಲಿದೆ.


Click it and Unblock the Notifications











