For Quick Alerts
  ALLOW NOTIFICATIONS  
  For Daily Alerts

  ಸೋನು ಸೂದ್ ಸೂಪರ್ ಮಾರ್ಕೆಟ್: ಸೈಕಲ್ ಏರಿ ಬ್ರೆಡ್, ಮೊಟ್ಟೆ ಮಾರಾಟಕ್ಕೆ ಹೊರಟ ನಟ

  |

  ರಿಯಲ್ ಹೀರೋ ಸೋನು ಸೂದ್ ಮಾನವೀಯ ಕೆಲಸಗಳ ಬಗ್ಗೆ ಎಲ್ಲರಿಗೂ ಗೊತ್ತಿರುವುದೆ. ಕೊರೊನಾ ಭೀಕರತೆಯ ಸಮಯದಲ್ಲಿ ಕಷ್ಟದಲ್ಲಿರೋರ ಸಹಾಯಕ್ಕೆ ನಿಂತು ಸಾಕಷ್ಟು ಜನರ ಪ್ರಾಣ ಉಳಿಸಿದ್ದಾರೆ. ಸೋನು ಸೂದ್ ಸಹಾಯ ಆಸ್ಪತ್ರೆ, ಚಿಕಿತ್ಸೆಗೆ ಮಾತ್ರ ಸೀಮಿತವಾಗಿಲ್ಲ. ಬದುಕಲು ಕಷ್ಟಪಡುತ್ತಿರುವ, ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಅದೆಷ್ಟೋ ಜನರ ಬಾಳಿಗೆ ಬೆಳಕಾಗಿದ್ದಾರೆ.

  ಸೋನು ಸೂದ್‌ಗೆ ಸಹಾಯ ಕೋರಿ ಸಾವಿರಾರು ಮೆಸೇಜ್‌ಗಳು ಬರುತ್ತವೆ. ಪ್ರತ್ಯೇಕ ಸಹಾಯವಾಣಿ ತೆರೆದರೂ, ಫೋನ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಸಾವಿರಾರು ಮಂದಿ ಸಹಾಯ ಕೋರಿ ಸಂದೇಶ ಕಳುಹಿಸುತ್ತಿರುತ್ತಾರೆ. ಇದಲ್ಲದೆ ಸೋನು ಸೂದ್ ಮನೆಯ ಮುಂದೆಯೂ ಸಾಕಷ್ಟು ಮಂದಿ ಕ್ಯೂ ನಿಂತಿರುತ್ತಾರೆ. ಸಾಧ್ಯವಾದಷ್ಟು ಮಂದಿಗೆ ಸೋನು ಸೂದ್ ಸಹಾಯ ಮಾಡುತ್ತಾರೆ. ಈ ನಡುವೆ ಸೋನು ತನ್ನ ಸೈಕಲ್‌ನಲ್ಲಿ ಬ್ರೆಡ್, ಮೊಟ್ಟೆ, ಪಾವ್ ಬಜಿ ಸೇರಿದಂತೆ ಅಗತ್ಯ ದಿನಸಿ ವಸ್ತುಗಳ ಮಾರಾಟಕ್ಕೆ ಹೊರಟಿದ್ದಾರೆ. ಮುಂದೆ ಓದಿ..

  ನನ್ನ ಗರ್ಲ್ ಫ್ರೆಂಡ್‌ಗೆ ಐ ಫೋನ್ ಕೊಡಿಸಿ; ನೆಟ್ಟಿಗನ ಮನವಿಗೆ ಸೋನು ಸೂದ್ ಪ್ರತಿಕ್ರಿಯೆ ಹೀಗಿದೆನನ್ನ ಗರ್ಲ್ ಫ್ರೆಂಡ್‌ಗೆ ಐ ಫೋನ್ ಕೊಡಿಸಿ; ನೆಟ್ಟಿಗನ ಮನವಿಗೆ ಸೋನು ಸೂದ್ ಪ್ರತಿಕ್ರಿಯೆ ಹೀಗಿದೆ

  ಸೋನು ಸೂದ್ ಸೂಪರ್ ಮಾರ್ಕೆಟ್

  ಸೋನು ಸೂದ್ ಸೂಪರ್ ಮಾರ್ಕೆಟ್

  ಮಾರಟಕ್ಕೆ ಹೊರಟ ಸೋನು ಸೂದ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತನ್ನ ಸೂಪರ್ ಮಾರ್ಕೆಟ್ ಪರಿಚಯಿಸಿದ್ದಾರೆ. ಅಂದಹಾಗೆ ಸೋನು ಸೂದ್ ಸಹಾಯ ಹಸ್ತ ಚಾಚುವ ಜೊತೆಗೆ ಅಗತ್ಯ ವಸ್ತುಗಳ ಮಾರಾಟಕ್ಕಿಳಿದ್ರಾ ಅಂತ ಯೋಚಿಸುತ್ತಿದ್ದೀರಾ? ಸಣ್ಣ ವ್ಯಾಪಾರಗಳಿಗೆ ಬೆಂಬಲಿಸುವಂತೆ ಉತ್ತೇಜನ ನೀಡಲು ಸೋನು ಈ ವಿಡಿಯೋ ಹಂಚಿಕೊಂಡಿದ್ದಾರೆ.

  ಸೋನು ಮಾರ್ಕೆಟ್‌ನಲ್ಲಿದೆ ಮೊಟ್ಟೆ, ಬ್ರೆಡ್, ಚಿಪ್ಸ್ ಇತ್ಯಾದಿ

  ಸೋನು ಮಾರ್ಕೆಟ್‌ನಲ್ಲಿದೆ ಮೊಟ್ಟೆ, ಬ್ರೆಡ್, ಚಿಪ್ಸ್ ಇತ್ಯಾದಿ

  ವಿಡಿಯೋದಲ್ಲಿ ಸೋನು ಸೂದ್, "ಮಾಲ್‌ಗಳನ್ನು ಮುಚ್ಚಲಾಗಿದೆ ಎಂದು ಯಾರು ಹೇಳಿದ್ದು? ಅತ್ಯಂತ ಪ್ರಮುಖ ಮತ್ತು ದುಬಾರಿ ಸೂಪರ್ ಮಾರ್ಕೆಟ್ ಸಿದ್ಧವಾಗಿದೆ. ನಾನು ಎಲ್ಲವನ್ನು ಹೊಂದಿದ್ದೇನೆ. ನೋಡಿ, ಮೊಟ್ಟೆಗಳಿಗೆ, ಪ್ರತಿ ಮೊಟ್ಟೆಗ 6 ರೂ. ಬ್ರೆಡ್ ಗೆ 40 ರೂ. ಪಾವ್, ರಸ್ಕ, ಚಿಪ್ಸ್ ಸೇರಿದಂತೆ ಎಲ್ಲಾ ಇದೆ" ಎಂದಿದ್ದಾರೆ.

  ಸಣ್ಣ ಉದ್ಯಮ ಬೆಂಬಸಿಲಿ ಎಂದ ರಿಯಲ್ ಹೀರೋ

  ಸಣ್ಣ ಉದ್ಯಮ ಬೆಂಬಸಿಲಿ ಎಂದ ರಿಯಲ್ ಹೀರೋ

  ವಿಡಿಯೋ ಶೇರ್ ಮಾಡಿ, "ಉಚಿತ ಹೋಮ್ ಡೆಲಿವರಿ. 10 ಮೊಟ್ಟೆಗಳಿಗೆ ಒಂದು ಬ್ರೆಡ್ ಉಚಿತ" ಎಂದು ಹೇಳಿದ್ದಾರೆ. ಜೊತೆಗೆ ಸಣ್ಣ ಉದ್ಯಮಕ್ಕೆ ಬೆಂಬಲ ನೀಡುವಂತೆ ಹೇಳಿದ್ದಾರೆ. ಸೋನು ಸೋದ್ ಈ ವಿಡಿಯೋಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  ಗರ್ಲ್ ಫ್ರೆಂಡ್ ಗಾಗಿ ಐಫೋನ್ ಕೇಳಿದವನಿಗೆ ಸೋನು ಸೂದ್ ಏನಂದ್ರು ನೋಡಿ | Filmibeat Kannada

  ಸೋನು ಸೂದ್ ಸಿನಿಮಾಗಳು

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಸೋನು ಸೂದ್ ಸದ್ಯ ತೆಲುಗುಗಿನ ಆಚಾರ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿಗೆ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Sonu Sood Shares Video Of Himself Selling Bread And Eggs On A Bicycle Says Sonu Sood Ki Supermarket.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X