twitter
    For Quick Alerts
    ALLOW NOTIFICATIONS  
    For Daily Alerts

    ಇನ್ನು ವಿಲನ್ ಪಾತ್ರ ಮಾಡುವುದು ಬಹಳ ಕಷ್ಟ ಎಂದ ನಿಜ ಜೀವನದ ಹೀರೋ ಸೋನು ಸೂದ್

    |

    ಸಿನಿಮಾ ಬದುಕಿನುದ್ದಕ್ಕೂ ವಿಲನ್ ಪಾತ್ರಗಳನ್ನೇ ಮಾಡಿಕೊಂಡು ಬಂದ ನಟ ಸೋನು ಸೂದ್, ವಾಸ್ತವ ಬದುಕಿನಲ್ಲಿ ಸಿನಿಮಾ ಹೀರೋಗಳು ನಾಚಿಕೊಳ್ಳುವ ಮಟ್ಟಿಗೆ ಸೇವೆ ಮಾಡುತ್ತಿದ್ದಾರೆ. ತೆರೆಯ ಮೇಲೆ ಸೋನು ಸೂದ್ ಅವರ ನೆಗೆಟಿವ್ ಪಾತ್ರಗಳನ್ನು ಕಂಡು ಶಪಿಸುತ್ತಿದ್ದವರು, ಇಂದು ಸೋನು ನಿಜವಾದ ಹೀರೋ ಎಂದು ಕೊಂಡಾಡುತ್ತಿದ್ದಾರೆ.

    Recommended Video

    Dhruva Sarja admitted to Hospital?ಧ್ರುವ ಸರ್ಜಾ ಆಸ್ಪತ್ರೆಗೆ ದಾಖಲು? ಸುದ್ದಿ ನಿಜವೇ? | Filmibeat Kannada

    ಲಾಕ್ ಡೌನ್ ಸಮಯದಲ್ಲಿ ಬೇರೆ ಬೇರೆ ಊರುಗಳಲ್ಲಿ ಸಿಲುಕಿದ್ದ ಬಡ ವಲಸೆ ಕಾರ್ಮಿಕರನ್ನು, ಇತರೆ ಉದ್ಯೋಗಿಗಳನ್ನು ಅವರ ಸ್ವಂತ ಊರುಗಳಿಗೆ ಕಳುಹಿಸಲು ಬಸ್, ವಿಮಾನ ಮುಂತಾದ ವಾಹನ ವ್ಯವಸ್ಥೆ ಮಾಡಿ ಅವರನ್ನು ಸುರಕ್ಷಿತವಾಗಿ ಮನೆತಲುಪಿಸಿದ ಸೋನು ಸೂದ್ ಮಾಡಿರುವ ಸಾಮಾಜಿಕ ಸೇವೆ ಸಣ್ಣಮಟ್ಟದಲ್ಲ. ಇದಕ್ಕೆ ಅವರು ಕೋಟಿಗಟ್ಟಲೆ ಹಣವನ್ನು ವ್ಯಯಿಸಿದ್ದಾರೆ. ಅಷ್ಟೇ ಅಲ್ಲ, ಸೆಲೆಬ್ರಿಟಿಗಳೆಲ್ಲರೂ ಕುಟುಂಬದೊಂದಿಗೆ ಮನೆಯೊಳಗೆ ಕುಳಿತಿರುವ ಸಂದರ್ಭದಲ್ಲಿ ರಸ್ತೆಗಿಳಿದು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ್ದಾರೆ.

    ಸಂಕಷ್ಟದಲ್ಲಿರುವ ಮುನ್ನಾಭಾಯಿ ನಟನಿಗೆ ಸಹಾಯ ಮಾಡಲು ಮುಂದಾದ ಸೋನು ಸೂದ್ಸಂಕಷ್ಟದಲ್ಲಿರುವ ಮುನ್ನಾಭಾಯಿ ನಟನಿಗೆ ಸಹಾಯ ಮಾಡಲು ಮುಂದಾದ ಸೋನು ಸೂದ್

    ತಮ್ಮ ಸಾಮಾಜಿಕ ಕಾರ್ಯಗಳ ಕುರಿತು, ಅದಕ್ಕೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಸೋನು ಸೂದ್ ಜಾಲತಾಣವೊಂದರ ಸಂದರ್ಶನದಲ್ಲಿ ಅನುಭವ ಹಂಚಿಕೊಂಡಿದ್ದಾರೆ. ಮುಂದೆ ಓದಿ...

    ಸಹಾಯ ನಿರಾಕರಿಸಿದ್ದೆ

    ಸಹಾಯ ನಿರಾಕರಿಸಿದ್ದೆ

    ಈ ಕಾರ್ಯಕ್ಕಾಗಿ ನನಗೆ ಆರ್ಥಿಕ ಸಹಕಾರ ನೀಡಲು ಅನೇಕ ಜನರು ಮುಂದೆ ಬಂದಿದ್ದರು. ಅದರ ಬದಲು ನಿಮ್ಮದೇ ಪ್ರದೇಶದ ಸುತ್ತಮುತ್ತಲಿನ ಜನರಿಗೆ ಬೇರೆ ಯಾವುದಾದರೂ ರೀತಿ ಸಹಾಯ ಮಾಡಿ ಎಂದು ನಿರಾಕರಿಸಿದೆ. ಈ ಕೆಲಸವನ್ನು ನಾನೇ ಮಾಡುತ್ತೇನೆ. ಈ ಕಾರ್ಯದಲ್ಲಿ ನನಗೆ ಈಗಾಗಲೇ ಸಾಕಷ್ಟು ಮಂದಿ ಅನೇಕ ರೀತಿಯಲ್ಲಿ ಸಹಾಯ ಮಾಡಿದ್ದಾರೆ ಎಂದು ಸೋನು ತಿಳಿಸಿದ್ದಾರೆ.

    ದೇವರು ದಾರಿ ತೋರಿಸುತ್ತಾನೆ

    ದೇವರು ದಾರಿ ತೋರಿಸುತ್ತಾನೆ

    ಚಿತ್ರರಂಗಕ್ಕೆ ಹೊರಗಿನಿಂದ ಬಂದವರಿಗೆ ಯಾವಾಗಲೂ ಕಷ್ಟ ಇರುತ್ತದೆ. ಇದರಲ್ಲಿ ನಾವು ಗಟ್ಟಿಯಾಗಿ ಇರಬೇಕು. ನೀವು ಬಾಲಿವುಡ್ ಅಥವಾ ಬೇರೆ ವಲಯಕ್ಕೆ ಸಂಬಂಧಿಸಿದವರಲ್ಲದೆ ಇದ್ದರೆ ನಿಮ್ಮದೇ ಗುರುತು ಮೂಡಿಸಬೇಕಾಗುತ್ತದೆ. ಶೇಕಡ ನೂರರಷ್ಟು ಪ್ರಯತ್ನ ಮಾಡಬೇಕು. ನೀವು ಇಲ್ಲಿ ಉಳಿಯಲು ಅದೊಂದೇ ಮಾರ್ಗ. ನಾನು ಹೊರಗಿನವನು ಅದಕ್ಕಾಗಿ ಬಯಸಿದ್ದು ಆಗುತ್ತಿಲ್ಲ ಎಂದು ದೂರಬಾರದು. ಸಂಯಮ, ಗುರಿ, ವಿನಯಶೀಲತೆಯಿಂದ ಅಂಟಿಕೊಂಡು ಕೆಲಸ ಮಾಡಿದರೆ ದೇವರು ಸರಿಯಾದ ದಾರಿ ತೋರಿಸುತ್ತಾನೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಹೊಸ ಇನ್ನಿಂಗ್ಸ್ ಆರಂಭ

    ಹೊಸ ಇನ್ನಿಂಗ್ಸ್ ಆರಂಭ

    ಇಷ್ಟೆಲ್ಲ ಸಾಮಾಜಿಕ ಸೇವೆ ಮಾಡಿದ ಬಳಿಕ ಮುಂದೆ ನೆಗೆಟಿವ್ ಪಾತ್ರಗಳನ್ನು ಮಾಡುವುದು ಬಹಳ ಕಷ್ಟವಾಗಬಹುದು ಎಂದು ಸೋನು ಹೇಳಿದ್ದಾರೆ. ನನಗೆ ಅನೇಕ ಪಾಸಿಟಿವ್ ಪಾತ್ರಗಳು ಸಿಕ್ಕಿವೆ. ಈ ಲಾಕ್ ಡೌನ್ ಮುಗಿದ ಬಳಿಕ ನಾನು ಹೊಸ ಇನ್ನಿಂಗ್ಸ್ ಆರಂಭಿಸಬಹುದು ಎಂದು ಕಾತರದಿಂದ ಕಾದಿದ್ದೇನೆ ಎಂದು ತಿಳಿಸಿದ್ದಾರೆ.

    ಅವರನ್ನು ಮತ್ತೆ ಸಂಪರ್ಕಿಸಬೇಕಿದೆ

    ಅವರನ್ನು ಮತ್ತೆ ಸಂಪರ್ಕಿಸಬೇಕಿದೆ

    ಲಾಕ್ ಡೌನ್ ಎಲ್ಲ ಮುಗಿದು ಸಹಜ ಜೀವನ ಶುರುವಾದ ಬಳಿಕ ಮಾಡಲು ಬಯಸಿರುವ ಮೊದಲ ಕೆಲಸವೆಂದರೆ ಮನೆ ತಲುಪಲು ನಾನು ಸಹಾಯ ಮಾಡಿದ ಎಲ್ಲ ಜನರನ್ನೂ ಮತ್ತೆ ಸಂಪರ್ಕಿಸುವುದು. ಅವರ ಬದುಕು ಹೇಗಿದೆ ಎಂದು ತಿಳಿಯುವುದು. ಅವರ ಜೀವನ ಸಹಜ ಸ್ಥಿತಿಗೆ ಬಂದಿದೆಯೇ? ಸವಾಲುಗಳನ್ನು ಎದುರಿಸಲು ಅವರಲ್ಲಿ ಸಾಮರ್ಥ್ಯವಿದೆಯೇ? ಎಂಬುದನ್ನು ಅರಿತುಕೊಳ್ಳುತ್ತೇನೆ. ಏಕೆಂದರೆ ಅವರ ಬದುಕು ಎಂದಿನಂತೆ ಆಗುವುದನ್ನು ಖಾತರಿಪಡಿಸಿಕೊಳ್ಳುವುದು ಕೂಡ ನನ್ನ ಜವಾಬ್ದಾರಿ ಎಂದು ಹೇಳಿದ್ದಾರೆ.

    ಇದು ಕೆಲವರ ಕಥೆಯಲ್ಲ

    ಇದು ಕೆಲವರ ಕಥೆಯಲ್ಲ

    ಹೆದ್ದಾರಿಗಳಲ್ಲಿ ಲಕ್ಷಾಂತರ ಮಂದಿ ವಲಸಿಗರು ಮಕ್ಕಳು, ವಯಸ್ಸಾದವರೊಂದಿಗೆ ನಡೆದುಕೊಂಡು ಹೋಗುವ ವಿಡಿಯೋಗಳು ನನ್ನಲ್ಲಿ ಬೇಸರ ಉಂಟುಮಾಡಿತು. ಮನೆಯಲ್ಲಿ ಕುಳಿತು ಅದರ ಬಗ್ಗೆ ದೂರುವುದು ಸರಿಯಲ್ಲ, ನಮ್ಮ ಮನೆಗಳನ್ನು, ನಮ್ಮ ರಸ್ತೆ ಹಾಗೂ ದಿನಗಳನ್ನು ನಿರ್ಮಿಸಿದ ಈ ಜನರು ತಮ್ಮ ಮನೆಗೆ ಹೋಗಲು ಬಯಸಿರುವಾಗ ಅವರೊಂದಿಗೆ ಸಂಪರ್ಕ ಬೆಸೆದು ಸಹಾಯ ಮಾಡುವ ಸಮಯ ಇದು ಎನಿಸಿತು. ಅದಕ್ಕಾಗಿ ಮೊದಲು ಸುಮಾರು 350 ವಲಸಿಗರು ಕರ್ನಾಟಕಕ್ಕೆ ಮರಳುವಂತಾಗಲು ವ್ಯವಸ್ಥೆ ಮಾಡಿದೆ. ಅವರ ಮುಖದಲ್ಲಿನ ನಗುವನ್ನು ನೋಡಿದಾಗ ಇದು ಕೇವಲ 350 ಜನರ ಕಥೆಯಲ್ಲ ಎಂದು ಗೊತ್ತಾಯಿತು. ಅದಕ್ಕಾಗಿ ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲರನ್ನೂ ತಲುಪಲು ಮುಂದಾದೆ ಎಂದಿದ್ದಾರೆ.

    ರಿಸ್ಕ್ ತೆಗೆದುಕೊಳ್ಳಲೇಬೇಕು

    ರಿಸ್ಕ್ ತೆಗೆದುಕೊಳ್ಳಲೇಬೇಕು

    ಸೋನು ಸೂದ್ ಇಷ್ಟೆಲ್ಲ ಕಷ್ಟಪಡುವಾಗ ಅವರು ತಮ್ಮ ಕುಟುಂಬದ ಬಗ್ಗೆ ಕೂಡ ಯೋಚಿಸಿದ್ದಾರೆ. ಪ್ರತಿದಿನ ನಾನು ಮನೆಯಿಂದ ಹೊರಬಂದು ಬಸ್ ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳಿಗೆ ಹೋಗಿ ನಿಲ್ಲುವಾಗ ಮನೆಯವರ ಬಗ್ಗೆ ಚಿಂತೆ ಖಂಡಿತಾ ಆಗುತ್ತಿತ್ತು. ಆದರೆ ಹೈವೇಗಳಲ್ಲಿ ನಡೆಯುತ್ತಾ ತಮ್ಮ ಜೀವವನ್ನು ಅಪಾಯದಲ್ಲಿ ಇರಿಸಿಕೊಂಡಿರುವ ಜೀವಗಳನ್ನು ಉಳಿಸಲು ನಾನು ರಿಸ್ಕ್ ತೆಗೆದುಕೊಳ್ಳಲೇಬೇಕಿತ್ತು. ಮನೆಯಲ್ಲಿ ಸುಮ್ಮನೆ ಕುಳಿತು ಇದೆಲ್ಲ ಆಗಲಿ ಎನ್ನುವಂತಿಲ್ಲ. ನನಗಾಗಿ ಮತ್ತು ನನ್ನ ಕುಟುಂಬಕ್ಕಾಗಿ ಮಾತ್ರವಲ್ಲದೆ ರಸ್ತೆಯಲ್ಲಿರುವ ಲಕ್ಷಾಂತರ ವಲಸಿಗರಿಗಾಗಿ ನಾನು ಸುರಕ್ಷಿತವಾಗಿ ಚೆನ್ನಾಗಿರಬೇಕು ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ.

    ಸಲ್ಮಾನ್ ಖಾನ್ ಅನ್ನು ಮೀರಿಸಿದ ನಿಜಜೀವನ ನಾಯಕ ಸೋನು ಸೂದ್ಸಲ್ಮಾನ್ ಖಾನ್ ಅನ್ನು ಮೀರಿಸಿದ ನಿಜಜೀವನ ನಾಯಕ ಸೋನು ಸೂದ್

    English summary
    Actor Sonu Sood has shared his experience with his work of saving migrants lives during lockdown.
    Saturday, July 4, 2020, 9:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X