ಮತ್ತೆ ಬಡವರ ಕಷ್ಟಕ್ಕೆ ನೆರವಾದ ಸೋನು ಸೂದ್: ವಲಸೆ ಕಾರ್ಮಿಕರ ಕುಟುಂಬಕ್ಕೆ ಆರ್ಥಿಕ ನೆರವು
ಬಹುಭಾಷ ನಟ ಸೋನು ಸೂದ್ ಮತ್ತೆ ವಲಸೆ ಕಾರ್ಮಿಕರ ಕಷ್ಟಕ್ಕೆ ನೆರವಾಗಿದ್ದಾರೆ. 400ಕ್ಕೂ ಅಧಿಕ ವಲಸೆ ಕಾರ್ಮಿಕರ ಕುಟುಂಬಕ್ಕೆ ಸೋನು ಆರ್ಥಿಕ ಸಹಾಯ ಮಾಡಲು ಮುಂದಾಗಿದ್ದಾರೆ. ದೇಶದಲ್ಲಿ ಕೊರೊನಾ ಲಾಕ್ ಡೌನ್ ಅನೌನ್ಸ್ ಆಗುತ್ತಿದ್ದಂತೆ ವಲಸೆ ಕಾರ್ಮಿಕರ ಸ್ಥಿತಿ ಅತಂತ್ರವಾಗಿತ್ತು. ಕೆಲಸ ಅರಸಿ ದೂರದ ಊರಿಗೆ ಹೋಗಿದ್ದ ಕಾರ್ಮಿಕರು ಗೋಳು ಹೇಳತೀರದಾಗಿತ್ತು. ಊರು ಸೇರಲಾಗಿದೆ, ಕೆಲಸವೂ ಇಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
Recommended Video
ಇಂತಹ ಸಮಯದಲ್ಲಿ ನಟ ಸೋನು ಸೂದ್ ಲಕ್ಷಾಂತರ ವಲಸೆ ಕಾರ್ಮಿಕರು ಮರಳಿ ಗೂಡು ಸೇರುವಂತೆ ಮಾಡಿದ್ದರು. ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಿಸಿ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದರು. ಸೋನು ಸೂದ್ ಈ ಕೆಲಸಕ್ಕೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು.
ಸೋನು ಸೂದ್ ಅವರ ಸಾಮಾಜಿಕ ಕೆಲಸ ಇನ್ನೂ ಮುಂದುವರೆಯುತ್ತಲ್ಲೇ ಇದೆ. ಇದೀಗ ಲಾಕ್ ಡೌನ್ ಸಮಯದಲ್ಲಿ ಮೃತಪಟ್ಟ ಮತ್ತು ಗಾಯಗೊಂಡ 400ಕ್ಕು ಹೆಚ್ಚು ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ. ಈ ಬಗ್ಗೆ ಮಾಡಿರುವ ಸೋನು ಸೂದ್ "ಮೃತ ಮತ್ತು ಗಾಯಗೊಂಡ ವಲಸಿಗರ ಕುಟುಂಬಗಳಿಗೆ ಸುರಕ್ಷಿತ ಭವಿಷ್ಯವನ್ನು ಹೊಂದಲು ನಾನು ಅವರಿಗೆ ಸಹಾಯ ಮಾಡಲು ನಿರ್ಧರಿಸಿದ್ದೇನೆ. ಅವರಿಗೆ ಸಹಾಯ ಮಾಡುವುದು ನನ್ನ ವೈಯಕ್ತಿಕ ಜವಾಬ್ದಾರಿ" ಎಂದು ಹೇಳಿದ್ದಾರೆ.

ಸಾವನ್ನಪ್ಪಿದ ಮತ್ತು ಗಾಯಗೊಂಡ ವಲಸಿಗರ ಕುಟುಂಬ ಸದಸ್ಯರ ವಿಳಾಸ ಮತ್ತು ಬ್ಯಾಂಕ್ ಖಾತೆ ವಿವರಗಳಿಗಾಗಿ ಸೋನು ಸೂದ್ ಜಾರ್ಖಂಡ್, ಬಿಹಾರ ಮತ್ತು ಉತ್ತರ ಪ್ರದೇಶ ಸೇರಿದ್ದಂತೆ ಹಲವಾರು ರಾಜ್ಯಗಳ ಅಧಿಕಾರಿಗಳ ಜೊತೆ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ನೇರವಾಗಿ ಹಣ ವರ್ಗಾವಣೆ ಮಾಡಲು ಸೋನು ಸೂದ್ ತೀರ್ಮಾಸಿದ್ದಾರಂತೆ.
ರೀಲ್ ನಲ್ಲಿ ಖಳನಟನಾಗಿ ಖ್ಯಾತಿಗಳಿಸಿದ್ದ ಸೋನು ಸೂದ್ ರಿಲಯ್ ಲೈಪ್ ನಲ್ಲಿ ಹೀರೋ ಆಗಿದ್ದಾರೆ. ವಲಸೆ ಕಾರ್ಮಿಕರಿಗೆ ಬಸ್, ರೈಲು, ವಿಮಾನಗಳ ಮೂಲಕ ಅವರನ್ನು ಮನೆತಲುಪಿಸಿದ್ದಾರೆ. ವಲಸಿಗರಿಗಾಗಿಯೆ ಸೋನು ಟೋಲ್ ಫ್ರೀ ಸಹಾಯವಾಣಿಯನ್ನು ಸಹ ಪ್ರಾರಂಭಿಸಿ, ದೂರವಾಣಿ ಕರೆಯ ಮೂಲಕ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಇನ್ನೂ ಮುಂಬೈನಲ್ಲಿರುವ ತಮ್ಮ ಹೋಟೆಲ್ ಅನ್ನು ಸೋನು ಆರೋಗ್ಯ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಬಿಟ್ಟುಕೊಟ್ಟಿದ್ದಾರೆ.


Click it and Unblock the Notifications











