twitter
    For Quick Alerts
    ALLOW NOTIFICATIONS  
    For Daily Alerts

    ಜೀವರಕ್ಷಕ ಆಕ್ಸಿಜನ್‌ಗಾಗಿ ಸೋನು ಸೂದ್ ಮತ್ತೊಂದು ಸಾಹಸ

    |

    ರಿಯಲ್ ಹೀರೋ ಸೋನು ಸೂದ್ ಕೊರೊನಾ ಸೋಂಕಿತರ ಪ್ರಾಣ ಉಳಿಸಲು ಹರಸಾಹಸ ಪಡುತ್ತಿದ್ದಾರೆ. ಸೋಂಕಿತರು ಆಕ್ಸಿಜನ್ ಸಿಗದೆ ನರಳುತ್ತಿದ್ದಾರೆ. ದೇಶದಲ್ಲಿ ಉಂಟಾಗಿರುವ ಆಕ್ಸಿಜನ್ ಕೊರತೆಯನ್ನು ನೀಗಿಸಲು ಸೋನು ಸೂದ್ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ವಿದೇಶದಿಂದ ಆಕ್ಸಿಜನ್ ಆಮದು ಮಾಡಿಕೊಳ್ಳಲು ಸೋನು ಸೂದ್ ನಿರ್ಧರಿಸಿದ್ದಾರೆ.

    ಆಕ್ಸಿಜನ್ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿರುವ ಜನರಿಗೆ ಜೀವರಕ್ಷಕ ತರಲು ಸೋನು ಸೂದ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ವಿದೇಶದಿಂದ ಆಕ್ಸಿಜನ್ ತರಲು ರಿಯಲ್ ಹೀರೋ ಮುಂದಾಗಿದ್ದಾರೆ. ದೆಹಲಿ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದಲ್ಲಿ ಅತೀ ಹೆಚ್ಚು ಕಷ್ಟ ಅನುಭವಿಸುತ್ತಿರುವ ಪ್ರಮುಖ ನಾಲ್ಕು ಸ್ಥಳಗಳಲ್ಲಿ ಆಮ್ಲಜನಕ ಸ್ಥಾವರ ಸ್ಥಾಪಿಸಲು ಸೋನು ಸೂದ್ ತೀರ್ಮಾಸಿದ್ದಾರೆ.

    ಸೋನು ಸೂದ್ ಫೌಂಡೇಶನ್‌ ಜೊತೆ ಕೈ ಜೋಡಿಸಿದ ಸಾರಾ ಅಲಿ ಖಾನ್ಸೋನು ಸೂದ್ ಫೌಂಡೇಶನ್‌ ಜೊತೆ ಕೈ ಜೋಡಿಸಿದ ಸಾರಾ ಅಲಿ ಖಾನ್

    ಅದಕ್ಕಾಗಿ ಫ್ರಾನ್ಸ್‌ನಿಂದ ಆಕ್ಸಿಜನ್ ಪ್ಲಾಂಟ್‌ಗಳನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೂದ್ 'ಆಕ್ಸಿಜನ್ ಸಿಗದೆ ಜನರು ತೊಂದರೆ ಪಡುತ್ತಿರುವುದನ್ನು ನೋಡಿದ್ದೇವೆ. ಈಗ ನಾವು ಅದನ್ನು ಪಡೆಯುತ್ತಿದ್ದೇವೆ. ಆಕ್ಸಿಜನ್ ಅನ್ನು ಅಸ್ಪತ್ರೆಗಳಿಗೆ ಸರಬರಾಜು ಮಾಡುವುದಲ್ಲದೆ ಆಮ್ಲಜನಕವನ್ನು ಸಿಲಿಂಡರ್‌ಗಳಲ್ಲಿ ಸದಾ ತುಂಬಿಸಿಡಲು ಸಹಕಾರಿ ಆಗುತ್ತೆ. ಇದು ಕೋವಿಡ್‌ನಿಂದ ಬಳಲುತ್ತಿರುವ ಜನರ ಪ್ರಮುಖ ಸಮಸ್ಯೆಯನ್ನು ಪರಿಹರಿಸುತ್ತದೆ' ಎಂದು ಸೋನು ಸೂದ್ ಹೇಳಿದ್ದಾರೆ.

    Sonu Sood to import Oxygen plant from France for Covid -19 patients

    ಈಗಾಗಲೇ ಸೋನು ಸೂದ್ ಫ್ರಾನ್ಸ್ ಜತೆ ಮಾತುಕತೆ ನಡೆಸಿ ಮೊದಲ ಸ್ಥಾವರವನ್ನು ಆರ್ಡರ್ ಮಾಡಿದ್ದಾರೆ. ಇದು ಭಾರತಕ್ಕೆ ಇನ್ನು 10 ರಿಂದ 12 ದಿನಗಳಲ್ಲಿ ತಲುಪಲಿದೆ. 'ಈ ಸಮಯ ನಮಗೆ ದೊಡ್ಡ ಸವಾಲಾಗಿದೆ. ಆದಷ್ಟು ಬೇಗ ಆಕ್ಸಿಜನ್ ಆಕ್ಸಿಜನ್ ಬಂದು ತಲುಪುವಂತೆ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇವೆ. ಇದರಿಂದ ಹೆಚ್ಚಿನ ಜೀವಗಳನ್ನು ಉಳಿಸಬಹುದಾಗಿದೆ' ಎಂದಿದ್ದಾರೆ.

    ಕೊರೊನಾ ಸಂಕಷ್ಟಕ್ಕೆ ಸಿಲುಕಿದ ಜನರನ್ನು ರಕ್ಷಿಸಲು ಸೋನು ಸೂದ್ ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದಾರೆ. ಆಕ್ಸಿಜನ್, ಬೆಡ್, ಚಿಕಿತ್ಸೆ ಸಿಗದೆ ಪರದಾಡುತ್ತಿರುವ ಅನೇಕರ ನೆರವಿಗೆ ಸೋನು ಸೂದ್ ಧಾವಿಸುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೊರೊನಾ ಸಂಕಷ್ಟದ ಸಮಯದಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.

    Recommended Video

    Corona ಸಾವು, ಕೊಟ್ಟ ಮಾತನ್ನ ಉಳಿಸಿಕೊಂಡ Kiccha Sudeep | Filmibeat Kannada

    ನಟಿ ಅನುಷ್ಕಾ ಶರ್ಮಾ ದಂಪತಿ, ಅಮಿತಾಬ್ ಬಚ್ಚನ್, ಪ್ರಿಯಾಂಕಾ ಚೋಪ್ರಾ, ಅಕ್ಷಯ್ ಕುಮಾರ್, ಅಜಯ್ ದೇವಗನ್ ಸೇರಿದಂತೆ ಅನೇಕರು ನೆರವಿಗೆ ಧಾವಿಸಿದ್ದಾರೆ.

    English summary
    Sonu Sood to import Oxygen plant from France for Covid -19 patients.
    Tuesday, May 11, 2021, 16:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X