ಸುಶಾಂತ್-ದಿಶಾ ಆತ್ಮಹತ್ಯೆ ಪ್ರಕರಣದಲ್ಲಿ ಸೂರಜ್ ಪಾಂಚೋಲಿ ಹೆಸರು: ದೂರು ದಾಖಲಿಸಿದ ಸೂರಜ್

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ತನಿಖೆ ಒಂದೆಡೆ ನಡೆಯುತ್ತಿದ್ದರೆ, ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಆತ್ಮಹತ್ಯೆ ಪ್ರಕರಣದ ತನಿಖೆ ಕೂಡ ನಡೆಯುತ್ತಿದೆ. ಇಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ನಟ ಸೂರಜ್ ಪಾಂಚೋಲಿ ಹೆಸರು ಕೇಳಿ ಬರುತ್ತಿದೆ.

Recommended Video

Rachita ram behind the scenes | Filmibeat Kannada

ದಿಶಾ ಆತ್ಮಹತ್ಯೆ ಪ್ರಕರಣದಲ್ಲಿ ಸೂಜರ್ ಪಾಂಚೋಲಿ ಹೆಸರು ತಳುಕು ಹಾಕಿಕೊಂಡಿರುವ ಬಗ್ಗೆ ಸಿಟ್ಟಾಗಿರುವ ಸೂರಜ್, ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಸುಖಾಸುಮ್ಮನೆ ಈ ಪ್ರಕರಣದಲ್ಲಿ ತನ್ನ ಹೆಸರನ್ನು ಎಳೆದು ತರುತ್ತಿದ್ದಾರೆ ಎಂದು ಸೂರಜ್ ಆರೋಪಿಸಿದ್ದಾರೆ. ಮುಂದೆ ಓದಿ..

ದೂರು ದಾಖಲಿಸಿದ ಸೂರಜ್

ದೂರು ದಾಖಲಿಸಿದ ಸೂರಜ್

ಸುಶಾಂತ್ ಮತ್ತು ದಿಶಾ ಸಾವಿನ ಬಳಿಕ ಸೂರಜ್ ಗೆ ಕಿರುಕುಳ ನೀಡಲಾಗುತ್ತಿದೆಯಂತೆ. ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು ನಖಲಿ ಸುದ್ದಿಗಳನ್ನು ಬಿತ್ತರಿಸುತ್ತಿವೆ ಎಂದು ಆರೋಪಿಸಿದ್ದಾರೆ. ಸುಖಾಸುಮ್ಮನೆ ತನ್ನ ಹೆಸರನ್ನು ಎಳೆದು ತಂದು ಕಿರುಕುಳ ನೀಡುತ್ತಿರುವ ಜನರ ವಿರುದ್ಧ ಸೂರಜ್ ಆಗಸ್ಟ್ 10 ರಂದು ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸುಳ್ಳು ಸುದ್ದಿ ವಿರುದ್ಧ ಸೂರಜ್ ಗರಂ

ಸುಳ್ಳು ಸುದ್ದಿ ವಿರುದ್ಧ ಸೂರಜ್ ಗರಂ

ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮದಲ್ಲಿ ಹರಿದಾಡುತ್ತಿರುವ ಸುದ್ದಿಯ ವಿರುದ್ಧ ಸೂರಜ್ ಗರಂ ಆಗಿದ್ದು, ತನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಕ್ರೀನ್ ಶಾಟ್ ತೆಗೆದು ಶೇರ್ ಮಾಡಿದ್ದಾರೆ. "ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದೆ. 2016ರಲ್ಲಿ ಕ್ಲಿಕ್ ಮಾಡಿದ ಫೋಟೋದಲ್ಲಿ ಇರುವ ಆ ಹುಡುಗಿ ದಿಶಾ ಸಾಲಿಯಾನ್ ಅಲ್ಲ. ನನ್ನ ಗೆಳತಿ ಅನುಶ್ರೀ ಗೌರ್. ಅವರು ಈಗ ಭಾರತದಲ್ಲಿ ವಾಸಿಸುತ್ತಿಲ್ಲ" ಎಂದಿದ್ದಾರೆ.

ದಿಶಾ ಅವರನ್ನು ಯಾವತ್ತು ಭೇಟಿಯಾಗಿಲ್ಲ

ದಿಶಾ ಅವರನ್ನು ಯಾವತ್ತು ಭೇಟಿಯಾಗಿಲ್ಲ

"ದಯವಿಟ್ಟು ಜನರ ಬ್ರೈನ್ ವಾಶ್ ಮಾಡುವ ಕೆಲಸವನ್ನು ನಿಲ್ಲಿಸಿ. ಮತ್ತು ನನಗೆ ಕಿರುಕುಳ ನೀಡುತ್ತಿರುವುದನ್ನು ನಿಲ್ಲಿಸಿ. ನನ್ನ ಜೀವನದಲ್ಲಿ ನಾನು ದಿಶಾ ಸಾಲಿಯಾನ್ ಅವರನ್ನು ಭೇಟಿ ಮಾಡಿಲ್ಲ ಮತ್ತು ಮಾತನಾಡಿಸಿಯೂ ಇಲ್ಲ" ಎಂದಿದ್ದಾರೆ

ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ಸೂರಜ್ ಹೆಸರು

ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ಸೂರಜ್ ಹೆಸರು

ಈಗಾಗಲೆ ಸೂರಜ್, ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ಸಿಲುಕಿಕೊಂಡು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇದೀಗ ಸುಶಾಂತ್ ಮತ್ತು ದಿಶಾ ಆತ್ಮಹತ್ಯೆ ಪ್ರಕರಣದಲ್ಲಿಯೂ ಸೂರಜ್ ಹೆಸರು ಕೇಳಿ ಬರುತ್ತಿದೆ. ಈ ಬಗ್ಗೆ ಖಾಸಗಿ ವಾಹಿನಿ ಜೊತೆ ಮಾತನಾಡಿರುವ ಸೂರಜ್ 'ಅವರೊಂದಿಗೆ ಯಾವುದೆ ಸಂಬಂಧ ಹೊಂದಿಲ್ಲ, ಸುಖಾಸುಮ್ಮನೆ ತನ್ನ ಹೆಸರನ್ನು ಎಳೆದುತರಲಾಗುತ್ತಿದೆ. ಇದರಿಂದ ತನ್ನ ಕುಟುಂಬಕ್ಕೆ ಸಮಸ್ಯೆಯಾಗುತ್ತಿದೆ. ಸುಶಾಂತ್ ಸಿಂಗ್ ಅವರದ್ದೂ ಆತ್ಮಹತ್ಯೆಯೊ ಕೊಲೆಯೋ ಎಂದು ಖಂಡಿತವಾಗಿಯೂ ಗೊತ್ತಿಲ್ಲ. ಆದರೆ ತನ್ನ ಜೀವನವನ್ನು ಕೊನೆಗೊಳಿಸಬೇಕೆಂದು ಬಯಸಿದ್ದಾರೆ' ಎಂದು ಹೇಳಿದ್ದಾರೆ.

More from Filmibeat

English summary
Actor Sooraj Pancholi files complaint against people who linking his name in sushant and Disha death case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X