ಆದಿತ್ಯ ಪಂಚೋಲಿ ಜೊತೆ ಕಂಗನಾ ಅಫೇರ್: ತಂದೆ ಸಂಬಂಧದ ಕುರಿತು ಮಗ ಹೇಳಿದ್ದೇನು?

ಕಂಗನಾ ರಣಾವತ್ ಸಿನಿಮಾ ವಿಚಾರಕ್ಕಿಂತ ಖಾಸಗಿ ಜೀವನಕ್ಕೆ ಸಂಬಂಧಿಸಿದ ಸುದ್ದಿಗಳಿಂದಲೇ ಹೆಚ್ಚು ಸುದ್ದಿಯಾದವರು. ಬಾಲಿವುಡ್ ನಟ ಹೃತಿಕ್ ರೋಷನ್ ಜೊತೆಗಿನ ಲವ್ ಬ್ರೇಕ್ ಅಪ್ ಆದ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದೀಗ, ಕಂಗನಾ ಅವರು ಹಳೆಯ ಅಫೇರ್ ಬಗ್ಗೆ ಮತ್ತೆ ಸುದ್ದಿಯಾಗಿದೆ. ಬಾಲಿವುಡ್ ನಟ ಆದಿತ್ಯ ಪಂಚೋಲಿ ಜೊತೆ ಕಂಗನಾ ಲಿವ್-ಇನ್-ರಿಲೆಶನ್ ಷಿಪ್ ನಲ್ಲಿದ್ದರು ಎಂಬ ವರದಿಗಳು ಈ ಹಿಂದೆ ಬಹಳ ಸಲ ಚರ್ಚೆಯಾಗಿದೆ. ಆಮೇಲೆ ಅದು ಬ್ರೇಕ್ ಅಪ್ ಆಗಿದ್ದು ಹಳೆಯ ವಿಚಾರ.

ಅತ್ಯಾಚಾರ ಪ್ರಕರಣ, ನಟ ಆದಿತ್ಯನಿಗೆ ತಾತ್ಕಾಲಿಕ ರಿಲೀಫ್

ಇದೀಗ, ಆದಿತ್ಯ ಪಂಚೋಲಿ ಅವರ ಮಗ ಸೂರಜ್ ಪಂಚೋಲಿ, ತಮ್ಮ ತಂದೆ ಮತ್ತು ಕಂಗನಾ ನಡುವಿನ ಅಫೇರ್ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ....

ಆ ಘಟನೆಗಳು ನನಗೆ ಖುಷಿ ಕೊಟ್ಟಿಲ್ಲ

ಆ ಘಟನೆಗಳು ನನಗೆ ಖುಷಿ ಕೊಟ್ಟಿಲ್ಲ

ಆದಿತ್ಯ ಪಂಚೋಲಿ ಮತ್ತು ಕಂಗನಾ ರಣಾವತ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೂರಜ್ ಪಂಚೋಲಿ ''ಅದು ಅವರ ವೈಯಕ್ತಿಕ ವಿಚಾರ. ಅದರಲ್ಲಿ ನಾನು ಭಾಗಿಯಾಗಲು ಇಷ್ಟಪಡುವುದಿಲ್ಲ. ನಾನು ನನ್ನ ಬಾಲ್ಯವನ್ನ ಹೆಚ್ಚು ಅಜ್ಜ-ಅಜ್ಜಿಯೊಂದಿಗೆ ಕಳೆದಿದ್ದೇನೆ. ಅದು ನಮ್ಮ ಪೋಷಕರ ಖಾಸಗಿ ವಿಚಾರ, ಅದನ್ನ ಅವರೇ ಬಗೆಹರಿಸಿಕೊಂಡಿದ್ದಾರೆ. ಎಲ್ಲರ ಜೀವನದಲ್ಲೂ ಏಳು-ಬೀಳು ಇರುತ್ತೆ. ಆ ವಿಚಾರ ನನಗೆ ಖುಷಿ ಕೊಟ್ಟಿಲ್ಲ'' ಎಂದು ಹೇಳಿದ್ದಾರೆ.

ನನ್ನ ತಾಯಿಗೆ ಮೆಚ್ಚುಗೆ ಹೇಳಬೇಕು

ನನ್ನ ತಾಯಿಗೆ ಮೆಚ್ಚುಗೆ ಹೇಳಬೇಕು

''ಈ ವಿಚಾರದಲ್ಲಿ ನನ್ನ ತಾಯಿಗೆ ಮೆಚ್ಚುಗೆ ಹೇಳಬೇಕು. ನನ್ನ ಕುಟುಂಬಕ್ಕಾಗಿ ನನ್ನ ತಂದೆ, ನನ್ನ ತಾಯಿ ಎಲ್ಲರೂ ಶ್ರಮಿಸಿದ್ದಾರೆ. ತಂದೆಗಿಂತ ತಾಯಿಗೆ ಹೆಚ್ಚು ಧೈರ್ಯದಿಂದ ಇದ್ದರು. ಅವರಿಗೆ ವಿಶೇಷವಾಗಿ ಕೃತಜ್ಞತೆ ಹೇಳಬೇಕು'' ಎಂದಿದ್ದಾರೆ.

ಕಂಗನಾ ಜೊತೆ ಲವ್ವಲ್ಲಿ ಇದ್ದ ಆದಿತ್ಯ

ಕಂಗನಾ ಜೊತೆ ಲವ್ವಲ್ಲಿ ಇದ್ದ ಆದಿತ್ಯ

ಕಂಗನಾ ರಣಾವತ್ ಇಂಡಸ್ಟ್ರಿಗೆ ಬಂದಾಗ ಬಹಳ ಕಷ್ಟದಲ್ಲಿದ್ದರು. ಸಿನಿಮಾ ಇಲ್ಲದೇ, ಸಕ್ಸಸ್ ಇಲ್ಲದೆ ಗೆಲುವಿಗಾಗಿ ಎದುರು ನೋಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಕಂಗನಾಗೆ ಜೊತೆಯಾಗಿದ್ದ ಆದಿತ್ಯ ಪಂಚೋಲಿ. ಇವರಿಬ್ಬರ ಸ್ನೇಹ ಬಹಳ ಆತ್ಮೀಯವಾಗಿದ್ದ ಕಾರಣ, ಇಬ್ಬರಿಗೂ ಅಫೇರ್ ಇದೆ ಎಂಬ ವರದಿಗಳು ಪ್ರಕಟವಾದವು.

ಮನೆ ಕೊಡಿಸಿದ್ದ ಆದಿತ್ಯ

ಮನೆ ಕೊಡಿಸಿದ್ದ ಆದಿತ್ಯ

ಈ ಹಿಂದಿನ ವರದಿಗಳ ಪ್ರಕಾರ, ಕಂಗನಾ ಅವರಿಗೆ ಆದಿತ್ಯ ಪಂಚೋಲಿ ಅವರು ದುಬಾರಿ ಬೆಲೆಯ ಮನೆ ಕೊಡಿಸಿದ್ದರಂತೆ. ಬಳಿಕ ಪಂಚೋಲಿ ಅವರಿಂದ ದೂರವಾದ ಕಂಗನಾ, ಕಿರುಕುಳದ ಆರೋಪದ ಮಾಡಿದ್ದರು. ದೈಹಿಕ ಹಲ್ಲೆ ಮತ್ತು ಕಿರುಕುಳ ಕೊಟ್ಟಿದ್ದರು ಎಂದು ಪೊಲೀಸ್ ದೂರು ಕೂಡ ನೀಡಿದ್ದರಂತೆ.

More from Filmibeat

English summary
Bollywood actor Sooraj Pancholi spoke about his father aditya pancholi and kangana ranaut relationship.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X