For Quick Alerts
  ALLOW NOTIFICATIONS  
  For Daily Alerts

  ಏಪ್ರಿಲ್ 2 ರಂದು ಅಕ್ಷಯ್ ಕುಮಾರ್ 'ಸೂರ್ಯವಂಶಿ' ಬಿಡುಗಡೆ

  |

  ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ನಟನೆಯ ಭಾರಿ ನಿರೀಕ್ಷೆಯ 'ಸೂರ್ಯವಂಶಿ' ಸಿನಿಮಾ ಏಪ್ರಿಲ್ 2 ರಂದು ಬಿಡುಗಡೆಯಾಗಲಿದೆ. ಆದರೆ, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಮಾತ್ರ ಅಕ್ಷಯ್ ಕುಮಾರ್ ಸಿನಿಮಾ ತೆರೆಗೆ ಬರ್ತಿದೆ ಎಂದು ಹೇಳಲಾಗುತ್ತಿದೆ.

  ಕೊರೊನಾ ಕಾರಣದಿಂದ ರಿಲೀಸ್ ದಿನಾಂಕವನ್ನು ಮುಂದೂಡಲಾಗಿತ್ತು. ಟ್ರೈಲರ್ ರಿಲೀಸ್ ಆದ ಕ್ಷಣದಿಂದ ಚಿತ್ರದ ಬಿಡುಗಡೆಗಾಗಿ ಕಾಯುತ್ತಿರುವ ಪ್ರೇಕ್ಷಕರಿಗೆ ಕೊನೆಗೂ ರೋಹಿತ್ ಶೆಟ್ಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

  'ವಿದೇಶಿ ಪ್ರಜೆ ಅಕ್ಷಯ್ ಕುಮಾರ್ ಭಾರತದ ಆಂತರಿಕ ವಿಷಯದಲ್ಲಿ ಮೂಗುತೂರಿಸುವುದೇಕೆ''ವಿದೇಶಿ ಪ್ರಜೆ ಅಕ್ಷಯ್ ಕುಮಾರ್ ಭಾರತದ ಆಂತರಿಕ ವಿಷಯದಲ್ಲಿ ಮೂಗುತೂರಿಸುವುದೇಕೆ'

  ಅದ್ರೆ, ಸೂರ್ಯವಂಶಿ ಚಿತ್ರದ ಮೇಲೆ ಮಲ್ಟಿಪ್ಲೆಕ್ಸ್ ಮಾಲೀಕರು ಬೇಸರ ಮಾಡಿಕೊಳ್ಳುವಂತಾಗಿದೆ. ಸಿನಿಮಾದ ಬಿಡುಗಡೆ ಹಿನ್ನೆಲೆ ರೋಹಿತ್ ಶೆಟ್ಟಿ ಮತ್ತು ರಿಲಾಯನ್ಸ್ ಸಂಸ್ಥೆ ಮಲ್ಟಿಪ್ಲೆಕ್ಸ್ ಮಾಲೀಕರಿಗೆ ಕೆಲವು ಷರತ್ತು ನೀಡಿದ್ದರು. ಇದಕ್ಕೆ ಮಲ್ಟಿಪ್ಲೆಕ್ಸ್ ಮಾಲೀಕರು ಒಪ್ಪದ ಕಾರಣ ಚಿತ್ರವನ್ನು ಸಿಂಗಲ್ ಸ್ಕ್ರೀನ್‌ನಲ್ಲಿ ಮಾತ್ರ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

  ಈ ಕುರಿತು ರೋಹಿತ್ ಶೆಟ್ಟಿ ಅವರ ಆಪ್ತರೊಬ್ಬರು 'ಪಿಂಕ್ ವಿಲ್ಲ' ಜೊತೆ ಮಾತನಾಡಿದ್ದು, ''ಯಾವ ನಿರ್ಮಾಪಕನು ನಷ್ಟ ಮಾಡಿಕೊಳ್ಳುವಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಚಿತ್ರಮಂದಿರಗಳಲ್ಲಿ ಸೂರ್ಯವಂಶಿ ತೆರೆಗೆ ಬರಲಿದೆ'' ಎಂದು ಮಾಹಿತಿ ನೀಡಿದ್ದಾರೆ.

  ಅಂದ್ಹಾಗೆ, ಸೂರ್ಯವಂಶಿ ಚಿತ್ರ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಕೊರೊನಾ ಕಾರಣದಿಂದ ರಿಲೀಸ್ ಮಾಡಲು ಸಾಧ್ಯವಾಗಿಲ್ಲ. ಒಂದು ಹಂತದಲ್ಲಿ ಒಟಿಟಿಯಲ್ಲಿ ಸೂರ್ಯವಂಶಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದ್ರೀಗ, ಚಿತ್ರಮಂದಿರದಲ್ಲೇ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.

  ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಕತ್ರಿನಾ ಕೈಫ್ ಹಾಗೂ ಅತಿಥಿ ಪಾತ್ರಗಳಲ್ಲಿ ಅಜಯ್ ದೇವಗನ್, ರಣ್ವೀರ್ ಸಿಂಗ್ ನಟಿಸಿದ್ದಾರೆ.

  ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾ ಇಲ್ಲಿಯವರೆಗೆ ಸಂಪಾದಿಸಿದ್ದೆಷ್ಟು ಗೊತ್ತಾ? | Filmibeat Kannada
  English summary
  Akshay Kumar and Katrina kaif starrer Sooryavanshi to Release In Single Screens and Non Multiplex Chains On april 2nd.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X