62ನೇ ವರ್ಷದಲ್ಲಿ ಅನೈತಿಕ ಸಂಬಂಧ ; ನನ್ನಿಂದ ತಪ್ಪಾಗಿದೆ ಕ್ಷಮಿಸಿ ಎಂದ ಗೋವಿಂದ- ಆ ನಟಿಗೆ ಧನ್ಯವಾದ ಹೇಳಿದ್ದೇಕೆ ?

ಅರೆಂಜ್ ಮ್ಯಾರೇಜ್ ಆಗಿರಲಿ.. ಲವ್ ಮ್ಯಾರೇಜ್ ಆಗಿರಲಿ.. ಮದುವೆಯಾದ ನಂತರ ಒಬ್ಬರ ಮೇಲೊಬ್ಬರಿಗೆ ನಂಬಿಕೆ ಇರಬೇಕು. ಸಂಬಂಧ ಆಳವಾಗಿ ಬೇರೂರಬೇಕು. ಆಗಲೇ ದಾಂಪತ್ಯ ಜೀವನ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ. ಆದರೆ.. ಬದಲಾದ ಈ ಕಾಲದಲ್ಲಿ. ಬದುಕಲು ದೊರೆತ ಅಸಂಖ್ಯ ಅವಕಾಶಗಳು, ವ್ಯಕ್ತಿ ಸ್ವಾತಂತ್ರ್ಯ..ಹೊಂದಾಣಿಕೆ ಕೊರತೆ.. ದೈಹಿಕ ಅತೃಪ್ತಿ.. ಪ್ರೀತಿಯ ಕೊರತೆ..

ಹೀಗೆ ಮುಂತಾದ ಕಾರಣಗಳಿಂದ ಹಲವರು ಮದುವೆಯ ನಂತರ ಅನೈತಿಕ ಸಂಬಂಧಕ್ಕೆ ಹಾತೊರೆಯುತ್ತಿದ್ದಾರೆ. ವೈವಾಹಿಕ ಸಂಬಂಧದಲ್ಲಿ ಸಿಗದಿದ್ದನ್ನು ಹೊರಗಡೆ ಹುಡುಕುವ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾರೆ. ಒಂದರ್ಥದಲ್ಲಿ ಇಂದು ವೈವಾಹಿಕ ಸಂಬಂಧ ಪವಿತ್ರವಾದ ಅನುಬಂಧ ಎನ್ನುವ ಮಾತಿಗೆ ಬೆಲೆ ಕೊಡುವವರು ತೀರಾ ಕಡಿಮೆಯಾಗಿದ್ದಾರೆ.

sorry-thank-you-komal-govinda-s-shocking-reaction-to-wife-ssunita-s-affair-allegations

ಈ ಸಾಲಿನಲ್ಲಿ ಬಾಲಿವುಡ್‌ನ ಸೂಪರ್ ಸ್ಟಾರ್ ''ಗೋವಿಂದ'' ಕೂಡ ಇದ್ದಾರೆ. ಇಂತಹದ್ದೊಂದು ಆರೋಪವನ್ನು ಬೇರೆ ಯಾರು ಅಲ್ಲ ಬದಲಿಗೆ ಅವರ ಪತ್ನಿ ಸುನಿತಾ ಅಹುಜಾ ಅವರೇ ಮಾಡುತ್ತಿದ್ದಾರೆ.ಕಳೆದೊಂದು ಒಂದೂವರೆ ವರ್ಷದಿಂದ ತಮ್ಮ ಸಾಂಸಾರಿಕ ಬದುಕಿನ ಕುರಿತು ಸಾರ್ವಜನಿಕವಾಗಿ ಮಾತನಾಡುತ್ತಿದ್ದಾರೆ.

ಇಷ್ಟೇ ಅಲ್ಲ ಎಲ್ಲರನ್ನೂ ಕರೆದು ಕರೆದು ತಮ್ಮ ಪತಿ ಗೋವಿಂದಗೆ 30 ವರ್ಷದ ಮರಾಠಿ ನಟಿಯ ಜೊತೆ ಅಕ್ರಮ ಸಂಬಂಧ ಇದೆ ಎಂದು ಸಂದರ್ಶನವನ್ನು ನೀಡುತ್ತಿದ್ದಾರೆ. ಪತ್ನಿಯ ಈ ಆರೋಪಗಳಿಗೆ ಈಗ ಪ್ರತಿಕ್ರಿಯೆಯನ್ನು ನೀಡಿರುವ ಗೋವಿಂದ ದಯಮಾಡಿ ನನ್ನನ್ನೂ ಕ್ಷಮಿಸಿ ಎಂದು ಹೇಳಿದ್ದಾರೆ. ಯುವ ನಟಿ ಕೋಮಲ್‌ಗೆ ಧನ್ಯವಾದವನ್ನು ಕೂಡ ಹೇಳಿದ್ದಾರೆ.

ಈ ಕುರಿತು ಇಂದು (ಫೆಬ್ರವರಿ 10) ''ಎಎನ್‌ಐ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಗೋವಿಂದ, ನನ್ನ ಮೇಲೆ ಆರೋಪಗಳಿರುವುದು ಇಂದು ನಿನ್ನೆಯಿಂದಲ್ಲ ಎಂದಿದ್ದಾರೆ. ಸದ್ಯ ಆರೋಪ ಮಾಡುತ್ತಿರುವುದು ಬೇರೆ ಯಾರು ಅಲ್ಲ ಬದಲಿಗೆ ನನ್ನ ಬಾಲ್ಯದ ಪ್ರೀತಿ (ಸುನಿತಾ ಅಹುಜಾ ) ಎಂದು ಹೇಳಿದ್ದಾರೆ.

ಪ್ರೀತಿಯ ವಿಚಾರದಲ್ಲಿ ಕೆಲ ಒಮ್ಮೆ ನಾವು ಅಂದುಕೊಂಡಂತೆ ಆಗಲ್ಲ, ಎಡವುತ್ತೇವೆ ಎಂದು ಹೇಳಿರುವ ಗೋವಿಂದ, ಈಗ ಪ್ರೀತಿಯಾದರೆ ಅದಕ್ಕೆ ಕೆಲವರು ವೃದ್ಧಾಪ್ಯದ ಪ್ರೀತಿ ಎಂದು ಕರೆಯುತ್ತಾರೆ, ಶುಗರ್ ಡ್ಯಾಡಿ ಎನ್ನುತ್ತಾರೆ ಎಂದು ಹೇಳಿದ್ದಾರೆ.

sorry-thank-you-komal-govinda-s-shocking-reaction-to-wife-ssunita-s-affair-allegations

ನಾನು ಮಿಸ್ ಯೂನಿವರ್ಸ್ ಜೊತೆ ಕೆಲಸ ಮಾಡಿದ್ದೇನೆ, ನಾಲ್ಕು ಸೂಪರ್ ಸ್ಟಾರ್ ನಾಯಕಿಯರ ಜೊತೆ ಕೆಲಸ ಮಾಡಿದ್ದೇನೆ, ಆದರೆ, ನಾನು ಯಾವತ್ತೂ ಯಾರ ಜೊತೆಯೂ ಅನುಚಿತವಾಗಿ ವರ್ತಿಸಿಲ್ಲ, ಯಾರನ್ನೂ ಕೆಟ್ಟ ದೃಷ್ಟಿಯಿಂದ ನೋಡಿಲ್ಲ ಎಂದು ಹೇಳಿರುವ ಗೋವಿಂದ ಬೇಕಿದ್ದರೆ ನೀವು ಯಾರನ್ನು ಬೇಕಾದರು ಕೇಳಬಹುದು ಎಂದಿದ್ದಾರೆ.

ನನ್ನ ಜೊತೆ ತೆರೆ ಹಂಚಿಕೊಂಡ ಎಲ್ಲ ಕಲಾವಿದರಿಗೆ ಮತ್ತು ನಾಯಕಿಯರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದಿರುವ ಗೋವಿಂದ ನನ್ನ ಚಿತ್ರಗಳ ಗೆಲುವಿಗೆ ನಾನೊಬ್ಬನೇ ಕಾರಣ ಅಲ್ಲ, ನನ್ನ ಚಿತ್ರದ ನಿರ್ದೇಶಕರು, ನಾಯಕಿಯರು, ತಂತ್ರಜ್ಞರು, ಇವರೆಲ್ಲರು ಕೂಡ ಕಾರಣ, ಅವರಿಗೆಲ್ಲ ನಾನು ಸದಾ ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ. ಎಲ್ಲರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಇನ್ನೂ ಕೆಲ ದಿನಗಳ ಹಿಂದೆ ''ಮಿಸ್ ಮಾಲಿನಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಸುನಿತಾ ಅಹುಜಾ, ನಿಮ್ಮ ಹೆಸರು ಕೋಮಲ್ ಅಂತಾನಾ? ಈ ಹೆಸರು ಸ್ವಲ್ಪ ಗೊಂದಲಮಯವಾಗಿದೆ ಎಂದು ಹೇಳಿದ್ದರು. ನನಗೆ ಈ ಕೋಮಲ್ ಎಂಬ ಹೆಸರು ಇಷ್ಟವಾಗುವುದಿಲ್ಲ. ಈ ಹೆಸರನ್ನು ಬದಲಾಯಿಸಿ ಎಂದು ನಿರೂಪಕಿಗೆ ಹೇಳಿದ್ದ ಸುನಿತಾ, ಕೋಮಲ್ ಎಂಬ ಹೆಸರಿನ ಒಬ್ಬ ಹುಡುಗಿಯಿದ್ದಾಳೆ, ಯಾವುದೋ XYZ. ನನಗೆ ಅವಳು ಇಷ್ಟವಿಲ್ಲ ಎಂದಿದ್ದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಕೂಡ ಪ್ರತಿಕ್ರಿಯೆ ನೀಡಿರುವ ಗೋವಿಂದ, ಕೋಮಲ್‌ಗೆ ನಾನು ತುಂಬಾನೇ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.ಇಂದು ನಾನು ಚೂರು ಪಾರು ನೆಮ್ಮದಿಯಿಂದ ಇದ್ದೇನೆ ಅಂದರೆ ಅದಕ್ಕೆ ಕಾರಣ ಕೋಮಲ್ ಎಂದು ಹೇಳಿರುವ ಗೋವಿಂದ, ನನ್ನ ಪತ್ನಿ ಇಷ್ಟೆಲ್ಲ ಆರೋಪ ಮಾಡಿದರು, ಆಕೆಯ ಹೆಸರನ್ನು ತೆಗೆದುಕೊಂಡರು ಕೂಡ ಕೋಮಲ್ ಎಲ್ಲವನ್ನೂ ಸಹಿಸಿಕೊಂಡು ಮೌನವಾಗಿದ್ದಾಳೆ, ಇಲ್ಲಿಯವರೆಗೆ ಒಂದೇ ಒಂದು ಮಾತು ಆಡಿಲ್ಲ ಎಂದು ಹೇಳಿದ್ದಾರೆ.

ಮುಂದುವರೆದು ಇಂತಹ ಪರಿಸ್ಥಿತಿಯಲ್ಲಿ ಇಂದಿನ ಯುವಪೀಳಿಗೆ ಏನು ಬೇಕಾದರೂ ಹೇಳಬಹುದಿತ್ತು ಎಂದಿರುವ ಗೋವಿಂದ, ಈ ಮೂಲಕ ಇಂದಿನ ಯುವಕ ಯುವತಿಯರಲ್ಲಿ ತಾಳ್ಮೆ ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಕೋಮಲ್‌ ಅವರ ಮೌನ ಮೆಚ್ಚಿಕೊಂಡಿದ್ದಾರೆ.

ನನ್ನ ಪತ್ನಿ ಸುನೀತಾ ಉಲ್ಲೇಖ ಮಾಡುತ್ತಿರುವ ಹೆಸರುಗಳಿಂದ ನನಗೆ ನೋವಾಗಿದೆ ಎಂದು ಹೇಳಿರುವ ಗೋವಿಂದ ಇದನ್ನೇ ನೆಪವೊಡ್ಡಿ ನನ್ನ ಜೊತೆ ಕೆಲಸ ಮಾಡಲು ಹೊಸಬರು ಹಿಂಜರಿಯಬಾರದು ಎನ್ನುವ ಉದ್ದೇಶದಿಂದ ನಾನು ಅವರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ. ಎಲ್ಲ ಹೊಸಬರಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ಗೋವಿಂದ ಅವರ ಈ ಮಾತುಗಳಿಗೆ ಸುನಿತಾ ಅಹುಜಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Govinda responds to Ssunita Ahuja’s affair allegations involving newcomer Komal. The Bollywood veteran apologizes for the controversy and slams the rumors as a plot to ruin his career. Watch Govinda’s full statement and the viral reaction here
Read more about: govinda affair
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X