For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್‌ ಗೆ ಗೌರವ ಸಲ್ಲಿಸಿದ ದೆಹಲಿ ಮಹಾನಗರ ಪಾಲಿಕೆ

  |

  ಅಕಾಲಿಕವಾಗಿ ನಿಧನ ಹೊಂದಿದ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ಹುಟ್ಟುಹಬ್ಬ ನಿನ್ನೆ (ಜನವರಿ 21). ಯುವ ಪ್ರತಿಭಾವಂತ ನಟನಿಗೆ ಗೌರವ ಸಲ್ಲಿಸುವ ನಿರ್ಣಯ ಕೈಗೊಂಡಿದೆ ದೆಹಲಿ ಮಹಾನಗರ ಪಾಲಿಕೆ.

  ಸುಶಾಂತ್ ಸಿಂಗ್ ರಜಪೂತ್ ಹೆಸರನ್ನು ದಕ್ಷಿಣ ದೆಹಲಿಯ ರಸ್ತೆಯೊಂದಕ್ಕೆ ಇಡಲು ಒಪ್ಪಿಗೆ ಸೂಚಿಸಲಾಗಿದೆ. ದಕ್ಷಿಣ ದೆಹಲಿಯ ಆಂಡ್ರೀವ್ಸ್ ಗಂಜ್‌ ನ ಮುಂದುವರೆದ ರಸ್ತೆಗೆ ಸುಶಾಂತ್ ಸಿಂಗ್ ರಜಪೂತ್ ರಸ್ತೆ ಎಂದು ಹೆಸರಿಡಲಾಗಿದೆ.

  ಕಾಂಗ್ರೆಸ್ ಕೌನ್ಸಲರ್ ಅಭಿಷೇಕ್ ದತ್ ಈ ವಿಷಯ ಸ್ಪಷ್ಟಪಡಿಸಿದ್ದು, ಆರು ತಿಂಗಳ ಹಿಂದೆಯೇ ಆಂಡ್ರೀವ್ಸ್ ಗಂಜ್ ನ ರಸ್ತೆಯೊಂದಕ್ಕೆ ಸುಶಾಂತ್ ಸಿಂಗ್ ರಜಪೂತ್ ಹೆಸರಿಡುವಂತೆ ಮನವಿ ಬಂದಿತ್ತು. ಮನವಿಗೆ ಪಾಲಿಕೆ ಸದಸ್ಯರ ಒಪ್ಪಿಗೆ ಪಡೆದು ಇದೀಗ ರಸ್ತೆಗೆ ಸುಶಾಂತ್ ಸಿಂಗ್ ಹೆಸರು ಇಡಲಾಗುತ್ತಿದೆ ಎಂದಿದ್ದಾರೆ.

  ಸುಶಾಂತ್ ಸಿಂಗ್ ಹೆಸರಲ್ಲಿ ಸ್ಕಾಲರ್ ಶೀಪ್ ನೀಡುವುದಾಗಿ ಸುಶಾಂತ್ ಸಹೋದರಿ ಘೋಷಣೆ ಮಾಡಿದ್ದಾರೆ. ಆಕಾಶ ಕಾಯಕ್ಕೆ ಸುಶಾಂತ್ ಸಿಂಗ್ ಹೆಸರು ಇಡುವಂತೆ ಸುಶಾಂತ್ ಅಭಿಮಾನಿಗಳು ಈ ಹಿಂದೆ ಒತ್ತಾಯಿಸಿದ್ದರು.

  ಈ ಸಾಧನೆ ಮಾಡಿದ ಮೊದಲ ಕನ್ನಡಿಗ ಸುದೀಪ್ | Filmibeat Kannada

  ಸುಶಾಂತ್ ಸಿಂಗ್ ರಜಪೂತ್ ಜೂನ್ 14 ರಂದು ಮುಂಬೈನ ತಮ್ಮ ನಿವಾಸದಲ್ಲಿ ಮೃತರಾಗಿದ್ದರು. ಸುಶಾಂತ್ ಸಿಂಗ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಸಾವಿನ ತನಿಖೆ ಮಾಡಿದ ಮುಂಬೈ ಪೊಲೀಸರು ಇದು ಆತ್ಮಹತ್ಯೆ ಎಂದು ವರದಿ ನೀಡಿದ್ದರು. ಪ್ರಸ್ತುತ ಸುಶಾಂತ್ ಸಾವಿನ ತನಿಖಿನ ತನಿಖೆಯನ್ನು ಸಿಬಿಐ ಮಾಡುತ್ತಿದೆ.

  English summary
  A road in south Delhi named after late actor Sushant Singh Rajput. Congress councilor confirmed it to media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X