ಬಾಕ್ಸಾಫೀಸ್ ಉಳಿಸಿಕೊಳ್ಳಲು ಬಾಲಿವುಡ್ ಹರಸಾಹಸ: ಸಾಲು ಸಾಲು ಸಿನಿಮಾ ರಿಲೀಸ್!

ಸೌತ್ ಸಿನಿಮಾರಂಗದಲ್ಲಿ ಸಾಲು ಸಾಲು ಪ್ಯಾನ್ ಇಂಡಿಯಾ ಚಿತ್ರಗಳು ಬರಲು ಶುರುವಾದ ಕಾರಣಕ್ಕೆ ತಲೆನೋವು ಶುರುವಾಗಿದೆ. ನಾರ್ಥ್‌ನಲ್ಲೂ ಕೂಡ ಕನ್ನಡ ಸೇರಿದಂತೆ ಸೌತ್ ಸಿನಿಮಾಗಳ ಹಾವಳಿ ಹೆಚ್ಚಾಗುತ್ತಿದೆ. ಹಾಗಾಗಿ ಅಲ್ಲಿ ರಿಲೀಸ್ ಆಗುವಂತಹ ಹಿಂದಿ ಸಿನಿಮಾಗಳ ಮೇಲೆ ಹೊಡೆತ ಬಿದ್ದಿದೆ.

RRR, 'ಕೆಜಿಎಫ್ 2', 'ಪುಷ್ಪ' ಅಂತಹ ಸಿನಿಮಾಗಳು ಬಂದಮೇಲೆ ಉತ್ತರ ಭಾರತದಲ್ಲಿ ಸೌತ್ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿದ್ದು, ಹಿಂದಿ ಸಿನಿಮಾಗಳನ್ನು ನೋಡುವವರು ಕಡಿಮೆಯಾಗಿದ್ದಾರೆ. ಇದು ಬಾಕ್ಸಾಫೀಸ್ ರಿಪೋರ್ಟ್‌ನಲ್ಲಿ ಗೊತ್ತಾಗುತ್ತೆ.

ಸದ್ಯ ಮತ್ತೆ ಬಾಕ್ಸಾಫೀಸ್‌ ಅನ್ನು ಪಡೆದುಕೊಳ್ಳುವಂತಹ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ಬಾಲಿವುಡ್ ಸ್ಟಾರ್ ನಟರು ಸಾಲು ಸಾಲು ಸಿನಿಮಾಗಳನ್ನು ರಿಲೀಸ್ ಮಾಡುವ ಯೋಚನೆಯಲ್ಲಿದ್ದಾರೆ. ಇದರಿಂದ ಬಾಲಿವುಡ್ ಬಿಗ್ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿದೆ. ಯಾವೆಲ್ಲ ಚಿತ್ರಗಳು ಯಾವ ರೀತಿಯ ನಿರೀಕ್ಷೆಯೊಂದಿಗೆ ಬರುತ್ತಿವೆ ಅನ್ನೋದನ್ನ ಮುಂದೆ ಓದಿ....

ರಣ್‌ಬೀರ್ ಕಪೂರ್ 2 ಚಿತ್ರಗಳಿ ರಿಲೀಸ್‌ಗೆ ರೆಡಿ!

ರಣ್‌ಬೀರ್ ಕಪೂರ್ 2 ಚಿತ್ರಗಳಿ ರಿಲೀಸ್‌ಗೆ ರೆಡಿ!

ರಣ್‌ಬೀರ್ ಕಪೂರ್ ಸದ್ಯ ಅನೇಕ ಚಿತ್ರಗಳಲ್ಲಿ ಅಭಿನಯಿಸುತ್ತಾರೆ. ಅವರ ಕೈಯಲ್ಲಿ ಸಾಲು, ಸಾಲು ಸಿನಿಮಾಗಳು ಇವೆ. ಆಲಿಯಾ ಭಟ್ ಜೊತೆಗೆ 'ಬ್ರಹ್ಮಾಸ್ತ್ರ' ಸಿನಿಮಾವನ್ನು ಮಾಡುತ್ತಿದ್ದಾರೆ. ಈ ಸಿನಿಮಾದ ಟ್ರೈಲರ್ ಕೂಡ ರಿಲೀಸ್ ಆಗಿದ್ದು, ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಸೆಪ್ಟೆಂಬರ್ 9ಕ್ಕೆ ಈ ಚಿತ್ರ ತೆರೆಗೆ ಬರಲಿದೆ. ಇನ್ನು ಈ ಸಿನಿಮಾಗೂ ಮೊದಲು ಜುಲೈ 11ಕ್ಕೆ 'ಶಂಶೇರಾ' ಸಿನಿಮಾ ರಿಲೀಸ್ ಆಗುತ್ತಿದೆ. ನಂತರ 'ಅನಿಮಲ್' ಸಿನಿಮಾ ತೆರೆಗೆ ಬರಲಿದೆ.

ಕಾರ್ತಿಕ್ ಆರ್ಯನ್ ಸಿನಿಮಾಗಳ ಸಕ್ಸಸ್!

ಕಾರ್ತಿಕ್ ಆರ್ಯನ್ ಸಿನಿಮಾಗಳ ಸಕ್ಸಸ್!

ಕಾರ್ತಿಕ್ ಆರ್ಯನ್ ನಟನೆಯ 'ಭೂಲ್ ಭುಲೈಯಾ 2' ರಿಲೀಸ್ ಬಳಿಕ ಸ್ವಲ್ಪಮಟ್ಟಿಗೆ ಬಾಲಿವುಡ್ ಬಾಕ್ಸಾಫೀಸ್ ಟ್ರ್ಯಾಕ್‌ಗೆ ಬಂದಿದೆ. ಸದ್ಯ ಕಾರ್ತಿಕ್ ಆರ್ಯನ್‌ಗೆ ದೊಡ್ಡ ಅಭಿಮಾನಿ ಬಳಗ ಕೂಡ ಹುಟ್ಟಿಕೊಂಡಿದೆ. ಕಾರ್ತಿಕ್ ಅಭಿನಯದ 'ಶೆಹಜಾದಾ' ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಬಳಿಕ 'ಕ್ಯಾಪ್ಟನ್ ಇಂಡಿಯಾ, 'ಸತ್ಯನಾರಾಯಣ್ ಕಿ ಕಥಾ' ಎಂಬ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಶಾರುಖ್ ಖಾನ್ ಸಿನಿಮಾಗಳು ಪ್ರಕಟ!

ಶಾರುಖ್ ಖಾನ್ ಸಿನಿಮಾಗಳು ಪ್ರಕಟ!

'ಝೀರೊ' ಚಿತ್ರದ ನಂತರ ವಿಶ್ರಾಂತಿ ತೆಗೆದುಕೊಂಡಿದ್ದ ಶಾರುಖ್ ಖಾನ್ ಮೂರು ದೊಡ್ಡ ಚಿತ್ರಗಳನ್ನು ಮಾಡುತ್ತಿದ್ದಾರೆ. 'ಪಠಾಣ್', 'ಜವಾನ್' ಮತ್ತು 'ಡಂಕಿ' ಎನ್ನುವ 3 ಸಿನಿಮಾಗಳಲ್ಲಿ ನಟ ಶಾರುಖ್ ಖಾನ್ ನಟಿಸಲಿದ್ದಾರೆ. 'ಪಠಾಣ್' ಚಿತ್ರದ ರಿಲೀಸ್ ದಿನಾಂಕ ಕೂಡ ಈಗಾಲೇ ಪ್ರಕಟವಾಗಿದ್ದು, 'ಜವಾನ್' ಚಿತ್ರೀಕರಣ ಶುರುವಾಗಿದೆ. ಇದರ ಜೊತೆಗೆ 'ಡಾನ್ 3' ಬಗ್ಗೆಯೂ ಸುದ್ದಿ ಹಬ್ಬಿದೆ.

ಅಕ್ಷಯ್ ಕುಮಾರ್ ಸಿನಿಮಾಗಳು!

ಅಕ್ಷಯ್ ಕುಮಾರ್ ಸಿನಿಮಾಗಳು!

ಅಕ್ಷಯ್ ಕಮಾರ್ ಅಭಿನಯದ 'ಸಾಮ್ರಾಟ್ ಪೃಥ್ವಿರಾಜ್' ಬಾಕ್ಸಾಫೀಸ್‌ನಲ್ಲಿ ಸೋತು ಸುಣ್ಣವಾಗಿದೆ. ಆದರೂ ನಟ ಅಕ್ಷಯ್ ಕುಮಾರ್ ಸಾಲು, ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಅಕ್ಷಯ್ ಕುಮಾರ್ 'ರಾಮ್ ಸೇತು', ರಕ್ಷಾ ಬಂಧನ, 'ಬಡೇ ಮಿಯಾ ಚೋಟೆ ಮಿಯಾ', 'ಸೆಲ್ಫಿ', 'ಗೂರ್ಖಾ' ಸೇರಿದಂತೆ ಹಲವು ಚಿತ್ರಗಳು ಅಕ್ಷಯ್ ಕುಮಾರ್ ಕೈಯಲ್ಲಿ ಇವೆ. ಇನ್ನು ಇತ್ತೀಚೆಗೆ 'ಹೇರಾ ಫೆರಿ 3' ಸಿನಿಮಾ ಕೂಡ ಅನೌನ್ಸ್ ಆಗಿದೆ.

More from Filmibeat

English summary
Bollywood Stars Back To Back Films Release For Box Office Revive, Effect Of South Films, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X