'ದಕ್ಷಿಣ ಭಾರತ ಸಿನಿಮಾದಲ್ಲಿ ಸೊಂಟ ತೋರಿಸಿದರೆ ಸಾಕು': ಪೂಜಾ ಹೆಗ್ಡೆ ವಿವಾದ

ಬಾಲಿವುಡ್‌ನಿಂದ ಬಂದು ತೆಲಗು ಸಿನಿಮಾರಂಗದಲ್ಲಿ ನೆಲೆ ಕಂಡುಕೊಂಡಿರುವ ನಟಿ ಪೂಜಾ ಹೆಗ್ಡೆ, ದಕ್ಷಿಣ ಭಾರತದ ಸಿನಿಮಾ ಗಳ ಬಗ್ಗೆ ಆಡಿರುವ ಮಾತು ವಿವಾದ ಸೃಷ್ಟಿಸಿದೆ.

ಸಿನಿಮಾ ಗುಣಮಟ್ಟದಲ್ಲಿ ಬಾಲಿವುಡ್‌ಗಿಂತಲೂ ಎಷ್ಟೋ ಪಾಲು ಮೇಲಾಗಿರುವ ದಕ್ಷಿಣ ಭಾರತದ ಸಿನಿಮಾಗಳೆಂದರೆ, ಬಾಲಿವುಡ್ಡಿಗರಿಗೆ ಸದಾ ಅಸಡ್ಡೆ ಮತ್ತು ಕ್ಷುಲ್ಲಕ ಭಾವ. ದಕ್ಷಿಣ ಭಾರತ ಸಿನಿಮಾ ಉದ್ಯಮದ ಬಗ್ಗೆ ಅದೇ ಕ್ಷುಲ್ಲಕ ಭಾವ ಪೂಜಾ ಹೆಗ್ಡೆಗೂ ಇರುವಂತಿದೆ. ಅವರ ಇತ್ತೀಚಿನ ಹೇಳಿಕೆ ಇದಕ್ಕೆ ಪುಷ್ಠಿ ನೀಡುತ್ತಿದೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಪೂಜಾ ಹೆಗ್ಡೆ, ದಕ್ಷಿಣ ಭಾರತ ಸಿನಿಮಾಗಳ ಬಗ್ಗೆ, ಇಲ್ಲಿನ ಪ್ರೇಕ್ಷಕರ ಮನಸ್ಥಿತಿ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ. ಪೂಜಾ ಮಾತುಗಳ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಹಾಗಿದ್ದರೆ ಪೂಜಾ ಮಾತನಾಡಿದ್ದು ಏನು?

'ದಕ್ಷಿಣ ಭಾರತೀಯರಿಗೆ ಹೊಕ್ಕಳು, ಸೊಂಟದ ಬಗ್ಗೆ ಹೆಚ್ಚು ಆಸಕ್ತಿ'

'ದಕ್ಷಿಣ ಭಾರತೀಯರಿಗೆ ಹೊಕ್ಕಳು, ಸೊಂಟದ ಬಗ್ಗೆ ಹೆಚ್ಚು ಆಸಕ್ತಿ'

ದಕ್ಷಿಣ ಭಾರತೀಯರಿಗೆ ಹೊಕ್ಕಳು ಹಾಗೂ ಸೊಂಟದ ಬಗ್ಗೆ ವಿಶೇಷ ಆಸಕ್ತಿ. ಸಿನಿಮಾಗಳಲ್ಲಿ ಸೊಂಟ, ಹೊಕ್ಕಳು ತೋರಿಸಿದರೆ ಸಾಕು ಎಂದು ಅನುಪಮ್ ಚೋಪ್ರಾ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ ನಟಿ ಪೂಜಾ ಹೆಗ್ಡೆ.

ಸೊಂಟಕ್ಕಿಂತಾ ಕಾಲುಗಳು ಸೆಕ್ಸಿ: ಪೂಜಾ

ಸೊಂಟಕ್ಕಿಂತಾ ಕಾಲುಗಳು ಸೆಕ್ಸಿ: ಪೂಜಾ

ಮುಂದುವರೆದು, 'ಅಲಾ ವೈಕುಂಟಪುರಂಲೊ ಸಿನಿಮಾದಲ್ಲಿ ಸೊಂಟದ ಬದಲಿಗೆ ನನ್ನ ಕಾಲು ನೋಡುತ್ತಾನೆ ಹೀರೋ. ಸೊಂಟಕ್ಕಿಂತಲೂ ಕಾಲುಗಳೇ ಹೆಚ್ಚು ಸೆಕ್ಸಿ ಎನಿಸುತ್ತದೆ. ಆದರೆ ಸಿನಿಮಾದಲ್ಲಿ ನನ್ನ ಪಾತ್ರ ಬಹಳ ಗಟ್ಟಿಯಾಗಿತ್ತು. ನನ್ನ ಕಾಲು ನೋಡುವ ನಾಯಕನಿಗೆ ತಲೆಯ ಮೇಲೆ ಜವಾಬ್ದಾರಿ ಇದ್ದರೆ ತಲೆ ಕೆಳಗೆ ಬಾಗುವುದಿಲ್ಲ ಎಂದು ಬುದ್ದಿ ಹೇಳುತ್ತೇನೆ ಆ ಸಿನಿಮಾದಲ್ಲಿ' ಎಂದಿದ್ದಾರೆ ಪೂಜಾ ಹೆಗ್ಡೆ.

ತಾಪ್ಸಿ ಪನ್ನು ಸಹ ಹೀಗೆಯೇ ಹೇಳಿದ್ದರು

ತಾಪ್ಸಿ ಪನ್ನು ಸಹ ಹೀಗೆಯೇ ಹೇಳಿದ್ದರು

ತೆಲುಗು ಸಿನಿಮಾದಿಂದ ನಟನೆ ಆರಂಭಿಸಿದ್ದ ದೆಹಲಿ ಹುಡುಗಿ ತಾಪ್ಸಿ ಪನ್ನು ಸಹ 'ದಕ್ಷಿಣ ಭಾರತ ಸಿನಿಮಾ ನಿರ್ದೇಶಕರಿಗೆ ಸೊಂಟ ಹಾಗೂ ಹೊಕ್ಕಳಿನ ಮೇಲೆ ವಿಶೇಷ ಪ್ರೇಮ' ಎಂದಿದ್ದರು. ಸಿನಿಮಾ ಒಂದರಲ್ಲಿ ಹಾಡಿನಲ್ಲಿ ಹೇಗೆ ತಮ್ಮ ಸೊಂಟದ ಮೇಲೆ ತೆಂಗಿನ ಕಾಯಿ ಎಸೆಯಲಾಗಿತ್ತು ಎಂದು ತಮಾಷೆಯಾಗಿ ವರ್ಣಿಸಿದ್ದರು ಒಂದು ಶೋ ನಲ್ಲಿ.

ದಕ್ಷಿಣದ ಸಿನಿಮಾಗಳಿಂದ ಹಣ, ಹೆಸರು

ದಕ್ಷಿಣದ ಸಿನಿಮಾಗಳಿಂದ ಹಣ, ಹೆಸರು

ಪೂಜಾ ಹೆಗ್ಡೆ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಪ್ರಾರಂಭವಾಗಿವೆ. ಉತ್ತರ ಭಾರತದ ನಟಿಯರು ದಕ್ಷಿಣದ ಸಿನಿಮಾಗಳಿಂದ ಹೆಸರು, ಹಣ ಗಳಿಸುತ್ತಾರೆ. ನಂತರ ದಕ್ಷಿಣದ ಸಿನಿಮಾಗಳನ್ನು ಆಡಿಕೊಳ್ಳುತ್ತಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

More from Filmibeat

English summary
Pooja Hegde said in an interview that South Indians have obsession with Midriff and Navels.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X