For Quick Alerts
  ALLOW NOTIFICATIONS  
  For Daily Alerts

  'ಚಿತ್ರರಂಗದ ಲೆಜೆಂಡ್ ಮಕ್ಕಳ ಜೊತೆ ಕೆಲಸ ಮಾಡಿದ ಐತಿಹಾಸಿಕ ಕ್ಷಣ': ಅಮಿತಾಬ್

  |

  ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ 77ನೇ ವಯಸ್ಸಿನಲ್ಲಿಯೂ ಸಖತ್ ಆಕ್ವೀಟ್ ಆಗಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿ ಇರುವ ಅಮಿತಾಬ್, ಇತ್ತೀಚಿಗೆ ಜಾಹಿರಾತು ಚಿತ್ರೀಕರಣವೊಂದರಲ್ಲಿ ಭಾಗಿಯಾಗಿದ್ದಾರೆ. ಅದೂ ದಕ್ಷಿಣ ಭಾರತದ ಸೂಪರ್ ಸ್ಟಾರ್ ಗಳ ಜೊತೆ ಎನ್ನುವುದೆ ಇಲ್ಲಿಯ ವಿಶೇಷ.

  ದಕ್ಷಿಣ ಭಾರತೀಯ ಸೂಪರ್ ಸ್ಟಾರ್ ಗಳಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಟಾಲಿವುಡ್ ಸ್ಟಾರ್ ನಾಗಾರ್ಜುನ್ ಮತ್ತು ಕಾಲಿವುಡ್ ಸ್ಟಾರ್ ನಟ ಪ್ರಭು ಜೊತೆಗೆ ಅಮಿತಾಬ್ ಮತ್ತು ಪತ್ನಿ ಜಯಾ ಬಚ್ಚನ್ ಕೂಡ ಜಾಹಿರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

  ಛೇ.. ಸುಧಾ ಮೂರ್ತಿಗೆ ಕೈಕೊಟ್ಟ 'ಈ' ಪ್ರಶ್ನೆ.! ಮನೆಯಲ್ಲಿ ನಂಗೆ ಏಟು ಬೀಳೋದು ಗ್ಯಾರೆಂಟಿ ಎಂದ ಅಮಿತಾಬ್.!ಛೇ.. ಸುಧಾ ಮೂರ್ತಿಗೆ ಕೈಕೊಟ್ಟ 'ಈ' ಪ್ರಶ್ನೆ.! ಮನೆಯಲ್ಲಿ ನಂಗೆ ಏಟು ಬೀಳೋದು ಗ್ಯಾರೆಂಟಿ ಎಂದ ಅಮಿತಾಬ್.!

  ಈ ಸ್ಟಾರ್ ನಟರು ಒಟ್ಟಿಗೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕ ಕಾಸ್ಟ್ಯೂಮ್ ನಲ್ಲಿ ಕಂಗೊಳಿಸುತ್ತಿದ್ದಾರೆ. ಈ ಫೋಟೋವನ್ನು ಅಮಿತಾಬ್ ಬಚ್ಚನ್ ಹಂಚಿಕೊಳ್ಳುವ ಜೊತೆಗೆ ಚಿತ್ರರಂಗದ ಮೂವರು ಲೆಜೆಂಡ್ಸ್ ಮಕ್ಕಳ ಜೊತೆ ಕೆಲಸ ಮಾಡಿದ ಐತಿಹಾಸಿಕ ಕ್ಷಣ ಎಂದು ಹೇಳಿದ್ದಾರೆ.

  ಈ ಬಗ್ಗೆ ಬರೆದುಕೊಂಡಿರುವ ಅಮಿತಾಬ್ "ಭಾರತೀಯ ಚಿತ್ರರಂಗದ 3 ಐಕಾನಿಕ್ ಲೆಜೆಂಡ್ಸ್, ಸೂಪರ್ ಸ್ಟಾರ್ ಮಕ್ಕಳ ಜೊತೆ ಕೆಲಸ ಮಾಡಿರುವುದು, ನನಗೆ ಮತ್ತು ಜಯಾಗೆ ಇದು ಐತಿಹಾಸಿಕ ಕ್ಷಣ. ಏನು ಗೌರವ, ಅಕ್ಕಿನೇನಿ ನಾಗೇಶ್ವರ್ ರಾವ್ ಪುತ್ರ ನಾಗಾರ್ಜುನ್, ಡಾ.ರಾಜ್ ಕುಮಾರ್ ಪುತ್ರ ಶಿವರಾಜ್ ಕುಮಾರ್ ಮತ್ತು ಶಿವಾಜಿ ಗಣೇಶನ್ ಪುತ್ರ ಪ್ರಭು" ಎಂದು ಬರೆದುಕೊಂಡಿದ್ದಾರೆ.

  South Superstars Are Meet Bollywood Actor Amitabh Bachchan

  ಇದೊಂದು ಜ್ಯೂವೆಲರಿ ಜಾಹಿರಾತು ಇದಾಗಿದ್ದು ಈ ಮೂವರು ದಕ್ಷಿಣ ಭಾರತದ ಸ್ಟಾರ್ ನಟರು ಬಿಗ್ ಬಿ ಅಮಿತಾಬ್ ಜೊತೆ ಕಾಣಿಸಿಕೊಳ್ಳುವುದು ಇದೇ ಮೊದಲೇನಲ್ಲ. ಆದರೆ ಈ ಬಾರಿ ಅಮಿತಾಬ್ ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದು, ಸಂತಸ ವ್ಯಕ್ತಪಡಿಸಿದ್ದಾರೆ.

  English summary
  South Superstar like Shivarajkumar, Nagarjuna and Prabhudeva are meet Bollywood actor Amitabh Bachchan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X